ಕ್ಯಾಪ್ಸಿಕಂ ಫ್ರೈ ನೀವೇ ಮಾಡಿ ಬಿಡಿ

ಕ್ಯಾಪ್ಸಿಕಂ ಫ್ರೈ ನೀವೇ ಮಾಡಿ ಬಿಡಿ

LK   ¦    Jun 30, 2018 02:10:24 PM (IST)
ಕ್ಯಾಪ್ಸಿಕಂ ಫ್ರೈ ನೀವೇ ಮಾಡಿ ಬಿಡಿ

ಸಾಮಾನ್ಯವಾಗಿ ದಪ್ಪ ಮೆಣಸಿಕಾಯಿ(ಕ್ಯಾಪ್ಸಿಕಂ)ನ್ನು ಎಲ್ಲರೂ ನಿತ್ಯದ ಅಡುಗೆಗಳಲ್ಲಿ ಬಳಸುತ್ತಾರೆ. ಇದನ್ನು ಬಳಸಿ ಹಲವು ಖಾದ್ಯಗಳನ್ನು ಮಾಡುತ್ತಾರೆ. ಕ್ಯಾಪ್ಸಿಕಂ ಫ್ರೈ, ಪಲ್ಯ ಹೀಗೆ ಬೇರೆ ಬೇರೆ ವಿಧಾನಗಳಿಂದ ವಿವಿಧ ಖಾದ್ಯಗಳನ್ನು ತಯಾರು ಮಾಡಬಹುದಾಗಿದೆ. ಅದರೊಂದಿಗೆ ಮಸಾಲೆ ಸೇರಿದರೆ ಅದರ ರುಚಿಯೇ ವಿಭಿನ್ನವಾಗಿರುತ್ತದೆ. ಇಡೀ ಕ್ಯಾಪ್ಸಿಕಂ ಬಳಸಿ ಮಾಡುವ ಫ್ರೈ ತುಂಬಾ ರುಚಿಯಾಗಿರುತ್ತದೆ. ಅದನ್ನು ಮಾಡುವುದು ಹೇಗೆ ಎಂಬುದು ಇಲ್ಲಿದೆ.

ಕ್ಯಾಪ್ಸಿಕಂ ಫ್ರೈ ಮಾಡಲು ಬೇಕಾಗುವ ಪದಾರ್ಥಗಳು

ಕ್ಯಾಪ್ಸಿಕಂ, ಈರುಳ್ಳಿ, ಸಾಸಿವೆ, ಬೀನ್ಸ್, ಕ್ಯಾರೆಟ್, ಆಲೂಗೆಡ್ಡೆ, ಹಸಿಮೆಣಸಿನಕಾಯಿ, ಉಪ್ಪು ಅರಿಶಿಣ ಪುಡಿ- ಚಿಟಿಕೆ, ದನಿಯಾಪುಡಿ-ಕಾಲು ಚಮಚ, ವಾಂಗಿಬಾತ್ ಪುಡಿ-ಅರ್ಧಚಮಚ, ಕೊತ್ತಂಬರಿ ಸೊಪ್ಪು, ಎಣ್ಣೆ- ಸ್ವಲ್ಪ

ಮಾಡುವ ವಿಧಾನ ಹೀಗಿದೆ
ಮೊದಲಿಗೆ ತರಕಾರಿ(ಕ್ಯಾರೆಟ್, ಬೀನ್ಸ್, ಆಲೂಗೆಡ್ಡೆ, ಈರುಳ್ಳಿ, ಮೆಣಸಿಕಾಯಿ)ಗಳನ್ನು ತೆಗೆದುಕೊಂಡು ಚಿಕ್ಕದಾಗಿ ಕತ್ತರಿಸಿಟ್ಟುಕೊಳ್ಳಬೇಕು. ಕ್ಯಾಪ್ಸಿಕಂ ತೆಗೆದುಕೊಂಡು ಅದರ ಮೇಲ್ಭಾಗ ತೊಟ್ಟಿರುವ ಕಡೆ ಮಾತ್ರ ಕತ್ತರಿಸಿ ತೆಗೆಯಬೇಕು. ಇನ್ನೊಂದೆಡೆ ಬಾಣಲೆಯಲ್ಲಿ ಎಣ್ಣೆ ಹಾಕಿ ಮೊದಲು ಸಾಸಿವೆ ಹಾಕಿ ಅದು ಸಿಡಿದ ಬಳಿಕ ಈರುಳ್ಳಿ ಹಾಕಿ ಹುರಿಯಬೇಕು, ನಂತರ ಒಂದೊಂದೇ ತರಕಾರಿಗಳನ್ನು ಹಾಕುತ್ತಾ ಚೆನ್ನಾಗಿ ಹುರಿದು ಬೇಯಿಸಬೇಕು ಬಳಿಕ ಅದಕ್ಕೆ ಉಪ್ಪು, ಅರಶಿಣ, ದನಿಯಾ, ವಾಂಗಿಬಾತ್, ಕೊತ್ತಂಬರಿ ಸೊಪ್ಪನ್ನು ಹಾಕಿ ಸೇರಿಸಿ ಹುರಿದುಕೊಂಡು ನಂತರ ತೆಗೆದು ಕ್ಯಾಪ್ಸಿಕಂ ಒಳಗೆ ತುಂಬಿಸಿ ಮತ್ತೆ ಎಣ್ಣೆಯಲ್ಲಿ ಹಾಕಿ ಸ್ವಲ್ಪ ಬೇಯಿಸಿದರೆ ಕ್ಯಾಪ್ಸಿಕಂ ಫ್ರೈ ಸವಿಯಲು ರೆಡಿ.