ದಹಿ ಲಸೂನಿ ಚಿಕನ್ ಮಾಡಿ ತಿಂದರಷ್ಟೇ ಚಂದ

ದಹಿ ಲಸೂನಿ ಚಿಕನ್ ಮಾಡಿ ತಿಂದರಷ್ಟೇ ಚಂದ

Nov 10, 2017 03:14:11 PM (IST)
ದಹಿ ಲಸೂನಿ ಚಿಕನ್ ಮಾಡಿ ತಿಂದರಷ್ಟೇ ಚಂದ

ಮನೆಯಲ್ಲಿ ಕೆಲವೊಂದು ಖಾದ್ಯಗಳನ್ನು ತುಂಬಾ ರುಚಿಯಾಗಿ ತಯಾರಿಸಬಹುದಾದರೂ ಹೆಚ್ಚಿನವರಿಗೆ ಆಹಾರ ಹೊರಗಿನಿಂದ ತರಿಸುವುದು ಅಭ್ಯಾಸ. ಆದರೆ ಮೂರು ಮಂದಿ ಇರುವ ಕುಟುಂಬಕ್ಕೆ ಮನೆಯಲ್ಲೇ ತಯಾರಿಸಿ ತಿನ್ನಬಹುದಾದ ಹಲವಾರು ಆಹಾರಗಳು ಇವೆ. ಇದನ್ನು ತಯಾರಿಸಲು ಮನಸ್ಸು ಮಾತ್ರ ಬೇಕು. ಈ ಲೇಖನದಲ್ಲಿ ದಹಿ ಲಸೂನಿ ಚಿಕನ್(ಮೊಸರು ಬೆಳ್ಳುಳ್ಳಿ ಚಿಕನ್) ತಯಾರಿಸಿಕೊಳ್ಳುವುದು ಹೇಗೆ ಎಂದು ಹೇಳಿಕೊಡಲಿದ್ದೇವೆ.

ಇಬ್ಬರಿಗೆ ಬಡಿಸಬಹುದಾದಷ್ಟು
ತಯಾರಿಸುವ ಸಮಯ 30 ನಿಮಿಷ
ಅಡುಗೆ ಸಮಯ 15 ನಿಮಿಷ

ದಹಿ ಲಸೂನಿ ಚಿಕನ್ ತಯಾರಿಸಲು ಬೇಕಾಗುವ ಸಾಮಗ್ರಿಗಳು
170 ಗ್ರಾಂ ಕೋಳಿ ಮಾಂಸ(ಎಲುಬು ಇಲ್ಲದ್ದು ಮತ್ತು ಸಣ್ಣ ತುಂಡುಗಳನ್ನಾಗಿ ಮಾಡಿರಬೇಕು)
1 ಚಮಚ ತುರಿದಿರುವ ಚೀಸ್
2 ಚಮಚ ಬೆಳ್ಳುಳ್ಳಿ ಕತ್ತರಿಸಿರುವುದು
ಒಂದು ಚಮಚ ಬೆಳ್ಳುಳ್ಳಿ ಪೇಸ್ಟ್
2 ಎಸಲು ಕೊತ್ತಂಬರಿ ಸೊಪ್ಪು ಕತ್ತರಿಸಿರುವುದು
1 ಚಮಚ ಹಸಿ ಮೆಣಸಿನ ಪೇಸ್ಟ್
1/2 ಕ್ರೀಮ್(ತಾಜಾ)
4 ಚಮಚ ಮೊಸರು
1 ಚಮಚ ಗೋಡಂಬಿ ಪೇಸ್ಟ್
ರುಚಿಗೆ ತಕ್ಕಷ್ಟು ಉಪ್ಪು
ರುಚಿಗೆ ತಕ್ಕಷ್ಟು ಕಪ್ಪುಉಪ್ಪು
ಅಗತ್ಯವಿದ್ದಷ್ಟು ಕರಿಮೆಣಸಿನ ಹುಡಿ
1/2 ಚಮಚ ಗರಂ ಮಸಾಲ
1/2 ಚಮಚ ಚಾಟ್ ಮಸಾಲ
1 ಚಮಚ ಬೆಣ್ಣೆ

ತಯಾರಿಸುವ ವಿಧಾನ
1. ಮೊಸರಿನಲ್ಲಿ ಕೋಳಿಯನ್ನು ಕಲಸಿಕೊಳ್ಳಿ.
2. ಕತ್ತರಿಸಿಕೊಂಡಿರುವ ಬೆಳ್ಳುಳ್ಳಿ, ಶುಂಠಿ ಪೇಸ್ಟ್, ಗೋಡಂಬಿ ಪೇಸ್ಟ್ ಮತ್ತು ಹಸಿ ಮೆಣಸಿನ ಪೇಸ್ಟ್ ಹಾಕಿ ಕಲಸಿಕೊಳ್ಳಿ.
3. ಕತ್ತರಿಸಿಕೊಂಡಿರುವ ಕೊತ್ತಂಬರಿ ಸೊಪ್ಪು, ರುಚಿಗೆ ಬೇಕಾದಷ್ಟು ಉಪ್ಪು ಮತ್ತು ಗರಂ ಮಸಾಲ ಹಾಕಿಕೊಳ್ಳಿ.
4. ಇದಕ್ಕೆ ಕಪ್ಪು ಉಪ್ಪು, ಚಾಟ್ ಮಸಾಲ, ಕ್ರೀಮ್ ಮತ್ತು ಚೀಸ್ ಹಾಕಿ.
5. ಕಲಸಿಕೊಂಡ ಕೋಳಿಯನ್ನು ಅರ್ಧ ಗಂಟೆ ಕಾಲ ಹಾಗೆ ಇಟ್ಟುಬಿಡಿ. ರಾತ್ರಿ ಕಲಸಿಕೊಂಡು ಇಟ್ಟರೆ ರುಚಿಗೆ ಮತ್ತಷ್ಟು ಒಳ್ಳೆಯದು.
6. ಕೋಳಿಗೆ ಬೆಣ್ಣೆ ಹಚ್ಚಿಕೊಂಡು ಇದ್ದಿಲು ಹಾಕಿರುವ ಬೆಂಕಿಯಲ್ಲಿ ಸುಮಾರು 10-15 ನಿಮಿಷ ಕಾಲ ಗ್ರಿಲ್ ಮಾಡಿ.
7. ಬಿಸಿಯಾಗಿರುವಾಗಲೇ ಬಡಿಸಿ.