ಆರೋಗ್ಯ ನೀಡುವ ಮೊಳಕೆಕಾಳು ಸಾಂಬಾರ್

ಆರೋಗ್ಯ ನೀಡುವ ಮೊಳಕೆಕಾಳು ಸಾಂಬಾರ್

LK   ¦    Jun 07, 2018 12:14:19 PM (IST)
ಆರೋಗ್ಯ ನೀಡುವ ಮೊಳಕೆಕಾಳು ಸಾಂಬಾರ್

ಸಾಮಾನ್ಯವಾಗಿ ಕಾಳುಗಳು ಆರೋಗ್ಯಕ್ಕೆ ಪೋಷಕವಾಗಿರುತ್ತವೆ. ಆದರೆ ಕೆಲವೊಮ್ಮೆ ಗ್ಯಾಸ್ಟ್ರಿಕ್ ನಿಂದ ಬಳಲುವವರಿಗೆ ಕೆಲವೊಮ್ಮೆ ತೊಂದರೆ ಕೊಡುತ್ತದೆ. ಇಂತಹ ಕಾಳುಗಳನ್ನು ಮೊಳಕೆ ಬರುವಂತೆ ಮಾಡಿ ವಿವಿಧ ಪದಾರ್ಥಗಳನ್ನು ಮಾಡಿ ಸೇವಿಸುವುದು ಒಳ್ಳೆಯದು.

ಮೊಳಕೆ ಕಾಳು ಸಾರುಗಳನ್ನು ಎಲ್ಲರೂ ಮಾಡುತ್ತಾರೆ. ಮಾಡುವ ವಿಧಾನಗಳು ಒಬ್ಬರಿಂದ ಮತ್ತೊಬ್ಬರಿಗೆ ಸ್ವಲ್ಪ ಬದಲಾವಣೆಯಾಗಿರಬಹುದು. ರುಚಿಯಾಗಿ ಮೊಳಕೆ ಕಾಳುಗಳನ್ನು ಸಾರು ಮಾಡಬೇಕಾದರೆ ಏನು ಮಾಡಬೇಕು ಎಂಬುದು ಇಲ್ಲಿದೆ.

ಮೊಳಕೆ ಸಾರು ಮಾಡೋದಕ್ಕೆ ಬೇಕಾಗುವ ಪದಾರ್ಥಗಳು

ಮೊಳಕೆ ಕಾಳುಗಳು

ಕಾಯಿ

ಖಾರದಪುಡಿ

ಈರುಳ್ಳಿ

ಬೆಳ್ಳುಳ್ಳಿ

ಶುಂಠಿ

ಟೊಮೆಟೊ

ಕರಿಬೇವಿನ ಸೊಪ್ಪು

ಬದನೆಕಾಯಿ

ಆಲೂಗೆಡ್ಡೆ

ಉಪ್ಪು

ಮಾಡುವ ವಿಧಾನ ಹೀಗಿದೆ...

ಮೊದಲಿಗೆ ಕಾಯಿ, ಖಾರದಪುಡಿ, ಈರುಳಿ, ಬೆಳ್ಳುಳ್ಳಿ, ಶುಂಠಿ, ಟೋಮ್ಯಾಟೋ ಎಲ್ಲವನ್ನೂ ಸಾಂಬಾರು ಮಾಡುವ ಪ್ರಮಾಣಕ್ಕೆ ತಕ್ಕಂತೆ ಅಂದಾಜು ಲೆಕ್ಕದಲ್ಲಿ ಹಾಕಿ ಅವುಗಳನ್ನು ಮಿಕ್ಸಿಯಲ್ಲಿ ರುಬ್ಬಿಟ್ಟುಕೊಳ್ಳಬೇಕು.

ಇನ್ನೊಂದೆಡೆ ಆಲೂಗೆಡ್ಡೆ, ಬದನೆಕಾಯಿನ್ನು ಕತ್ತರಿಸಿಟ್ಟುಕೊಳ್ಳಬೇಕು. ಕುಕ್ಕರ್ ನಲ್ಲಿ ಸ್ವಲ್ಪ ಎಣ್ಣೆ ಹಾಕಿ ಕಾದ ಬಳಿಕ ಸಾಸಿವೆ ಹಾಕಿ ಅದು ಸಿಡಿದ ಬಳಿಕ ಕತ್ತರಿಸಿದ ಸ್ವಲ್ಪ ಈರುಳ್ಳಿ, ಒಣ ಮೆಣಸಿನ ಕಾಯಿ, ಕರಿಬೇವು ಸೊಪ್ಪು ಹಾಕಿ ಚೆನ್ನಾಗಿ ಬಾಡಿಸಬೇಕು. ನಂತರ ರುಬ್ಬಿರುವ ಮಸಾಲೆ ಪದಾರ್ಥವನ್ನು ಹಾಕಿ ಅದಕ್ಕೆ ಮೊಳಕೆಕಾಳು, ಆಲೂಗೆಡ್ಡೆ, ಬದನೆಕಾಯಿ ಮತ್ತು ಟೊಮೆಟೊ ಹಾಕಿ ಸ್ವಲ್ಪ ಹುಳಿ, ರುಚಿಗೆ ತಕ್ಕಂತೆ ಉಪ್ಪು ಹಾಕಿ ಅಗತ್ಯದಷ್ಟು ನೀರು ಹಾಕಿ ಸುಮಾರು ಆರು ವಿಶಲ್ ಕೂಗಿಸಿ ತೆಗೆದು ರುಚಿ ನೋಡಿ ಉಪ್ಪು ಅಥವಾ ಹುಳಿ ಕಡಿಮೆಯಾಗಿದ್ದರೆ ಮತ್ತೆ ಹಾಕಿಕೊಂಡು ಉಪಯೋಗಿಸಬಹುದು.