ಮುಂಜಾನೆಗೆ ಬಿಸಿಬಿಸಿ ಸೋಯಾ ಮಸಾಲೆ ದೋಸೆ  

ಮುಂಜಾನೆಗೆ ಬಿಸಿಬಿಸಿ ಸೋಯಾ ಮಸಾಲೆ ದೋಸೆ  

LK   ¦    Apr 02, 2019 08:40:28 AM (IST)
ಮುಂಜಾನೆಗೆ ಬಿಸಿಬಿಸಿ ಸೋಯಾ ಮಸಾಲೆ ದೋಸೆ   

ಏನೇ ಹೇಳಿ ಹೆಚ್ಚಿನವರು ಬೆಳಗ್ಗಿನ ತಿಂಡಿಗೆ ದೋಸೆಯನ್ನು ಇಷ್ಟಪಡುತ್ತಾರೆ. ಜತೆಗೆ ದೋಸೆಯಲ್ಲಿ ನೂರಾರು ಬಗೆಯ ದೋಸೆಗಳನ್ನು ತಯಾರಿಸಲು ಸಾಧ್ಯವಿರುವ ಕಾರಣ ಜನರಿಗೆ ಇಷ್ಟವಾಗುತ್ತದೆ.

ಇಂತಹ ದೋಸೆಗಳ ಪೈಕಿ ಸೋಯಾ ಮಸಾಲೆ ದೋಸೆಯೂ ಒಂದಾಗಿದೆ. ಸೋಯಾ ಮಸಾಲೆ ದೋಸೆಯನ್ನು ತಯಾರಿಸುವುದು ಕೂಡ ಸುಲಭವೇ. 

ಬೇಕಾಗುವ ಪದಾರ್ಥಗಳು 

ಅಕ್ಕಿಹಿಟ್ಟು- ಅರ್ಧ ಕಪ್ 

ಸೋಯಾಹಿಟ್ಟು- ಒಂದು ಕಪ್ 

ಟೊಮ್ಯಾಟೋ ಪೇಸ್ಟ್- ಒಂದು ಚಮಚ 

ಹಸಿಮೆಣಸಿನಕಾಯಿ ಪೇಸ್ಟ್- ಒಂದು ಚಮಚ 

ದನಿಯಾಪುಡಿ- ಒಂದು ಚಮಚ 

ಜೀರಿಗೆ ಪುಡಿ- ಅರ್ಧ ಚಮಚ 

ಕೊತ್ತಂಬರಿ ಸೊಪ್ಪು- ಸ್ವಲ್ಪ 

ಉಪ್ಪು- ರುಚಿಗೆ ತಕ್ಕಂತೆ 

ಸಾಸಿವೆ- ಸ್ವಲ್ಪ 

ತುಪ್ಪ- ಸ್ವಲ್ಪ 

ಸೋಯಾ ಮಸಾಲೆ ದೋಸೆ ಮಾಡುವ ವಿಧಾನ ಹೀಗಿದೆ. 

ಮೊದಲಿಗೆ ಮೆಣಸಿನಕಾಯಿ ಮತ್ತು ಟೊಮ್ಯಾಟೋವನ್ನು ಪೇಸ್ಟ್ ಮಾಡಿಕೊಳ್ಳಿ.  ನಂತರ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಅಕ್ಕಿಹಿಟ್ಟು, ಸೋಯಾ ಹಿಟ್ಟು, ಮೆಣಸಿನಕಾಯಿ ಮತ್ತು ಟೊಮ್ಯಾಟೋವನ್ನು ಪೇಸ್ಟ್, ಉಪ್ಪು ಸೇರಿದಂತೆ ಎಲ್ಲ ಪದಾರ್ಥಗಳನ್ನು ಹಾಕಬೇಕು. ಬಳಿಕ ಅಗತ್ಯ ನೀರು ಹಾಕಿ ಚೆನ್ನಾಗಿ ಗಂಟುಗಳಾಗದಂತೆ ಕಲೆಸಬೇಕು. ಈ ಹಿಟ್ಟಿಗೆ ಇನ್ನೊಂದು ಚಿಕ್ಕ ಬಾಣಲೆಯಲ್ಲಿ ತುಪ್ಪ ಹಾಕಿ ಕಾದನಂತರ ಅದಕ್ಕೆ ಸಾಸಿವೆ ಹಾಕಿ ಸಿಡಿಸಿ ಸೇರಿಸಿ ತಿರುಗಿಸಬೇಕು. 

ಇದಾದ ಬಳಿಕ ದೋಸೆ ಹಂಚಿನಲ್ಲಿ ಒಂದು ಸೌಟು ಹಿಟ್ಟನ್ನು ಹೊಯ್ಯಬೇಕು. ಅದರ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ ಎಣ್ಣೆ ಸವರಿ. ಇನ್ನೊಂದು ಬದಿಗೆ ತಿರುವಿ ಹಾಕಿ ಚೆನ್ನಾಗಿ ಬೇಯಿಸಿ ನಂತರ ತೆಗೆದು ಬಿಸಿಯಾಗಿದ್ದಾಗಲೇ ಸೇವಿಸಿ.