ರುಚಿ ಶುಚಿಯಾದ ಸೌತೆಕಾಯಿ ಇಡ್ಲಿ

ರುಚಿ ಶುಚಿಯಾದ ಸೌತೆಕಾಯಿ ಇಡ್ಲಿ

LK   ¦    Nov 23, 2018 02:17:28 PM (IST)
ರುಚಿ ಶುಚಿಯಾದ ಸೌತೆಕಾಯಿ ಇಡ್ಲಿ

ನಾಲಿಗೆಗೆ ರುಚಿ ಮಾತ್ರವಲ್ಲದೆ ಆರೋಗ್ಯಕ್ಕೆ ಪೂರಕವಾದ ಪದಾರ್ಥಗಳನ್ನು ತಯಾರಿಸಿ ಸೇವಿಸುವುದನ್ನು ರೂಢಿಸಿಕೊಂಡರೆ ಎಲ್ಲ ರೀತಿಯಲ್ಲೂ ಒಳ್ಳೆಯದಾಗುತ್ತದೆ. ಇಂತಹ ಪದಾರ್ಥಗಳಲ್ಲಿ ಸೌತೆಕಾಯಿ ಇಡ್ಲಿಯೂ ಒಂದಾಗಿದೆ. ಇದನ್ನು ಮಾಡುವುದು ಹೇಗೆ ಮತ್ತು ಬೇಕಾಗುವ ಪದಾರ್ಥಗಳ ವಿವರ ಇಲ್ಲಿದೆ.

ಸೌತೆಕಾಯಿ-1 (ಚಿಕ್ಕದು)

ಅಕ್ಕಿ-2 ಬಟ್ಟಲು

ಅವಲಕ್ಕಿ- ಸ್ವಲ್ಪ

ತೆಂಗಿನಕಾಯಿತುರಿ-ಅರ್ಧ ಬಟ್ಟಲು

ರವೆ- ಅರ್ಧ ಬಟ್ಟಲು

ಮೊಸರು- ಅರ್ಧಬಟ್ಟಲು

ಉಪ್ಪು- ರುಚಿಗೆ ತಕ್ಕಷ್ಟು

ಹಸಿಮೆಣಸಿನ ಕಾಯಿ- ಖಾರಕ್ಕೆ ತಕ್ಕಂತೆ

ಸೌತೆಕಾಯಿ ಇಡ್ಲಿ ಮಾಡುವ ವಿಧಾನ ಹೀಗಿದೆ

ಮೊದಲಿಗೆ ಅಕ್ಕಿಯನ್ನು ಬಾಣಲೆಯಲ್ಲಿ ಸ್ವಲ್ಪ ಹುರಿದು ನೀರಿನಲ್ಲಿ ಸುಮಾರು 2 ಗಂಟೆಗಳ ಕಾಲ ನೆನೆಸಿಡಬೇಕು. ಇನ್ನೊಂದೆಡೆ ಸೌತೆಕಾಯಿಯನ್ನು ಚಿಕ್ಕದಾಗಿ ಹಚ್ಚಿಟ್ಟುಕೊಳ್ಳಬೇಕು. ಮತ್ತೊಂದೆಡೆ ರವೆಯನ್ನು ತುಪ್ಪದಲ್ಲಿ ಹುರಿದಿಟ್ಟುಕೊಳ್ಳಬೇಕು. ಆ ನಂತರ ಅಕ್ಕಿ, ಸೌತೆಕಾಯಿ, ತೆಂಗಿನ ತುರಿ, ಅವಲಕ್ಕಿ, ಉಪ್ಪು ಎಲ್ಲವನ್ನು ಹಾಕಿ ನೀರು ಹಾಕದೆ ರುಬ್ಬಬೇಕು. ಹೀಗೆ ರುಬ್ಬಿದ ಹಿಟ್ಟು ಸ್ವಲ್ಪ ಮಂದವಾಗಿದ್ದಷ್ಟು ಒಳ್ಳೆಯದು. ಬಳಿಕ ಅದಕ್ಕೆ ರವೆ ಮತ್ತು ಗಟ್ಟಿಮೊಸರು, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ ಚೂರು ಸೇರಿಸಿ ಇಡ್ಲಿ ಪಾತ್ರೆಯಲ್ಲಿಟ್ಟು ಬೇಯಿಸಿದರೆ ಸೌತೆಕಾಯಿ ಇಡ್ಲಿ ರೆಡಿ.