ಬೆಳಗ್ಗಿನ ತಿಂಡಿಗೆ ಪೊಂಗಲ್ ತಯಾರಿಸಿ ನೋಡಿ

ಬೆಳಗ್ಗಿನ ತಿಂಡಿಗೆ ಪೊಂಗಲ್ ತಯಾರಿಸಿ ನೋಡಿ

LK   ¦    Jun 11, 2018 12:07:31 PM (IST)
ಬೆಳಗ್ಗಿನ ತಿಂಡಿಗೆ ಪೊಂಗಲ್ ತಯಾರಿಸಿ ನೋಡಿ

ಸಾಮಾನ್ಯವಾಗಿ ಬೆಳಗ್ಗಿನ ತಿಂಡಿಗೆ ಹೆಚ್ಚಿನ ಜನರು ಪೊಂಗಲ್ ಮಾಡುತ್ತಾರೆ. ಪೊಂಗಲ್, ಖಾರಾ ಪೊಂಗಲ್, ಸಿಹಿ ಪೊಂಗಲ್ ಬಹು ವಿಧದಿಂದ ಮಾಡಬಹುದಾಗಿದೆ.

ಸಿಂಪಲ್ ಪೊಂಗಲ್ ಮಾಡುವುದಾದರೆ ಪೊಂಗಲ್ ಗೆ ಬೇಕಾಗುವ ಪದಾರ್ಥಗಳು ಹೀಗಿದೆ.

ಹೆಸರು ಬೇಳೆ- ಒಂದು ಕಪ್

ಅಕ್ಕಿ- ಒಂದು ಕಪ್

ತುಪ್ಪ- ಸ್ವಲ್ಪ

ಗೋಡಂಬಿ- ಸ್ವಲ್ಪ

ದ್ರಾಕ್ಷಿ- ಸ್ವಲ್ಪ

ಮಾಡುವ ವಿಧಾನ ಹೀಗಿದೆ

ಹೆಸರು ಬೇಳೆಯನ್ನು ಚೆನ್ನಾಗಿ ಹುರಿದು ಬಳಿಕ ಅಕ್ಕಿಯನ್ನು ಹಾಕಿ ಸ್ವಲ್ಪ ಬಾಡಿಸಿ ಬಳಿಕ ತುಪ್ಪದಲ್ಲಿ ಗೋಡಂಬಿ, ದ್ರಾಕ್ಷಿಯನ್ನು ಹುರಿದು ಹಾಕಿ ಕುಕ್ಕರ್ ನಲ್ಲಿ ಸ್ವಲ್ಪ ನೀರು ಹಾಕಿ ರುಚಿಗೆ ತಕ್ಕಂತೆ ಸ್ವಲ್ಪ ಉಪ್ಪು ಹಾಕಿ ಒಂದು ವಿಶಲ್ ಕೂಗಿಸಿದರೆ ಪೊಂಗಲ್ ರೆಡಿಯಾಗಲಿದೆ.

ಖಾರಾಪೊಂಗಲ್

ಹೆಸರುಬೇಳೆ ಮತ್ತು ಅಕ್ಕಿಯ ಜೊತೆಗೆ ಹಸಿಶುಂಠಿ, ಕೊತ್ತಂಬರಿ, ಕರಿಬೇವು, ಅರಿಶಿನ, ಕೊಬ್ಬರಿ, ಉಪ್ಪು, ಜೀರಿಗೆ, ಖಾರಾಪುಡಿ ಹಾಕಿ ಕುಕ್ಕರ್ ನಲ್ಲಿ ಒಂದೆರಡು ವಿಶಲ್ ಕೂಗಿಸಿದರೆ ಖಾರಾಪೊಂಗಲ್ ಸಿದ್ಧಗೊಳ್ಳಲಿದೆ.

ಸಿಹಿಪೊಂಗಲ್

ಹೆಸರುಬೇಳೆ ಮತ್ತು ಅಕ್ಕಿಯ ಜೊತೆಯಲ್ಲಿ ಬೆಲ್ಲದ ನೀರನ್ನು ಸೋಸಿ ಹಾಕಿ ಅದಕ್ಕೆ ಕೊಬ್ಬರಿ, ದ್ರಾಕ್ಷಿ, ಕೇಸರಿಯನ್ನು ತುಪ್ಪದಲ್ಲಿ ಹುರಿದು ಹಾಕಿ ಬೇಯಿಸಿದರೆ ಸಿಹಿಪೊಂಗಲ್ ಸವಿಯಲು ಸಿದ್ದವಾಗಲಿದೆ.