ಸಿಂಪಲ್ ಆಗಿ ಮಾಡಿ 'ಕೇರಳ ಚಿಕನ್ ರೋಸ್ಟ್'

ಸಿಂಪಲ್ ಆಗಿ ಮಾಡಿ 'ಕೇರಳ ಚಿಕನ್ ರೋಸ್ಟ್'

YK   ¦    Jan 06, 2018 12:26:21 PM (IST)
ಸಿಂಪಲ್ ಆಗಿ ಮಾಡಿ 'ಕೇರಳ ಚಿಕನ್ ರೋಸ್ಟ್'

ಖಾರ ಹಾಗೂ ವಿವಿಧ ಫ್ಲೇವರ್ ಗಳನ್ನು ನೀಡುವ ಕೇರಳ ರೋಸ್ಟ್ ಚಿಕನ್ ಮಾಡಲು ಅಷ್ಟೇ ಸುಲಭವಾಗಿದೆ. ಈ ರೆಸಿಫಿಯನ್ನು ಒಂದು ಗಂಟೆಯಲ್ಲಿ ತಯಾರಿಸಿ ಊಟಕ್ಕೆ ಬಡಿಸಬಹುದು.

ಬೇಕಾಗುವ ಸಾಮಾಗ್ರಿ
1ಕೆ.ಜಿ. ಚಿಕನ್
1/4 ಟೀ ಚಮಚ ಹರಸಿನಿ ಪುಡಿ, ಮೆಣಸಿನ ಪುಡಿ, ಕೊತ್ತಂಬರಿ ಪುಡಿ
1 ಟೀ ಚಮಚ ವೆನಿಗರ್ ಹಾಗೂ ಲಿಂಬೆ ರಸ
5 ಬೆಳ್ಳುಳ್ಳಿ
3-5 ಹಸಿ ಮೆಣಸಿನ ಕಾಯಿ
ರುಚಿಗೆ ತಕ್ಕಷ್ಟು ಉಪ್ಪು

ಹುರಿದುಕೊಳ್ಳಲು ಬೇಕಾಗಿರುವ ಸಾಮಾಗ್ರಿಗಳು:
3 ಈರುಳ್ಳಿ
1 ದೊಡ್ಡ ಟೊಮೆಟೋ(ಫೇಸ್ಟ್ ಮಾಡಿ ಇಟ್ಟುಕೊಳ್ಳಿ)
2 ಕಟ್ ಮಾಡಿದ ಹಸಿ ಮೆಣಸಿನ ಕಾಯಿ
¼ ಟೀ ಚಮಚ ಗರಂ ಮಸಾಲೆ
¼ ಟೀ ಚಮಚ ಪೆಪ್ಪರ್ ಫೌಡರ್
1 ಲಿಂಬೆ ಹಣ್ಣಿನ ರಸ
ಎಣ್ಣೆ
ಮಾಡುವ ವಿಧಾನ:

1. 1 ಕೆ.ಜಿ .ಚಿಕನ್ ನನ್ನು ಕ್ಲೀನ್ ಮಾಡಿ ಕಟ್ ಮಾಡಿ ಇಟ್ಟುಕೊಳ್ಳಿ.
2. ಮೇಲೆ ಹೇಳಿದ (1/4 ಟೀ ಚಮಚ ಹರಸಿನಿ ಪುಡಿ, ಮೆಣಸಿನ ಪುಡಿ, ಕೊತ್ತಂಬರಿ ಪುಡಿ, 1 ಟೀ ಚಮಚ ವೆನಿಗರ್ ಹಾಗೂ ಲಿಂಬೆ ರಸ, 5 ಬೆಳ್ಳುಳ್ಳಿ, 3-5 ಹಸಿ ಮೆಣಸಿನ ಕಾಯಿ) ಪೇಸ್ಟ್ ಮಾಡಿ. ನಂತರ ಚಿಕನ್ ಗೆ ಪೇಸ್ಟ್ ನ್ನು ಸರಿಯಾಗಿ ಮಿಕ್ಸ್ ಮಾಡಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ 1 ಕಾಲ ಗಂಟೆ ಹಾಗೆಯೇ ಬಿಡಿ.
3. ನಂತರ ಈರುಳ್ಳಿಯನ್ನು ಹುರಿದು ಪಕ್ಕದಲ್ಲಿ ಇಟ್ಟುಕೊಳ್ಳಿ
4. 1 ಗಂಟೆಯ ಬಳಿಕ ಚಿಕನ್ ನ್ನು ಎಣ್ಣೆಯಲ್ಲಿ ಫ್ರೈ ಮಾಡಿ. ಮುಚ್ಚಲ ಮುಚ್ಚ ಬೇಯಿಸಿ.
5. ಇನ್ನೊಂದು ಪಾತ್ರೆಯಲ್ಲಿ 2 ಟೀ ಚಮಚ ಎಣ್ಣೆ ಹಾಕಿ ಅದು ಕಾದ ನಂತರ ಅದಕ್ಕೆ ಕಟ್ ಮಾಡಿದ ಹಸಿ ಮೆಣಸಿನ ಕಾಯಿ ಹಾಗೂ ಕರಿ ಲೀವ್ಸ್ ಹಾಕಿ ಹುರಿಯಿರಿ, ಅದಕ್ಕೆ ಪೇಸ್ಟ್ ಮಾಡಿದ ಟೋಮೆಟೋ ಹಾಕಿ 1 ನಿಮಿಷ ಹುರಿಯಿರಿ. ಅದು ಹುರಿದ ಬಳಿಕ ಫ್ರೈ ಮಾಡಿದ ಚಿಕನ್ ನ್ನು ಹಾಕಿ ಡ್ರೈ ಆಗುವವರೆಗೂ ಹುರಿಯಿರಿ.
6. ಈ ಗ ಅದಕ್ಕೆ ಗರಂ ಮಸಾಲೆ, ಪೆಪ್ಪರ್ ಫೌಡರ್, ಲಿಂಬೆ ಹಣ್ಣಿನ ರಸ ಹಾಕಿ ಸರಿಯಾಗಿ ಮಿಕ್ಸ್ ಮಾಡಿದ ಬಳಿಕ ರುಚಿಗೆ ಉಪ್ಪು ಬೇಕಿದ್ದಲ್ಲಿ ಹಾಕಿ. ಎಲ್ಲ ಆದ ಬಳಿಕ ಫ್ರೈ ಮಾಡಿದ ಈರುಳ್ಳಿಯನ್ನು ಹಾಕಿ ಮಿಕ್ಸ್ ಮಾಡಿ. ಈಗ ರುಚಿ ರುಚಿಯಾದ ಸಿಂಪಲ್ ಕೇರಳ ಚಿಕನ್ ರೋಸ್ಟ್ ಸವಿಯಲು ಸಿದ್ಧ.