ಮಧ್ಯಾಹ್ನದ ಊಟಕ್ಕೆ ರುಚಿ-ಶುಚಿಯ ಮಟನ್ ಫ್ರೈ

ಮಧ್ಯಾಹ್ನದ ಊಟಕ್ಕೆ ರುಚಿ-ಶುಚಿಯ ಮಟನ್ ಫ್ರೈ

LK   ¦    Apr 17, 2019 12:00:58 PM (IST)
ಮಧ್ಯಾಹ್ನದ ಊಟಕ್ಕೆ ರುಚಿ-ಶುಚಿಯ ಮಟನ್ ಫ್ರೈ

ಮಟನ್ ಫ್ರೈನ್ನು ಬೇರೆ ಬೇರೆ ವಿಧಾನಗಳಿಂದ ಮಾಡಬಹುದಾಗಿದೆ. ಅದರಲ್ಲಿ ಇದು ಕೂಡ ಒಂದು ಬಗೆಯದಾಗಿದ್ದು, ಸುಲಭವಾಗಿ ಮಾಡಬಹುದು ಮತ್ತು ರುಚಿಯಾಗಿರುತ್ತದೆ. ಇದನ್ನು ಮಾಡುವುದು ಹೇಗೆ ಮತ್ತು ಇದಕ್ಕೆ ಏನೆಲ್ಲ ಪದಾರ್ಥಗಳು ಬೇಕು ಎಂಬ ವಿವರಗಳು ಇಲ್ಲಿವೆ.

ಬೇಕಾಗುವ ಪದಾರ್ಥಗಳು

ಕುರಿಮಾಂಸ- 250 ಗ್ರಾಂ

ಈರುಳ್ಳಿ- ಒಂದು

ಕೊತ್ತಂಬರಿ ಸೊಪ್ಪು- ಸ್ವಲ್ಪ

ಟೊಮ್ಯಾಟೋ- ಒಂದು

ಖಾರದ ಪುಡಿ- ಒಂದು ಟೀ ಚಮಚ

ಎಣ್ಣೆ-ಒಂದೆರಡು ಚಮಚ

ಉಪ್ಪು-ರುಚಿಗೆ ತಕ್ಕಷ್ಟು

ಗರಂಮಸಾಲೆ- ಒಂದು ಚಮಚ

ಅರಿಶಿನಪುಡಿ- ಒಂದು ಟೀ ಚಮಚ


ಮಾಡುವ ವಿಧಾನ ಹೀಗಿದೆ

ಮೊದಲಿಗೆ ಮಾಂಸವನ್ನು ಚಿಕ್ಕ ಚೂರುಗಳನ್ನಾಗಿ ಮಾಡಿ ಅದನ್ನು ಸ್ವಲ್ಪ ಉಪ್ಪು ಮತ್ತು ನೀರು ಹಾಕಿ ಚೆನ್ನಾಗಿ ಚೆನ್ನಾಗಿ ಬೇಯಿಸಿಟ್ಟುಕೊಳ್ಳಬೇಕು. ಆ ನಂತರ ಒಂದು ಅಗಲವಾದ ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಿಸಿ ಅದಕ್ಕೆ ಹಚ್ಚಿದ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಹುರಿಯಬೇಕು. ಅದು ಕಂದು ಬಣ್ಣಕ್ಕೆ ತಿರುಗಿದ ಬಳಿಕ ಅದಕ್ಕೆ ಟೋಮ್ಯಾಟೋ ಚೂರನ್ನು ಹಾಕಿ ಹುರಿಯಬೇಕು. ಆ ನಂತರ ಮಾಂಸವನ್ನು ಹಾಕಿ ಅದಕ್ಕೆ ಖಾರದಪುಡಿ, ಅರಶಿನ ಪುಡಿಯನ್ನು ಹಾಕಿ ಚೆನ್ನಾಗಿ ತಿರುಗಿಸಿಕೊಳ್ಳಬೇಕು. ಉಪ್ಪು ಅಗತ್ಯವಿದ್ದರೆ ಹಾಕಬಹುದು. ಬಳಿಕ ಗರಂ ಮಸಾಲೆ ಹಾಗೂ ಕೊತ್ತಂಬರಿ ಸೊಪ್ಪನ್ನು ಉದುರಿಸಿ ಚೆನ್ನಾಗಿ ತಿರುವಿ ತೆಗೆಯಬೇಕು. ನಂತರ ಸೇವಿಸಬಹುದಾಗಿದೆ. ಅಗತ್ಯವಿದ್ದರೆ ನಿಂಬೆ ರಸವನ್ನು ಮಾಂಸದ ಮೇಲೆ ಹಾಕಿಕೊಳ್ಳಬಹುದು.