ಕಾಲಿಫ್ಲವರ್ ಪಕೋಡ ಮನೆಯಲ್ಲೇ ಹೀಗೆ ತಯಾರಿಸಿ…

ಕಾಲಿಫ್ಲವರ್ ಪಕೋಡ ಮನೆಯಲ್ಲೇ ಹೀಗೆ ತಯಾರಿಸಿ…

HSA   ¦    Dec 03, 2019 03:35:21 PM (IST)
ಕಾಲಿಫ್ಲವರ್ ಪಕೋಡ ಮನೆಯಲ್ಲೇ ಹೀಗೆ ತಯಾರಿಸಿ…

ಹೊರಗಡೆ ಮೋಡ ಮುಸುಕಿದ ವಾತಾವರಣ, ಆಗಾಗ ಬರುತ್ತಿರುತ್ತಿರುವ ತುಂತುರು ಮಳೆ, ಹೀಗೆ ವಾತಾವರಣವೇ ಬದಲಾಗಿ ಹೋಗಿದೆ. ಏನಾದರೂ ಕರಿದಿರುವ ತಿಂಡಿ ತಿನ್ನಬೇಕು ಎನ್ನುವ ಬಯಕೆಯು ಹೆಚ್ಚಾಗುತ್ತಿದೆ. ಇದಕ್ಕಾಗಿ ಹೂಕೋಸ್(ಕಾಲಿಫ್ಲವರ್) ಪಕೋಡ ತಯಾರಿಸಿ ತಿಂದರೆ ತುಂಬಾ ರುಚಿಕರವಾಗಿಯೂ ಇರುವುದು. ಇದನ್ನು ತಯಾರಿಸಿಕೊಳ್ಳುವುದು ಹೇಗೆ ಎಂದು ತಿಳಿಯಿರಿ.

ಬೇಕಾಗುವ ಸಾಮಗ್ರಿಗಳು

300-350 ಗ್ರಾಂ ಹೂಕೋಸು

2 ಎಸಲು ಕರಿಬೇವಿನ ಎಲೆಗಳು

2 ಹಸಿ ಮೆಣಸು

11/4 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್

11/2 ಚಮಚ ಅಜ್ವೈನ್

1 ಚಮಚ ಕೆಂಪು ಮೆಣಸಿನ ಹುಡಿ

1 ಚಮಚ ಗರಂ ಮಸಾಲ

¼ ಕಪ್ ಕಡಲೆ ಹಿಟ್ಟು

¼ ಕಪ್ ಅಕ್ಕಿ ಹಿಟ್ಟು

ಉಪ್ಪು (ರುಚಿಗೆ ತಕ್ಕಷ್ಟು)

ಅರಶಿನ

ನೀರು ಅಗತ್ಯಕ್ಕೆ ಬೇಕಾದಷ್ಟು

ಎಣ್ಣೆ (ಕರಿಯಲು)

 

ತಯಾರಿಸಿಕೊಳ್ಳುವ ವಿಧಾನ

  1. ಬಿಸಿ ನೀರಿಗೆ ಉಪ್ಪು ಹಾಕಿ ಅದಕ್ಕೆ ಕಾಲಿಫ್ಲವರ್ ಹಾಕಿ ಮತ್ತು ಸ್ವಲ್ಪ ಸಮಯ ಹಾಗೆ ಇಡಿ. ಇದರ ಬಳಿಕ ನೀರು ಸೋಸಿಕೊಳ್ಳಿ ಮತ್ತು ಸ್ವಲ್ಪ ಒಣಗಿಸಿ.
  2. ಇದನ್ನು ಒಂದು ಪಾತ್ರೆಗೆ ಹಾಕಿ.
  3. ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕರಿಬೇವಿನ ಎಲೆ, ಹಸಿ ಮೆಣಸು, ಮೆಣಸಿನ ಹುಡಿ, ಒಮ ಕಾಳು ಮತ್ತು ಗರಂ ಮಸಾಲ ಹಾಕಿ. ಬೇಕಿದ್ದರೆ ಚಾಟ್ ಮಸಾಲ ಬಳಸಬಹುದು.
  4. ಸರಿಯಾಗಿ ಮಿಶ್ರಣ ಮಾಡಿ. ಕಡಲೆ ಹಿಟ್ಟು ಮತ್ತು ಉಪ್ಪು ಸಿಂಪಡಿಸಿ. ನೀರು ಸಿಂಪಡಿಸಿ ಮತ್ತು ಕಾಲಿಫ್ಲವರ್ ಗೆ ಹಿಟ್ಟು ಸರಿಯಾಗಿ ಅಂಟಿಕೊಳ್ಳಲಿ.
  5. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಎಣ್ಣೆಯು ಸರಿಯಾಗಿ ಬಿಸಿಯಾದ ಬಳಿಕ ಮಧ್ಯಮ ಬೆಂಕಿಯಲ್ಲಿ ಕರಿಯಲು ಆರಂಭಿಸಿ. ಕರಿದ ಬಳಿಕ ತೆಗೆಯಿರಿ.
  6. ಇದರ ಬಳಿಕ ಅಡುಗೆ ಟಿಶ್ಯು ಬಳಸಿ ಹೆಚ್ಚಿನ ಎಣ್ಣೆ ತೆಗೆಯಿರಿ. ಬಿಸಿ ಕಾಫಿ ಅಥವಾ ಚಾ ಜತೆಗೆ ಇದನ್ನು ಕೊಟ್ಟರೆ ಅದರ ರುಚಿಯೇ ಅದ್ಭುತ.