ಬೇಕ್ ಮಾಡಿದ ಮಶ್ರೂಮ್ ಚಳಿಗಾಲದಲ್ಲಿ ನಾಲಗೆ ರುಚಿಗೆ

ಬೇಕ್ ಮಾಡಿದ ಮಶ್ರೂಮ್ ಚಳಿಗಾಲದಲ್ಲಿ ನಾಲಗೆ ರುಚಿಗೆ

Jan 09, 2018 03:35:44 PM (IST)
ಬೇಕ್ ಮಾಡಿದ ಮಶ್ರೂಮ್ ಚಳಿಗಾಲದಲ್ಲಿ ನಾಲಗೆ ರುಚಿಗೆ

ಚಳಿಗಾಲವೆಂದರೆ ಶೀತ ಗಾಳಿ ಬೀಸುತ್ತಾ, ಮೈನಡುಕ ಉಂಟು ಮಾಡುವ ಹವಾಮಾನ. ಇಂತಹ ದಿನಗಳಲ್ಲಿ ಬಿಸಿಬಿಸಿಯಾಗಿರುವ ಏನಾದರೂ ತಿಂದರೆ ಒಳ್ಳೆಯದು ಎಂದು ಮನಸ್ಸು ಬಯಸಿದಾಗ, ನಾಲಗೆಯಿಂದ ಒಂದೊಂದೇ ಹನಿ ನೀರು ಬರಲು ಶುರು. ರಸ್ತೆ ಬದಿಯ ಆಹಾರ ದೇಹಕ್ಕೆ ಒಳ್ಳೆಯದಲ್ಲ. ಫೈಸ್ಟಾರ್ ನಮ್ಮ ಬಜೆಟ್ ಗೆ ಆಗಿಬರಲ್ಲ. ಇಂತಹ ಸಮಯದಲ್ಲಿ ಮನೆಯಲ್ಲೇ ತಯಾರಿಸಿದರೆ ಅದಕ್ಕೆ ರುಚಿ ಹಾಗೂ ಖರ್ಚು ಕಡಿಮೆ.
ಮಶ್ರೂಮ್ ಮತ್ತು ಕ್ಯಾಪ್ಸಿಕಂ ಬೇಕ್ ಮಾಡಿಕೊಂಡು ತಿಂದರೆ ಅದರ ರುಚಿಯೇ ಅದ್ಭುತ. ಅದು ಹೇಗೆಂದು ತಿಳಿಯಿರಿ.

ಬೇಕ್ ಮಾಡಿದ ಮಶ್ರೂಮ್ ಮತ್ತು ಕ್ಯಾಪ್ಸಿಕಂ ತಯಾರಿಸಲು ಬೇಕಾಗುವ ಸಾಮಗ್ರಿಗಳು
ಒವನ್ ತಾಪಮಾನ: 325 ಎಫ್-160 ಸಿ
2 ಚಮಚ ಬೆಣ್ಣೆ
1 ಕಪ್ ಈರುಳ್ಳಿ ಕತ್ತರಿಸಿಕೊಂಡಿರುವುದು.
1 ದೊಡ್ಡ ಕ್ಯಾಪ್ಸಿಕಂ, ಬೀಜ ತೆಗೆದು ತೆಳುವಾಗಿ ಕತ್ತರಿಸಿ.
200 ಗ್ರಾಂ ಮಶ್ರೂಮ್, ಕತ್ತರಿಸಿಕೊಂಡಿರುವುದು.
2 ಚಮಚ ಉಪ್ಪು
1 ಚಮಚ ಕರಿಮೆಣಸಿನ ಹುಡಿ
3 ಕಪ್ ಚೀಸ್ ತುರಿದಿರುವುದು
ಅಲಂಕಾರಕ್ಕೆ ಕೆಲವು ಟೊಮೆಟೋ ತುಂಡುಗಳು

ಬಿಳಿ ಸಾಸ್ ತಯಾರಿಗೆ
2 ಕಪ್ ಹಾಲು
1 ಕಪ್ ಮೈದಾ
2 ಚಮಚ ಬೆಣ್ಣೆ

ಬಿಳಿ ಸಾಸ್ ತಯಾರಿಸುವ ವಿಧಾನ
ಹೇಳಿರುವ ಎಲ್ಲಾ ಸಾಮಗ್ರಿ ಹಾಕಿಕೊಂಡು ಸರಿಯಾಗಿ ರುಬ್ಬಿ

ಮಶ್ರೂಮ್ ಮಿಶ್ರಣ ತಯಾರಿ
1. ತವಾದಲ್ಲಿ ಬೆಣ್ಣೆ ಕರಗಿಸಿ ಈರುಳ್ಳಿ ಮತ್ತು ಕ್ಯಾಪ್ಸಿಕಂ ಹಾಕಿ. ಕಂದು ಬಣ್ಣಕ್ಕೆ ಬರುವ ತನಕ ಹುರಿಯಿರಿ.
2. ಇದಕ್ಕೆ ಮಶ್ರೂಮ್ ಹಾಕಿ ಮತ್ತು ಬೆಂಕಿ ಹೆಚ್ಚಿಸಿ ಹುರಿಯಿರಿ. ತರಕಾರಿಗಳಿಗೆ ಬೆಣ್ಣೆಯ ಲೇಪನವಾದಂತೆ ಕಂಡುಬಂದಾಗ ನಿಲ್ಲಿಸಿ.
3. ಗ್ಯಾಸ್ ನಿಂದ ತೆಗೆದು ಇದನ್ನು ಉಪ್ಪು, ಕರಿಮೆಣಸು ಮತ್ತು ಬಿಳಿ ಸಾಸ್ ಜತೆಗೆ ಮಿಶ್ರಣ ಮಾಡಿ.
4. ಒವನ್ ಸ್ನೇಹಿ ಪಾತ್ರೆಗೆ ಇದನ್ನು ವರ್ಗಾಯಿಸಿ.
5. ಈ ಮಿಶ್ರಣಕ್ಕೆ ಚೀಸ್ ಹಾಕಿ ಮತ್ತು ಟೊಮೆಟೋದಿಂದ ಅಲಂಕರಿಸಿ. ಚೀಸ್ ಕಂದು ಬಣ್ಣಕ್ಕೆ ಬರುವ ತನಕ ಬೇಕ್ ಮಾಡಿ.