ಸಿಂಪಲ್ ನೀರುದೋಸೆ ಮಾಡೋದು ಹೇಗೆ?

ಸಿಂಪಲ್ ನೀರುದೋಸೆ ಮಾಡೋದು ಹೇಗೆ?

LK   ¦    Apr 05, 2018 11:38:59 AM (IST)
ಸಿಂಪಲ್ ನೀರುದೋಸೆ ಮಾಡೋದು ಹೇಗೆ?

ನೀರು ದೋಸೆ ಎಲ್ಲರೂ ಇಷ್ಟಪಡುವ ಪದಾರ್ಥ. ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಇದನ್ನು ಬೆಳಗ್ಗಿನ ಉಪಹಾರಕ್ಕೆ ಮಾಡುತ್ತಾರೆ. ನೀರುದೋಸೆ ಕಾಯಿಹಾಲು, ನೀರು ದೋಸೆ, ಕೋಳಿಸಾರು ಉತ್ತಮ ಕಾಂಬಿನೇಷನ್.

ಇಂತಹ ನೀರು ದೋಸೆಯನ್ನು ಬೇರೆ ಬೇರೆ ರೀತಿಯಲ್ಲಿ ಮಾಡಲಾಗುತ್ತದೆ. ಆದರೆ ಸುಲಭವಾಗಿ ಮತ್ತು ರುಚಿಕಟ್ಟಾಗಿ ಮಾಡಬಹುದಾದ ವಿಧಾನವನ್ನು ಹೆಚ್ಚಿನವರು ಅಳವಡಿಸಿಕೊಂಡಿದ್ದು, ಇದು ಯಾರು ಬೇಕಾದರೂ ಮಾಡಲು ಸಾಧ್ಯವಾಗಿದೆ.

ಬೇಕಾಗುವ ಪದಾರ್ಥ

ದೋಸೆ ಅಕ್ಕಿ- ಒಂದು ಕಪ್

ರುಚಿಗೆ ತಕ್ಕಷ್ಟು ಉಪ್ಪು

ಎಣ್ಣೆ

ನೀರು ದೋಸೆ ಮಾಡುವ ವಿಧಾನ ಹೀಗಿದೆ.

ಬೆಳಗ್ಗಿನ ಉಪಹಾರಕ್ಕೆ ನೀರು ದೋಸೆ ಮಾಡಬೇಕೆಂದುಕೊಳ್ಳುವವರು ಹಿಂದಿನ ದಿನ ರಾತ್ರಿ ಅಕ್ಕಿಯನ್ನು ನೀರಿನಲ್ಲಿ ನೆನೆಯಲು ಹಾಕಬೇಕು. ಬೆಳಿಗ್ಗೆ ಮಿಕ್ಕಿಯಲ್ಲಿ ಹಾಕಿ ನುಣ್ಣಗೆ ರುಬ್ಬಬೇಕು ಬಳಿಕ ಸಂಪುಣಕ್ಕೆ ನೀರು ಹಾಕಿ ತೆಳ್ಳಗೆ ಮಾಡಿಕೊಳ್ಳಬೇಕು.

ಆ ನಂತರ ಕಾವಲಿಯನ್ನು ಒಲೆ ಮೇಲೆ ಇಟ್ಟುಕೊಂಡು ಅದು ಕಾದ ಬಳಿಕ ಎಣ್ಣೆಯುಜ್ಜಿ ಕಾವಲಿ ಪೂರ್ತಿ ಬರುವಂತೆ ದೋಸೆ ಹೊಯ್ಯಬೇಕು. ಒಂದೆರಡು ನಿಮಿಷಗಳ ಮುಚ್ಚಿ ಬೇಯಿಸಬೇಕು.

ಬಳಿಕ ದೋಸೆಯನ್ನು ಕಾವಲಿಯಲ್ಲಿಯೇ ಮಡಚಿ ತೆಗೆದರೆ ದೋಸೆ ರೆಡಿ. ಆ ನಂತರ ನಿಮ್ಮಿಷ್ಟದ ಖಾದ್ಯದೊಂದಿಗೆ ಸೇವಿಸಬಹುದಾಗಿದೆ.