ಟೊಮೇಟೊ ಬೆಳ್ಳುಳ್ಳಿ ಚಟ್ನಿ

ಟೊಮೇಟೊ ಬೆಳ್ಳುಳ್ಳಿ ಚಟ್ನಿ

Dec 15, 2016 07:44:51 AM (IST)

ಹಲವು ವಿಧದ ಚಟ್ನಿಗಳನ್ನು ತಯಾರಿಸಿ ಸವಿಯಬಹುದು. ಆದರೆ ಟೊಮೇಟೊ ಚಟ್ನಿಯ ರುಚಿಯೇ ಬೇರೆ. ಟೊಮೇಟೋ ಬೆಳ್ಳುಳ್ಳಿ ಚಟ್ನಿಯಿಂದ ದೋಸೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಬನ್ನಿ ನಾವು ಇವತ್ತು ಟೊಮೇಟೊ ಬೆಳ್ಳುಳ್,ಳಿ ಚಟ್ನಿ ತಯಾರಿಸಿ ಸವಿಯೋಣ.
ಬೇಕಾಗುವ ಸಾಮಾಗ್ರಿಗಳು
*ಟೊಮೇಟೊ - 1 ಕಪ್ (ಸಣ್ಣದಾಗಿ ಹೆಚ್ಚಿರುವಂತಹದ್ದು)
*ಬೆಳ್ಳುಳ್ಳಿ - 1 ಚಮಚ (ಸಣ್ಣದಾಗಿ ಹೆಚ್ಚಿದ್ದು)
*ಎಣ್ಣೆ - 1 ಚಮಚ
*ಸ್ಪ್ರಿಂಗ್ ಈರುಳ್ಳಿ - 1/4 ಕಪ್
*ಕಾಶ್ಮೀರಿ ಕೆಂಪು ಮೆಣಸು - 2 (ನೀರಿನಲ್ಲಿ ನೆನೆಸಿ ಹೆಚ್ಚಿದ್ದು)
*ಟೊಮೇಟೊ ಕೆಚಪ್ - 1 ಚಮಚ
*ಸ್ಪ್ರಿಂಗ್ ಈರುಳ್ಳಿ (ಹಸಿರು) - 1 ಚಮಚ (ಚಿಕ್ಕದಾಗಿ ಹೆಚ್ಚಿದ್ದು)
*ಕೊತ್ತಂಬರಿ - 1 ಚಮಚ (ಚಿಕ್ಕದಾಗಿ ಕತ್ತರಿಸಿದ್ದು)
*ಉಪ್ಪು ರುಚಿಗೆ ತಕ್ಕಷ್ಟು   

ಮಾಡುವ ವಿಧಾನ :  ಮೊದಲು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ ಮತ್ತು ಸ್ಪ್ರಿಂಗ್ ಈರುಳ್ಳಿ ಅನ್ನು ಇದಕ್ಕೆ ಹಾಕಿ. ಚೆನ್ನಾಗಿ ಹುರಿದುಕೊಳ್ಳಿ. ಇದಕ್ಕೆ ಬೆಳ್ಳುಳ್ಳಿಯನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ, ಆದರೆ ಹೆಚ್ಚು ಹುರಿದುಕೊಳ್ಳಬೇಡಿ. ಇಲ್ಲದಿದ್ದರೆ ಚಟ್ನಿ ಕಹಿಯಾಗುತ್ತದೆ. ಈಗ, ನೆನೆಸಿದ ಕೆಂಪು ಮೆಣಸನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರ ಮಾಡಿ. ನಿಮಗೆ ಟೊಮೇಟೊ ಬೇಯಲು ನೀರು ಬೇಕು ಎಂದಾದಲ್ಲಿ ನೀರು ಸೇರಿಸಿ. ಮತ್ತು ಹೆಚ್ಚಿನ ಉರಿಯಲ್ಲಿ ಬೇಯಿಸಿ.  ಇನ್ನು ಟೊಮೇಟೊವನ್ನು ಬೇಯಿಸುವಾಗ ಅದನ್ನು ಹಿಸುಕಲು ಮರೆಯದಿರಿ. ಟೊಮೇಟೊ ಕೆಚಪ್ ಮತ್ತು ಉಪ್ಪು ಹಾಕಿ. ಟೊಮೇಟೊ ಕೆಚಪ್ ಚಟ್ನಿಗೆ ಉತ್ತಮ ಸ್ವಾದವನ್ನು ಒದಗಿಸಲಿದೆ. ಇಷ್ಟೆಲ್ಲಾ ಆದನಂತರ, ಎಲ್ಲವನ್ನೂ ಮಿಶ್ರ ಮಾಡಿಕೊಳ್ಳಿ ಮತ್ತು ಸ್ಟವ್ ಆಫ್ ಮಾಡಿ. ಚಟ್ನಿ ಸಂಪೂರ್ಣವಾಗಿ ತಣ್ಣಗಾಗಿದೆ ಎಂದಾದಲ್ಲಿ, ಇದಕ್ಕೆ ಸ್ಪ್ರಿಂಗ್ ಈರುಳ್ಲಿ ಹಾಕಿ ಮತ್ತು ಕೊತ್ತಂಬರಿ ಸೇರಿಸಿ. ಟೊಮೇಟೊ ಬೆಳ್ಳುಳ್ಳಿ ಚಟ್ನಿ ಸೇವಿಸಲು ಸಿದ್ಧವಾಗಿದೆ.