ಸ್ವಚ್ಛತೆಯಲ್ಲಿ ಸವಾಲೊಡ್ಡುವ ಅಡುಗೆ ಕೋಣೆ…

ಸ್ವಚ್ಛತೆಯಲ್ಲಿ ಸವಾಲೊಡ್ಡುವ ಅಡುಗೆ ಕೋಣೆ…

YK   ¦    Feb 12, 2018 04:51:03 PM (IST)
ಸ್ವಚ್ಛತೆಯಲ್ಲಿ ಸವಾಲೊಡ್ಡುವ ಅಡುಗೆ ಕೋಣೆ…

ಮನೆ ಸ್ವಚ್ಛವಾಗಿದ್ದಷ್ಟು ಮನೆಯಲ್ಲಿರುವ ಮನಸ್ಸುಗಳು ಉಲ್ಲಾಸದಿಂದ ಕೂಡಿರುತ್ತದೆ. ಸ್ವಚ್ಛತೆ ವಿಚಾರದಲ್ಲಿ ಅಡುಗೆ ಮನೆ ಪ್ರಧಾನವಾಗಿರುತ್ತದೆ. ಇನ್ನೂ ಮನೆ ಸ್ವಚ್ಛ ಮಾಡುವ ಗೃಹಿಣಿಯರಿಗೆ ಸದಾ ಸವಾಲೊಡ್ಡುವುದು ಅಡುಗೆ ಮನೆ.

ಅಡುಗೆ ಮನೆ ಸ್ವಚ್ಛ ಹಾಗೂ ಸುಂದರವಾಗಿ ಕಾಣುವಂತೆ ಮಾಡುವುದು ಸವಾಲಿನ ಕೆಲಸವೇ ಸರಿ. ಅಡುಗೆ ಮನೆ ಸುಂದರವಾಗಿ ಕಾಣಲು ಹೀಗೇ ಮಾಡಿರಿ.

ಬೇರೆ ಬೇರೆ ಪದಾರ್ಥ ಶೇಖರಿಸಿಡಲು ಬೇರೆ ಬೇರೆ ಬಣ್ಣದ ಡಬ್ಬವನ್ನು ಉಪಯೋಗಿಸಿ. ಇದರಿಂದ ಯಾವ ಡಬ್ಬದಲ್ಲಿ ಯಾವ ಪದಾರ್ಥ ಇದೆ ಎಂಬುವುದು ಬೇಗ ತಿಳಿಯುತ್ತದೆ ಹಾಗೂ ಶೆಲ್ಫ್ ಸುಂದರವಾಗಿಯೂ ಕಾಣುತ್ತದೆ. ಇನ್ನೂ ನೀವೇನಾದರೂ ಸ್ಟೀಲ್ ಡಬ್ಬಗಳನ್ನು ಬಳಸುವುದಾದರೆ ಅದರ ಒಳಗಡೆ ಯಾವ ಪದಾರ್ಥ ಇದೆ ಎಂಬುದನ್ನು ಒಂದು ಸ್ಟಿಕ್ಕರ್ ಬರೆದು ಡಬ್ಬದ ಮೇಲೆ ಅಂಟಿಸಿ.

ಇನ್ನೂ ಅಡುಗೆ ಕೋಣೆಯನ್ನು ಶುಚಿಯಾಗಿ ಇಟ್ಟುಕೊಳ್ಳಿ. ಒಣಬಟ್ಟೆಯಿಂದ ದೂಳನ್ನು ಹಾಗೂ ನೀರನ್ನು ಒರೆಸಿ. ಇನ್ನೂ ಆರೋಗ್ಯದಿಂದ ಕೂಡಿರಲು ಲಿಕ್ವಿಡ್ ಕ್ಲೀನರ್ ಗಳು ಬಳಸಿ. ಇದರಿಂದ ಬ್ಯಾಕ್ಟೀರಿಯಾಗಳು ದೂರವಾಗುತ್ತದೆ.

ಪಾತ್ರೆಗಳನ್ನು ಇಡಲು ಹಾಗೂ ಡಬ್ಬಗಳನ್ನು ಜೋಡಿಸಲು ಪ್ರತ್ಯೇಕ ಶೆಲ್ಫ್ ನ್ನು ಮಾಡಿ. ಇದರಿಂದ ಬೇಕಾದ ವಸ್ತುವನ್ನು ಹುಡುಕಲು ಸುಲಭವಾಗುತ್ತದೆ. ಕಾಳುಗಳು, ಉಪಾಹಾರದ ತಿಂಡಿಗಳು... ಹೀಗೆ ಒಂದೇ ರೀತಿಯ ವಸ್ತುಗಳನ್ನು ಒಂದೇ ಸ್ಥಳದಲ್ಲಿ ಜೋಡಿಸುವುದರಿಂದ ಹುಡುಕಾಟಕ್ಕೆ ಸುಲಭವಾಗುತ್ತದೆ.

ಇನ್ನೂ ಪದಾರ್ಥಗಳು ಇರುವ ಡಬ್ಬಗಳನ್ನು ಮರೆಯದೇ ಮುಚ್ಚಿಡಬೇಕು. ಇಲ್ಲದಿದ್ದರೆ ಡಬ್ಬಿಯೊಳಗೆ ಗಾಳಿ ತುಂಬುವುದರಿಂದ ಪದಾರ್ಥಗಳು ಹಾಳಾಗುತ್ತದೆ.

ಬೆಳಿಗ್ಗೆ ಅಥವಾ ಸಂಜೆ ಅಡುಗೆ ಆದ ಬಳಿಕ ಅಡುಗೆ ಕೋಣೆಯನ್ನು ನೀರಿನ್ನು ಬಳಸಿ ಒರೆಸಿ. ಇದರಿಂದ ನಿಮ್ಮ ಅಡುಗೆ ಕೋಣೆ ಸ್ವಚ್ಛವಾಗಿ, ಸುಂದರವಾಗಿ ಕಾಣುತ್ತದೆ. ಈ ರೀತಿಯಾಗಿ ಅಡುಗೆ ಕೋಣೆಯನ್ನು ಜೋಡಿಸಿರುವುದರಿಂದ ಆರೋಗ್ಯಕರವಾಗಿ ಬಾಳಲು ಸಾಧ್ಯವಾಗುತ್ತದೆ.