ಪುದಿನಾ-ಮಾವಿನಕಾಯಿ ಜ್ಯೂಸ್

ಪುದಿನಾ-ಮಾವಿನಕಾಯಿ ಜ್ಯೂಸ್

Apr 07, 2017 08:03:46 AM (IST)

ಅಬ್ಬಾ! ಎಂತಹ ಬಿಸಿಲು ಈ ಸುಡುವ ಬಿಸಿಲಿಗೆ ತಂಪಾದ ಪಾನೀಯ ಎಷ್ಟು ಸೊಗಸಲ್ಲವೇ? ಬಿಸಿಲಿ ಧಗೆಯನ್ನು ಕಡಿಮೆ ಮಾಡಲು ನಾವು ಇವತ್ತು ಪುದಿನಾ-ಮಾವಿನಕಾಯಿಯ ಜ್ಯೂಸ್ ತಯಾರಿಸೋಣ.
ಬೇಕಾಗುವ ಸಾಮಾಗ್ರಿಗಳು
*ಸಕ್ಕರೆ - 1/2 ಕಪ್
*ನೀರು - 2 ಕಪ್ಗಳು
*ಹಸಿ ಮಾವಿನಕಾಯಿ - 2 ಕಪ್ಗಳು
*ಪುದೀನಾ ಸೊಪ್ಪು - 1 ಕಟ್ಟು
*ಐಸ್ ಕ್ರಶ್ ಮಾಡಿರುವುದು - 1 ಕಪ್  

ತಯಾರಿಸುವ ವಿಧಾನ:
ಮೊದಲಿಗೆ ತಳ ಆಳವಿರುವ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ 1/2 ಕಪ್ ಸಕ್ಕರೆ ಮತ್ತು 1/2 ಕಪ್ ನೀರು ಮಿಶ್ರ ಮಾಡಿ ಹಾಗೂ ಸಕ್ಕರೆ ಕರಗುವವರೆಗೆ ಮಿಶ್ರ ಮಾಡಿಕೊಳ್ಳಿ.  ಸಕ್ಕರೆ ಕರಗಿದ ನಂತರ ಮಾವಿನ ಕಾಯಿಯನ್ನು ಕತ್ತರಿಸಿ ಇದಕ್ಕೆ ಹಾಕಿ. ಮಾವಿನ ಕಾಯಿ ಚೆನ್ನಾಗಿ ಬೇಯುವವರೆಗೆ 2 ರಿಂದ ಮೂರು ನಿಮಷಗಳ ಕಾಲ ಹಾಗೆಯೇ ಬಿಡಿ. ಸಕ್ಕರೆ ಮತ್ತು ಮಾವಿನ ಕಾಯಿ ಒಂದಕ್ಕೊಂದು ಚೆನ್ನಾಗಿ ಬೆರೆಯಲಿ.ಈ ಮಿಶ್ರಣ ತಣ್ಣಗಾದ ನಂತರ ಮಾವಿನಕಾಯಿಯ ಸಿಪ್ಪೆಯನ್ನು ಬೇರ್ಪಡಿಸಿ, ಅದರ ತಿರುಳನ್ನು ಮಾತ್ರ ಮಿಕ್ಸರ್ಗೆ ಹಾಕಿ. ಹಾಗೂ  ಸ್ವಲ್ಪ ಪುದೀನಾ ಸೊಪ್ಪನ್ನು ಕತ್ತರಿಸಿ ಸೇರಿಸಿ ನಂತರ ನುಣ್ಣಗೆ ಮಿಶ್ರಣವನ್ನು ತಯಾರಿಸಿಕೊಳ್ಳಿ. ಮಿಕ್ಸರ್ನಿಂದ ಜ್ಯೂಸ್ ಅನ್ನು ಹೊರತೆಗೆಯಿರಿ. ಈ ಸಿರಪ್ ಅನ್ನು ಒಂದು ಬಾಟಲಿಯಲ್ಲಿ ಹಾಕಿಟ್ಟುಕೊಳ್ಳಿ. ನೀರು ಮತ್ತು ಎರಡು ಚಮಚಗಳಷ್ಟು ಕ್ರಶ್ ಮಾಡಿದ ಐಸ್ ಅನ್ನು ಬೌಲ್ಗೆ ಹಾಕಿ ನಂತರ ಹ್ಯಾಂಡ್ ಬ್ಲೆಂಡರ್ ಸಹಾಯದಿಂದ ಬ್ಲೆಂಡ್ ಮಾಡಿಕೊಳ್ಳಿ. ಇದನ್ನು ಸರ್ವ್ ಮಾಡುವುದಕ್ಕಾಗಿ ಕಪ್ಗಳಲ್ಲಿ ಪಾನೀಯವನ್ನು ಹಾಕಿ ನಂತರ ಐಸ್ ಸೇರಿಸಿ. ತಂಪಾಗಿ ಇದನ್ನು ಸೇವಿಸಲು ನೀಡಿ.