ವೀಕೆಂಡ್ ಗೆ ಮಾಡಿ ಸವಿಯಿರಿ ‘ಚಿಕನ್ ಉರುವಲ್’

ವೀಕೆಂಡ್ ಗೆ ಮಾಡಿ ಸವಿಯಿರಿ ‘ಚಿಕನ್ ಉರುವಲ್’

YK   ¦    Nov 17, 2018 05:59:16 PM (IST)
 ವೀಕೆಂಡ್ ಗೆ ಮಾಡಿ ಸವಿಯಿರಿ ‘ಚಿಕನ್ ಉರುವಲ್’

ಚಿಕನ್ ಎಂದರೆ ಮಾಂಸ ಪ್ರಿಯರ ಲಿಸ್ಟ್ ನಲ್ಲಿ ಮೊದಲನೆಯ ಸ್ಥಾನದಲ್ಲಿರುವ ಪದಾರ್ಥ. ವೀಕೆಂಡ್ ಬಂತೆಂದರೆ ಎಲ್ಲರಿಗೂ ಮಾಮೂಲಿ ಚಿಕನ್ ಕಬಾಬ್, ಬಿರಿಯಾನಿ ತಿನ್ನುವುದಕ್ಕಿಂತ ಬೇರೆನೋ ಬೇಕೆನಿಸುತ್ತದೆ. ಅಂತವರಿಗೆ ಮನೆಯಲ್ಲಿಯೇ ತುಂಬಾ ಸ್ಪೆಷಲ್ ಹಾಗೂ ರುಚಿಯಾಗಿ ಚಿಕನ್ ಉರುವಲ್ ನ್ನು ತಯಾರಿಸಬಹುದು. ಇದು ಬಾಯಿಗೆ ಹೊಸ ರುಚಿಯನ್ನು ನೀಡುತ್ತದೆ.

ಬೇಕಾಗುವ ಸಾಮಾಗ್ರಿಗಳು:

1 ಕೆಜಿ ಚಿಕನ್
1 ಚಮಚ ಅರಿಶಿನ
1 ಚಮಚ ಗರಂ ಮಸಾಲ ಹುಡಿ
2 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
2 ಚಮಚ ಲಿಂಬೆ ರಸ
30 ಬ್ಯಾಡಗಿ ಮೆಣಸು
25 ಗೋಡಂಬಿ
ಉಪ್ಪು ರುಚಿಗೆ
ಕರಿಬೇವು ಸೊಪ್ಪು
ತುಪ್ಪ-100ಗ್ರಾಂ
ಮಾಡುವ ವಿಧಾನ:

ಮೊದಲನೇ ಹಂತ: ಮೊದಲು ಒಂದು ಬಾಣಲೆಗೆ ಉಪ್ಪು, 1 ಚಮಚ ಗರಂ ಮಸಾಲ, ಅರಿಶಿನ, ಶುಂಠಿ ಬೆಳ್ಳುಳ್ಳಿ ಪೇಸ್ಟ್ , ಲಿಂಬೆ ರಸ ಹಾಕಿ ನಂತರ ಕಟ್ ಮಾಡಿ ಇಟ್ಟುಕೊಂಡ ಕೋಳಿ ಮಾಂಸವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 1 ಗಂಟೆಗಳ ಕಾಲ ನೆನೆಯಲು ಬಿಡಿ.

ಎರಡನೇ ವಿಧಾನ: ಒಂದು ಚಿಕ್ಕ ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ 30 ಮೆಣಸನ್ನು ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಿ. ಇನ್ನೊಂದು ಪಾತ್ರೆಯಲ್ಲಿ ಕರಿಬೇವು ಸೊಪ್ಪು ಹಾಕಿ ನೀರಿನಾಂಶ ಹೋದ ಬಳಿಕ ತುಪ್ಪ ಹಾಕಿ ಚೆನ್ನಾಗಿ ಹುರಿದು ನಂತರ ಗೇರು ಬೀಜ ಹಾಕಿ ಹುರಿಯಿರಿ. ನಂತರ 10 ಬ್ಯಾಡಗಿ ಮೆಣಸು ಹಾಕಿ ಚೆನ್ನಾಗಿ ಹುರಿದು ಪಕ್ಕದಲ್ಲಿ ಇಡಿ. ಇದೀಗ ನೀರಿನಲ್ಲಿ ಬೆಂದ ಮೆಣಸನ್ನು ತೆಗೆದು ಉರಿ ಹೋದ ಬಳಿಕ ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ತುಪ್ಪ ಹುರಿದುಕೊಂಡ ಬಾಣಲೆಯಲ್ಲೆ ಮೆಣಸಿನ ಹಿಟ್ಟನ್ನು ಹಾಕಿ 5 ನಿಮಿಷ ಬಾಡಿಸಿ. ನಂತರ ಅದಕ್ಕೆ ಮಿಕ್ಸ್ ಮಾಡಿ ಇಟ್ಟುಕೊಂಡ ಕೋಳಿ ಮಾಂಸವನ್ನು ಹಾಕಿ 10 ನಿಮಿಷ ಬೇಯಲು ಬಿಡಿ. ನೀರಿನಾಂಶ ಕಡಿಮೆ ಆದ ಬಳಿಕ ಒಗ್ಗರಣೆ ಮಾಡಿ ಇಟ್ಟುಕೊಂಡ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನೀರಿನಾಂಶ ಹೋಗಿ, ಪ್ರೈ ಆಗುವವರೆಗೆ ಚೆನ್ನಾಗಿ ಹುರಿಯಿರಿ. ಇದೀಗ ಚಿಕನ್ ಉರುವಲ್ ಸವಿಯಲು ಸಿದ್ದ. ಇದನ್ನು ನೀರು ದೋಸೆ ಹಾಗೂ ಊಟದ ಜತೆಗೆ ಸವಿಯಬಹುದು.