ಬೆಳಗ್ಗಿನ ಉಪಾಹಾರಕ್ಕೆ ಮಾಡಿ ಪಾಲಕ್ ಪರೋಟ

ಬೆಳಗ್ಗಿನ ಉಪಾಹಾರಕ್ಕೆ ಮಾಡಿ ಪಾಲಕ್ ಪರೋಟ

LK   ¦    May 12, 2018 02:28:54 PM (IST)
ಬೆಳಗ್ಗಿನ ಉಪಾಹಾರಕ್ಕೆ ಮಾಡಿ ಪಾಲಕ್ ಪರೋಟ

ಪರೋಟ ಎನ್ನುವುದು ಎಲ್ಲರಿಗೂ ಗೊತ್ತಿರುವಂತಹದ್ದು, ಇದರ ರುಚಿಯನ್ನು ಎಲ್ಲರೂ ನೋಡಿರುತ್ತೀರಾ. ಆದರೆ ಇದೇ ಪರೋಟವನ್ನು ಇನ್ನಷ್ಟು ವಿಶೇಷವಾಗಿ ಮಾಡಲು ಸಾಧ್ಯವಿದೆ. ಜತೆಗೆ ಪರೋಟ ಗಟ್ಟಿಯಾಗಿರುವುದರಿಂದ ಜೀರ್ಣವಾಗುವುದು ಸ್ವಲ್ಪ ಕಷ್ಟವೇ. ಆದ್ದರಿಂದ ಅದಕ್ಕೆ ಪಾಲಕ್ ಸೊಪ್ಪು ಸೇರಿದಂತೆ ಒಂದಿಷ್ಟು ಮಸಾಲೆಗಳನ್ನು ಬೆರೆಸಿ ಮಾಡುವುದರಿಂದ ಜೀರ್ಣವಾಗಲು ಮತ್ತು ಆರೋಗ್ಯಕ್ಕೂ ಒಳ್ಳೆಯದೇ. ಪಾಲಕ್ ಪರೋಟ ಮಾಡಲು ಬೇಕಾಗುವ ಪದಾರ್ಥಗಳು ಮತ್ತು ಮಾಡುವ ವಿಧಾನ ಹೇಗೆ ಎಂಬುದರ ಬಗ್ಗೆ ಇಲ್ಲಿದೆ ನೋಡಿ.

ಬೇಕಾಗುವ ಪದಾರ್ಥಗಳು

ಪಾಲಕ್ ಸೊಪ್ಪು- 1 ಕಟ್ಟು,

ಬೆಳ್ಳುಳ್ಳಿ ಪೇಸ್ಟ್- 1 ಚಮಚ

ಈರುಳ್ಳಿ-2(ಚಿಕ್ಕದಾಗಿ ಕತ್ತರಿಸಿದ್ದು)

ಹಸಿಮೆಣಸು-2 (ಚಿಕ್ಕದಾಗಿ ಕತ್ತರಿಸಿದ್ದು)

ಜೀರಿಗೆ- ಕಾಲು ಚಮಚ

ಗೋಧಿ ಹಿಟ್ಟು- 1 ಕಪ್

ತುಪ್ಪ- 1 ಚಮಚ

ಮೈದಾಹಿಟ್ಟು- 1/4 ಕಪ್

ಉಪ್ಪು- ರುಚಿಗೆ ತಕ್ಕಷ್ಟು

ನೀರು- ಅಗತ್ಯಕ್ಕೆ ತಕ್ಕಂತೆ

ಮಾಡುವ ವಿಧಾನ ಹೀಗಿದೆ.

ಪಾಲಕ್ ಸೊಪ್ಪನ್ನು ಚಿಕ್ಕದಾಗಿ ಕತ್ತರಿಸಿಟ್ಟುಕೊಳ್ಳಬೇಕು. ಬಳಿಕ ಅದರ ಜೊತೆಗೆ ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ ಚೂರು, ಜೀರಿಗೆ, ಉಪ್ಪು, ಗೋಧಿ ಹಿಟ್ಟು, ಮೈದಾ ಹಿಟ್ಟು, ತುಪ್ಪ ಎಲ್ಲವನ್ನು ಹಾಕಿ ಚೆನ್ನಾಗಿ ಹದ ಬರುವಂತೆ ಕಲೆಸಬೇಕು. ಚಪಾತಿ ಹದಕ್ಕೆ ಬಂದ ಬಳಿಕ ಅದನ್ನು ತೆಗೆದು ಸ್ವಲ್ಪ ದಪ್ಪದಾಗಿ ಲಟ್ಟಿಸಿ ತುಪ್ಪ ಹಾಕಿ ತಾವಾದಲ್ಲಿ ಎರಡು ಕಡೆ ಚೆನ್ನಾಗಿ ಬೇಯಿಸಬೇಕು. ಬೆಂದ ಬಳಿಕ ಚಟ್ನಿಯೊಂದಿಗೆ ತಿಂದರೆ ಚೆನ್ನಾಗಿರುತ್ತದೆ.