ಆಹಾ ಕ್ಯಾಪ್ಸಿಕಂ ಮಸಾಲೆ ರುಚಿಯೇ...

ಆಹಾ ಕ್ಯಾಪ್ಸಿಕಂ ಮಸಾಲೆ ರುಚಿಯೇ...

Oct 13, 2017 01:52:19 PM (IST)
ಆಹಾ ಕ್ಯಾಪ್ಸಿಕಂ ಮಸಾಲೆ ರುಚಿಯೇ...

ಕೆಲವೊಮ್ಮೆ ಮನೆಯಲ್ಲಿ ಅದೇ ಅದೇ ಖಾದ್ಯ ತಿಂದು ಬೋರ್ ಹೊಡೆಸುವುದಿದೆ. ಇಂತಹ ಸಮಯದಲ್ಲಿ ವಿಶೇಷವಾಗಿರುವುದು ಏನಾದರೂ ಮಾಡಬೇಕು. ಇದರಿಂದ ಬಾಯಿಗೂ ಒಳ್ಳೆಯ ರುಚಿ ಮತ್ತು ತಿನ್ನುವವರು ಕೂಡ ನಿಮ್ಮ ಅಡುಗೆ ಬಗ್ಗೆ ಪ್ರಶಂಸೆಯ ಸುರಿಮಳೆಗೈಯುವರು. ಈ ಲೇಖನದಲ್ಲಿ ಹುರಿದ ನೆಲಗಡಲೆ ಮತ್ತು ಎಳ್ಳು ಹಾಕಿ ಕ್ಯಾಪ್ಸಿಕಮ್(ದೊಣ್ಣೆ ಮೆಣಸು)ನ ಮಸಾಲೆ ಮಾಡುವುದನ್ನು ತಿಳಿಯಿರಿ.

ಎಷ್ಟು ಮಂದಿಗೆ ಬಡಿಸಬಹುದು: 4
ತಯಾರಿಸುವ ಸಮಯ: 5 ನಿಮಿಷ
ಅಡುಗೆ ಸಮಯ: 20 ನಿಮಿಷ

ಕ್ಯಾಪ್ಸಿಕಂ ಮಸಾಲೆಗೆ ಬೇಕಾಗುವ ಸಾಮಗ್ರಿಗಳು
1 ಕಪ್ ಚೌಕಾಕಾರವಾಗಿ ಕತ್ತರಿಸಿದ ತುಂಡು ಮಾಡಿದ ಹಸಿರು ಕ್ಯಾಪ್ಸಿಕಂ, ಕೆಂಪು ಮತ್ತು ಹಳದಿ ಬೆಲ್ ಪೆಪ್ಪರ್.
1 ಟೊಮೆಟೋ(ರಸ)
1 ಈರುಳ್ಳಿ(ಚೌಕಾಕಾರದಲ್ಲಿ ಕತ್ತರಿಸಿರುವುದು)
1 ಈರುಳ್ಳಿ(ಸಣ್ಣಗೆ ಕತ್ತರಿಸಿರುವುದು)
1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್
2 ಚಮಚ ಎಣ್ಣೆ
1 ಚಮಚ ಕೆಂಪು ಮೆಣಸಿನ ಹುಡಿ
1 ಚಮಚ ಅರಶಿನ ಹುಡಿ
1 ಚಮಚ ಕೊತ್ತಂಬರಿ ಹುಡಿ
1 ಚಮಚ ಗರಂ ಮಸಾಲ ಹುಡಿ
3 ಚಮಚ ಎಳ್ಳು
3 ಚಮಚ ನೆಲಗಡಲೆ
ರುಚಿಗೆ ತಕ್ಕಷ್ಟು ಉಪ್ಪು

ಕ್ಯಾಪ್ಸಿಕಂ ಮಸಾಲ ತಯಾರಿಸುವುದು ಹೇಗೆ?
*ನೆಲಗಡಲೆ ಮತ್ತು ಎಳ್ಳನ್ನು ಸರಿಯಾಗಿ ಹುರಿಯಿಡಿ. ಬಳಿಕ ರುಬ್ಬಿಕೊಂಡು ಪೇಸ್ಟ್ ಮಾಡಿ ಬದಿಗಿಡಿ.
*ಚೌಕಾಕಾರವಾಗಿ ತುಂಡರಿಸಿರುವ ಬೆಲ್ ಪೆಪ್ಪರ್, ಈರುಳ್ಳಿಯನ್ನು ಸ್ವಲ್ಪ ಹುರಿದು ಬದಿಗಿಟ್ಟುಕೊಳ್ಳಿ.
*ಇದೇ ತವಾಗೆ ಸಣ್ಣಗೆ ಕತ್ತರಿಸಿರುವ ಈರುಳ್ಳಿ ಹಾಕಿ. ಇದು ಕಂದು ಬಣ್ಣಕ್ಕೆ ತಿರುಗುವ ತನಕ ಹುರಿಯಿರಿ.
* ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಟೊಮೆಟೋ ರಸ ಹಾಕಿ. ಸರಿಯಾಗಿ ಕಳಸಿ.
* ಈಗ ಕೆಂಪು ಮೆಣಸಿನ ಹುಡಿ, ಅರಶಿನ ಹುಡಿ, ಕೊತ್ತಂಬರಿ ಹುಡಿ, ಗರಂ ಮಸಾಲ ಹುಡಿ ಮತ್ತು ರುಚಿಗೆ ಬೇಕಾದಷ್ಟು ಉಪ್ಪು ಹಾಕಿ.
* ಇದಕ್ಕೆ ಎಳ್ಳು ಮತ್ತು ನೆಲಗಡಲೆ ಪೇಸ್ಟ್ ಹಾಕಿ.
* ಸ್ವಲ್ಪ ನೀರು ಹಾಕಿಕೊಳ್ಳಿ.
* ಐದು ನಿಮಿಷ ಕಾಲ ನಿಧಾನ ಬೆಂಕಿಯಲ್ಲಿ ಮಸಾಲೆಯ ಎಣ್ಣೆ ಹೊರ ಬರುವ ತನಕ ಇಡಿ.
* ಅಂತಿಮವಾಗಿ ಹುರಿದಿರುವ ಕ್ಯಾಪ್ಸಿಕಂ, ಬೆಲ್ ಪೆಪ್ಪರ್ ಹಾಕಿ ಐದು ನಿಮಿಷ ಬೆಂಕಿಯಲ್ಲಿಡಿ.
* ಕತ್ತರಿಸಿಕೊಂಡಿರುವ ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಿ. ರೋಟಿ ಅಥವಾ ಅನ್ನದೊಂದಿಗೆ ಬಿಸಿಯಾಗಿ ಬಡಿಸಿ.