ಚಿಕನ್ ರೋಸ್ಟ್ ಮಸಾಲ ರುಚಿ ನೋಡಿ..

ಚಿಕನ್ ರೋಸ್ಟ್ ಮಸಾಲ ರುಚಿ ನೋಡಿ..

LK   ¦    Jan 18, 2019 02:29:19 PM (IST)
ಚಿಕನ್ ರೋಸ್ಟ್ ಮಸಾಲ ರುಚಿ ನೋಡಿ..

ಚಿಕನ್‍ನಿಂದ ಹಲವು ರೀತಿಯ ಖಾದ್ಯಗಳನ್ನು ಮಾಡಬಹುದಾಗಿದ್ದು, ಅದರಲ್ಲಿ ಚಿಕನ್ ರೋಸ್ಟ್ ಮಸಾಲ ಒಂದಾಗಿದ್ದು,  ಮಾಂಸ ಪ್ರಿಯರಿಗಂತು ಇದು ಸಕತ್ ಇಷ್ಟವಾಗುತ್ತದೆ. 

ಇಷ್ಟಕ್ಕೂ ಚಿಕನ್ ರೋಸ್ಟ್ ಮಸಾಲ ಮಾಡಲು ಬೇಕಾಗುವ ಪದಾರ್ಥಗಳು ಮತ್ತು ಮಾಡುವ ವಿಧಾನ ಇಲ್ಲಿದೆ. 

ಬೇಕಾಗುವ ಪದಾರ್ಥಗಳು ಹೀಗಿವೆ 

ಚಿಕನ್- 1 ಕೆಜಿ 

ಈರುಳ್ಳಿ- 1(ದೊಡ್ಡದು) 

ಬೆಳ್ಳುಳ್ಳಿ-ಶುಂಠಿ ಪೇಸ್ಟ್ – 1 ಚಮಚ 

ಮೆಣಸುಪುಡಿ-1ಚಮಚ 

ಏಲಕ್ಕಿ, ಲವಂಗ, ದಾಲ್ಚಿನ್ನಿ- ಸ್ವಲ್ಪ 

ಉಪ್ಪು- ರುಚಿಗೆ ತಕ್ಕಷ್ಟು 

ಸೋಯಾಸಾಸ್-1ಚಮಚ 

ಕೊತ್ತಂಬರಿ ಸೊಪ್ಪು- ಸ್ವಲ್ಪ 

ಚಿಕನ್ ರೋಸ್ಟ್ ಮಸಾಲ ಮಾಡುವ ವಿಧಾನ ಹೀಗಿದೆ.. 

ಕೋಳಿ ಮಾಂಸದ ಆಯ್ದ ಭಾಗದ ತುಂಡುಗಳನ್ನು ತೆಗೆದುಕೊಂಡು(ಚರ್ಮವನ್ನು ತೆಗೆದ) ಅದನ್ನು ಫೋಕ್‍ನಿಂದ ಚುಚ್ಚಿಡಬೇಕು. ಇನ್ನೊಂದೆಡೆ ಈರುಳ್ಳಿಯನ್ನು ಸಣ್ಣದಾಗಿ ಹಚ್ಚಬೇಕು ಅದಕ್ಕೆ ಬೆಳ್ಳುಳ್ಳಿ ಶುಂಠಿ ಪೇಸ್ಟ್ ಸೇರಿದಂತೆ ಎಲ್ಲ ಮಸಾಲೆಯನ್ನು ಸೇರಿಸಿ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಬೇಕು. ಬಳಿಕ ರುಚಿ ನೋಡಿಕೊಂಡು ಉಪ್ಪು ಹಾಕಬೇಕು. ಈ ಮಸಾಲೆಯನ್ನು ಕೋಳಿ ಮಾಂಸದೊಂದಿಗೆ ಬೆರೆಸಿ ಸ್ವಲ್ಪ ಹೊತ್ತು ಇಡಬೇಕು. 

ಆ ನಂತರ ಒಂದು ಪಾತ್ರೆಗೆ ಹಾಕಿ ನಿಧಾನ ಉರಿಯಲ್ಲಿ ಬೇಯಿಸಬೇಕು. ಆಗ ಚಿಕನ್‍ನಲ್ಲಿರುವ ನೀರು ಬಿಟ್ಟು ಬೇಯುತ್ತದೆ. ಅದು ತಳಹಿಡಿಯದಂತೆ ನೋಡಿಕೊಳ್ಳಬೇಕು ಬೆಂದ ಬಳಿಕ ತಾವಾದಲ್ಲಿ ಎಣ್ಣೆ ಹಾಕಿ ಅದರ ಮೇಲೆ ಚಿಕನ್ ತುಂಡುಗಳನ್ನಿಟ್ಟು ನಿಧಾನ ಉರಿಯಲ್ಲಿ ಬೇಯಿಸಬೇಕು ಅದು ಕಂದು ಬಣ್ಣಕ್ಕೆ ತಿರುಗಿದ  ಬಳಿಕ ತೆಗೆದು ಅದರ ಮೇಲೆ ಕೊತ್ತಂಬರಿ ಸೊಪ್ಪನ್ನು ಉದುರಿಸಿ. ಸೇವಿಸುವಾಗ ಬೇಕಾದರೆ ನಿಂಬೆ ರಸವನ್ನು ಹಾಕಿಕೊಳ್ಳಬಹುದು.