ಸಿಂಪಲ್ ಆಗಿ ಮಾಡಿ ಸವಿಯಿರಿ ‘ಚಿಲ್ಲಿ ಗೋಬಿ’

ಸಿಂಪಲ್ ಆಗಿ ಮಾಡಿ ಸವಿಯಿರಿ ‘ಚಿಲ್ಲಿ ಗೋಬಿ’

YK   ¦    Feb 05, 2018 04:40:42 PM (IST)
ಸಿಂಪಲ್ ಆಗಿ ಮಾಡಿ ಸವಿಯಿರಿ ‘ಚಿಲ್ಲಿ ಗೋಬಿ’

ಚಿಲ್ಲಿ ಗೋಬಿ ಪದಾರ್ಥ ಎಲ್ಲರಿಗೂ ತುಂಬಾ ಇಷ್ಟವಾಗುವ ಭಾರತೀಯ ಖಾದ್ಯ. ಇದನ್ನು ಕೆಲವೇ ನಿಮಿಷಗಳಲ್ಲಿ ಮನೆಯಲ್ಲಿಯೇ ರುಚಿಕರವಾಗಿ ತಯಾರಿಸಬಹುದು.

ಚಿಲ್ಲಿ ಗೋಬಿ ಮಾಡಲು ಬೇಕಾಗುವ ಸಾಮಾಗ್ರಿಗಳು
3 ಕಪ್ ನೀರು
• 1ಟೀ ಚಮಚ ಉಪ್ಪು
1 ಕಪ್ ಹೂಕೋಸು
• 1/2 ಕಪ್ ಕಾರ್ನ್ಫ್ಲೋರ್
• 1 ಟೀ ಚಮಚ ಕರಿಮೆಣಸಿನ ಪುಡಿ
• 2 ಟೀ ಚಮಚ ಶುಂಠಿ
• 2 ಟೀ ಚಮಚ ಬೆಳ್ಳುಳ್ಳಿ
• 1 ಕತ್ತರಿಸಿದ ಈರುಳ್ಳಿ
• 5 ಹಸಿಮೆಣಸಿನ ಕಾಯಿ
• 1/2 ಟೀ ಚಮಚ ಸೋಯಾ ಸಾಸ್
• 2 ಟೀ ಚಮಚ ಟೊಮೆಟೊ ಸಾಸ್
• 1/2 ಟೀ ಚಮಚ ವೆನಿಗರ್
• 2 ಟೀ ಚಮಚ ರೆಡ್ ಚಿಲ್ಲಿ ಸಾಸ್

ಮಾಡುವ ವಿಧಾನ:ಒಂದು ಪಾತ್ರೆಯಲ್ಲಿ ಕುದಿಯುವ ನೀರಿಗೆ ಉಪ್ಪು ಹಾಕಿ ನಂತರ ಅದಕ್ಕೆ ಕಟ್ ಮಾಡಿ ಇಟ್ಟುಕೊಂಡ ಹೂಕೋಸನ್ನು ಹಾಕಿ ಒಂದು ನಿಮಿಷ ಕುದಿಸಿ. ನಂತರ ನೀರಿನಿಂದ ಹೂಕೋಸನ್ನು ತೆಗೆದು ಪಕ್ಕದಲ್ಲಿ ಇಟ್ಟುಕೊಂಡು ಅದಕ್ಕೆ ಕಾರ್ನ್ಫ್ಲೋರ್, ಉಪ್ಪು, ಕರಿ ಮೆಣಸಿನ ಪುಡಿ ಹಾಕಿ ಮಿಕ್ಸ್ ಮಾಡಿ ಎಣ್ಣೆಯಲ್ಲಿ ಕಾಯಿಸಿ. ಇನ್ನೊಂದು ಬಾಣಲೆಯಲ್ಲು ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಕಟ್ ಮಾಡಿ ಇಟ್ಟುಕೊಂಡ ಶುಂಠಿ, ಬೆಳ್ಳುಳ್ಳಿ, ಈರುಳ್ಳಿ ಹಾಕಿ ಹುರಿಯಿರಿ.

ನಂತರ ಹಸಿ ಮೆಣಸಿನ ಕಾಯಿ, ಸೋಯಾ ಸಾಸ್, ಟೊಮೆಟೋ ಸಾಸ್, ವೆನಿಗರ್, ರೆಡ್ ಚಿಲ್ಲಿ ಸಾಸ್, ಉಪ್ಪು, ಕರಿ ಮೆಣಸಿನ ಪುಡಿ ಹಾಕಿ ಹುರಿದ ಬಳಿಕ ಎಣ್ಣೆಯಲ್ಲಿ ಕಾದ ಹೂಕೋಸನ್ನು ಹಾಕಿ ಸರಿಯಾಗಿ ಮಿಕ್ಸ್ ಮಾಡಿ. ನಂತರ ಅದಕ್ಕೆ ನೀರಿನಲ್ಲಿ ಮಿಕ್ಸ್ ಮಾಡಿದ ಕಾರ್ನ್ ಫ್ಲೋರ್ ಹಾಕಿ ಕುದಿಸಿ. ಇದೀಗ ಬಿಸಿ ಬಿಸಿಯಾದ ಚಿಲ್ಲಿ ಗೋಬಿ ಸವಿಯಲು ಸಿದ್ಧ.

 

More Images