ದ.ಆಫ್ರಿಕಾದಲ್ಲಿ ಪ್ರಶಸ್ತಿ ಗೆದ್ದ ಕಾಶ್ಮೀರಿ ಚಿಲ್ಲಿ ಚಿಕನ್ ಸಮೋಸಾ

ದ.ಆಫ್ರಿಕಾದಲ್ಲಿ ಪ್ರಶಸ್ತಿ ಗೆದ್ದ ಕಾಶ್ಮೀರಿ ಚಿಲ್ಲಿ ಚಿಕನ್ ಸಮೋಸಾ

HSA   ¦    Dec 28, 2017 02:16:52 PM (IST)
ದ.ಆಫ್ರಿಕಾದಲ್ಲಿ ಪ್ರಶಸ್ತಿ ಗೆದ್ದ ಕಾಶ್ಮೀರಿ ಚಿಲ್ಲಿ ಚಿಕನ್ ಸಮೋಸಾ

ಜೋಹನ್ಸ್ ಬರ್ಗ್: ಭಾರತೀಯರ ಅತ್ಯಂತ ಇಷ್ಟದ ತಿಂಡಿಯಾಗಿರುವ ಕಾಶ್ಮೀರಿ ಚಿಲ್ಲಿ ಚಿಕನ್ ಸಮೋಸಾವು ದಕ್ಷಿಣ ಆಫ್ರಿಕಾದಲ್ಲಿ ಮೊದಲ ಸಲ ನಡೆದ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.

ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರಿಂದ ನಡೆಸಲ್ಪಡುವ ವಾರಪತ್ರಿಕೆಯೊಂದು ಈ ಸ್ಪರ್ಧೆಯನ್ನು ಏರ್ಪಡಿಸಿತ್ತು.

ವಿವಿಧ ವಿಭಾಗದಲ್ಲಿ ಸ್ಪರ್ಧೆಗಳು ನಡೆದವು. ಕೆಲವು ಸಮೋಸಾದಲ್ಲಿ ಬಾದಾಮಿ ಮತ್ತು ಗೋಡಂಬಿ ಜತೆಗೆ ಚಾಕಲೇಟ್ ತುಂಬಲಾಗಿತ್ತು. ಮರಘೆರಿತಾ ಫಿಜ್ಜಾ ಮತ್ತು ಚಿಕನ್ ಜಾಲಪೆನೊ ತುಂಬಿ ಸಮೋಸಾ ತಯಾರಿಸಲಾಗಿತ್ತು ಎಂದು ಆಯೋಜಕರು ತಿಳಿಸಿದ್ದಾರೆ. 

ದಕ್ಷಿಣ ಆಫ್ರಿಕಾದವರು ಸಮೋಸಾವನ್ನು ಸಮೂಸಾ ಎಂದು ಕರೆಯುತ್ತಾರೆ. ಪಂಜಾಬ್ ನಲ್ಲಿ ತುಂಬಾ ಜನಪ್ರಿಯವಾಗಿರುವಂತಹ ಸಮೋಸಾವು ಇಂದು ವಿಶ್ವದೆಲ್ಲೆಡೆಯಲ್ಲಿ ತನ್ನ ರುಚಿಯಿಂದ ಹೆಸರು ಗಳಿಸಿದೆ.

ಸಲ್ಮಾ ಅಗ್ಜೀ ಎಂಬವರು ಈ ಸ್ಪರ್ಧೆಯನ್ನು ಗೆದ್ದುಕೊಂಡಿದ್ದಾರೆ.