ಹಣ್ಣುಗಳ ರಾಜ ಮಾವು ಈಗಾಗಲೇ ಮಾರುಕಟ್ಟೆ ಪ್ರವೇಶಿಸಿ ಆಗಿದೆ. ಇತ್ತೀಚಿನ ವರ್ಷಗಳಲ್ಲಿ ಮಾವು ವರ್ಷವಿಡೀ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಆದರೆ ಬೇಸಿಗೆ ಕಾಲದಲ್ಲಿ ಸಿಗುವ ಮಾವು ಮಾತ್ರ ನೈಸರ್ಗಿಕವಾಗಿರುವಂತದ್ದಾಗಿದೆ. ಇಂತಹ ಮಾವು ಬಳಸಿಕೊಂಡು ಲಸ್ಸಿ ಐಸ್ ಕ್ರೀಮ್ ಮಾಡಿಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳುವ. ಇದನ್ನು ತಯಾರಿಸುವುದು ತುಂಬಾ ಸುಲಭ.
ಇಬ್ಬರಿಗೆ ಸಾಕಾಗುವಷ್ಟು
ತಯಾರಿ ಸಮಯ 10 ನಿಮಿಷ
ಅಡುಗೆ ಸಮಯ 15 ನಿಮಿಷ
ಒಟ್ಟು ಸಮಯ 25 ನಿಮಿಷ
ಮ್ಯಾಂಗೋ ಲಸ್ಸಿ ಐಸ್ ಕ್ರೀಮ್ ಗೆ ಬೇಕಾಗುವ ಸಾಮಗ್ರಿಗಳು
1 ಬೌಲ್ ನಲ್ಲಿ ಮೊಸರು
2 ಮಾವಿನ ಹಣ್ಣುಗಳು
1 ಚಮಚ ಜೇನುತುಪ್ಪ
ತಯಾರಿಸುವ ವಿಧಾನ
1.ಕತ್ತರಿಸಿಕೊಂಡಿರುವ ಮಾವಿನ ತಿರುಳು, ಮೊಸರು ಮತ್ತು ಜೇನುತುಪ್ಪ ಮಿಕ್ಸಿಗೆ ಹಾಕಿ ರುಬ್ಬಿ.
2. ಸಿಲಿಕಾನ್ ಮೌಲ್ಡ್ ಗೆ ಸುರಿಯಿರಿ.
3. ನಾಲ್ಕು ಗಂಟೆಗಳ ಕಾಲ ಡೀಪ್ ಫ್ರೀಜ್ ಮಾಡಿ.
4. ತಂಪಾಗಿರುವಾಗಲೇ ಸೇವಿಸಿ.