40ರೂ ಹೊಟ್ಟೆ ತುಂಬಾ ಬಿರಿಯಾನಿ ನೀಡುತ್ತಿರುವ ಕೃಷ್ಣ

40ರೂ ಹೊಟ್ಟೆ ತುಂಬಾ ಬಿರಿಯಾನಿ ನೀಡುತ್ತಿರುವ ಕೃಷ್ಣ

YK   ¦    Oct 13, 2018 05:42:45 PM (IST)
40ರೂ ಹೊಟ್ಟೆ ತುಂಬಾ ಬಿರಿಯಾನಿ ನೀಡುತ್ತಿರುವ ಕೃಷ್ಣ

ಮಾಂಸ ಆಹಾರದ ಪಟ್ಟಿಯಲ್ಲಿ ಚಿಕನ್ ಬಿರಿಯಾನಿ ಯಾವಾಗಲೂ ಮುಂಚೂಣಿಯಲ್ಲಿರುವ ಖಾದ್ಯ. ಬಿರಿಯಾನಿ ತಿನ್ನಲು ತುಂಬಾ ರುಚಿಕರವಾಗಿದ್ದು ಅಷ್ಟೇ ದುಬಾರಿ ಕೂಡ ಹೌದು. ಜೇಬಲ್ಲಿ ದುಡ್ಡಿದ್ದವರೂ ಮಾತ್ರ ವಾರಕ್ಕೆ ಒಂದು ಭಾರಿಯಾದರೂ ಸವಿಯಬಹುದು. ಅಂತವರಿಗೆ ನಗರದಲ್ಲಿರುವ ಕ್ಯಾಂಟೀನ್ ವೊಂದರಲ್ಲಿ ಪ್ರತೀ ಶನಿವಾರ ತುಂಬಾ ಕಡಿಮೆ ದರದಲ್ಲಿ ಹೊಟ್ಟೆ ತುಂಬಾ ಬಿರಿಯಾನಿಯನ್ನು ಸವಿಯಬಹುದು.

ನಗರದ ಗೋರಿಗುಡ್ಡದಲ್ಲಿರುವ ಗುರುಪ್ರಸಾದ್ ಸಸ್ಯಹಾರಿ ಹಾಗೂ ಮಾಂಸಾಹಾರಿ ಕ್ಯಾಂಟೀನ್ ವೊಂದರಲ್ಲಿ ಬಿರಿಯಾನಿ ಪ್ರಿಯರನ್ನು ತೃಪ್ತಿ ಪಡಿಸುವ ನಿಟ್ಟಿನಲ್ಲಿ ಕ್ಯಾಂಟೀನ್ ಮಾಲೀಕರಾದ ಎಂ.ಕೃಷ್ಣ ಅವರು 23 ವರ್ಷಗಳಿಂದ ಪ್ರತಿ ಶನಿವಾರ ಹಾಫ್ ಬಿರಿಯಾನಿಯನ್ನು ₹ 40 ಹಾಗೂ ಫುಲ್ ಬಿರಿಯಾನಿಯನ್ನು 80 ರೂ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ.

25 ವರ್ಷಗಳ ಹಿಂದೆ ಅಡುಗೆ ತಯಾರಿ ಕೆಲಸ ಮಾಡುತ್ತಿದ್ದ ಎಂ. ಕೃಷ್ಣ ಅವರು ತನ್ನ ಸ್ನೇಹಿತರ ಬಳಗದ ಒತ್ತಡಕ್ಕೆ ಮಣಿದು ನಗರದ ಪಂಪ್ ವೆಲ್ ನ ಗೋರಿಗುಡ್ಡದಲ್ಲಿ ಕ್ಯಾಂಟೀನ್ ನೊಂದನ್ನು ಆರಂಭಿಸುತ್ತಾರೆ. 1995ರಲ್ಲಿ ಬಿರಿಯಾನಿ ತುಂಬಾ ಅಪರೂಪವಾದ ಖಾದ್ಯವಾಗಿದ್ದರಿಂದ ತನ್ನ ಗ್ರಾಹಕರಿಗೆ ಅಪರೂಪಕ್ಕೆ ಒಮ್ಮೆಯಾದರೂ ಖುಷಿ ಕೊಡಬೇಕೆಂಬ ದೃಷ್ಟಿಯಿಂದ ಶನಿವಾರ ಬಿರಿಯಾನಿ ವಿಶೇಷ ಖಾದ್ಯವನ್ನು ಆರಂಭಿಸುತ್ತಾರೆ. ಅಂದಿನಿಂದ ಗ್ರಾಹಕರು ನಮ್ಮಲ್ಲಿ ತಯಾರಾದ ಬಿರಿಯಾನಿಯನ್ನು ಇಷ್ಟ ಪಟ್ಟು ಸವಿಯುತ್ತಿದ್ದರು. ಇಲ್ಲಿ ಜನಸಾಮಾನ್ಯರು, ಕೂಲಿ ಕಾರ್ಮಿಕರು ಹೆಚ್ಚು ಬರುತ್ತುರುವುದರಿಂದ ಅವರನ್ನು ತೃಪ್ತಿ ಪಡಿಸುವುದಕ್ಕಾಗಿ ಪ್ರತಿ ಶನಿವಾರ ಹಾಫ್ ಬಿರಿಯಾನಿಗೆ 40ರೂ ಹಾಗೂ ಫುಲ್ ಬಿರಿಯಾನಿಗೆ 80 ರೂಪಾಯಿ ನಿಗದಿ ಮಾಡಿದ್ದೇವು. ಅಂದಿನಿಂದಲೂ ಶನಿವಾರ ಮಧ್ಯಾಹ್ನ 12ಕ್ಕೆ ಬಿರಿಯಾನಿಗಾಗಿ ತುಂಬಾ ಜನ ಸರಥಿ ಸಾಲಿನಲ್ಲಿ ನಿಲ್ಲುತ್ತಾರೆ ಎನ್ನುತ್ತಾರೆ ಮಾಲೀಕ ಕೃಷ್ಣ.

ಅದಲ್ಲದೆ ಬಿರಿಯಾನಿ ತಯಾರಿಸುವ ಗುಣಮಟ್ಟದಲ್ಲಿಯೂ ಯಾವುದೇ ರಾಜಿ ಮಾಡಿಕೊಳ್ಳದ ಇವರು, ಒಮ್ಮೇ ಇಲ್ಲಿನ ಬಿರಿಯಾನಿ ರುಚಿ ನೋಡಿದರೆ ಮುಂದಿನ ಶನಿವಾರವೂ ನೀವು ಹಾಜರಾಗುತ್ತೀರಿ.

ಅದಲ್ಲದೆ ಈ ಕ್ಯಾಂಟೀನ್ ನಲ್ಲಿ ಪ್ರತಿ ಸೋಮವಾರ ಊಟಕ್ಕೆ ಬರುವ ಗ್ರಾಹಕರಿಗೆ ಒಂದು ಚಮಚ ಪಾಯಸವನ್ನು ಉಚಿತವಾಗಿ ಬಡಿಸಲಾಗುತ್ತದೆ.