ಕ್ಯಾರೆಟ್ ರೈಸ್ ಬಾತ್

ಕ್ಯಾರೆಟ್ ರೈಸ್ ಬಾತ್

Feb 20, 2017 08:35:31 AM (IST)

ಬೇಕಾಗುವ ಪದಾರ್ಥಗಳು
*ಅನ್ನ- 2 ಕಪ್
*ಕ್ಯಾರೆಟ್ಗಳು- 4-5 (ಉದ್ದುದ್ದಕ್ಕೆ ಕತ್ತರಿಸಿರಬೇಕು)
*ಈರುಳ್ಳಿಗಳು - 2 (ಕತ್ತರಿಸಿದಂತಹುದು)
*ದಪ್ಪ ಮೆಣಸಿನ ಕಾಯಿ - 1 (ಕತ್ತರಿಸಿದಂತಹುದು)
*ಹಸಿ ಮೆಣಸಿನ ಕಾಯಿ- 3-4 (ಕತ್ತರಿಸಿದಂತಹುದು)
*ಬೆಳ್ಳುಳ್ಳಿ - 3 (ರುಬ್ಬಿದ ಅಥವಾ ಜಜ್ಜಿದಂತಹುದು)
*ಶುಂಠಿ - ½ ಇಂಚು (ಸಣ್ಣಗೆ ಕತ್ತರಿಸಿದಂತಹುದು)
*ಅರಿಶಿನ ಪುಡಿ- 1 ಟೀ.ಚಮಚ
*ಖಾರದ ಪುಡಿ - 1 ಟೀ.ಚಮಚ
*ಪಲಾವ್ ಮಸಾಲ - ಅರ್ಧ ಟೀ.ಚಮಚ
*ಕರಿ ಮೆಣಸು - ಅರ್ಧ ಟೀ.ಚಮಚ (ಪುಡಿ ಮಾಡಿದಂತಹುದು)
*ಜೀರಿಗೆ - ಅರ್ಧ ಟೀ.ಚಮಚ
*ಉಪ್ಪು - ರುಚಿಗೆ ತಕ್ಕಷ್ಟು
*ಎಣ್ಣೆ- 2 ಟೀ.ಚಮಚ
*ಕೊತ್ತಂಬರಿ ಸೊಪ್ಪು - 1 ಟೀ.ಚಮಚ (ಕತ್ತರಿಸಿದಂತಹುದು)
ಮಾಡುವ ವಿಧಾನ:ಆಳವಾದ ತಳವಿರುವ ಬಾಣಲೆಯನ್ನು ತೆಗೆದುಕೊಂಡು ಎಣ್ಣೆಯನ್ನು ಕಾಯಿಸಿ, ಅದು ಹಬೆಯಾಡಲು ಆರಂಭಿಸಿದಾಗ ಅದಕ್ಕೆ ಜೀರಿಗೆ ಹಾಕಿ ಸೌಟು ಆಡಿಸಿ, ನಂತರ ಈರುಳ್ಳಿಯನ್ನು ಹಾಕಿ, ಅದು ಕೆಂಪಾಗುವವರೆಗೆ ಚೆನ್ನಾಗಿ ಹುರಿಯಿರಿ. ಒಮ್ಮೆ ಈರುಳ್ಳಿ ಕೆಂಪು ಬಣ್ಣಕ್ಕೆ ತಿರುಗಿದ ನಂತರ, ಶುಂಠಿ, ಬೆಳ್ಳುಳ್ಳಿ, ಕ್ಯಾರೆಟ್ ಮತ್ತು ದಪ್ಪ ಮೆಣಸಿನ ಕಾಯಿಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಇಷ್ಟೆಲ್ಲಾ ಆದ ನಂತರ ಅದಕ್ಕೆ ರುಚಿಗಷ್ಟು ಉಪ್ಪು ಮತ್ತು ಅರಿಶಿನ ಪುಡಿಯನ್ನು ಚಿಮುಕಿಸಿ. ಇನ್ನು ಕಡಿಮೆ ಉರಿಯಲ್ಲಿ ಈ ಮಿಶ್ರಣವನ್ನು 4-5 ನಿಮಿಷಗಳ ಕಾಲ ಚೆನ್ನಾಗಿ ಕಲೆಸುತ್ತ ಇರಿ. ಈ ತರಕಾರಿಗಳು ಸ್ವಲ್ಪ ಮೃದುವಾಗುವವರೆಗು ಇದನ್ನು ಮುಂದುವರಿಸಿ. ಈಗ ಇದಕ್ಕೆ ಮಸಾಲೆಯನ್ನು ಬೆರೆಸಿ, ಅಂದರೆ ಕರಿಮೆಣಸು, ಖಾರದ ಪುಡಿ, ಪಲಾವ್ ಮಸಾಲೆ, ಹಾಗು ಹಸಿ ಮೆಣಸಿನ ಕಾಯಿಗಳನ್ನು ಬೆರೆಸಿ, ಚೆನ್ನಾಗಿ ಕಲೆಸಿ ಕೊಡಿ. ಇದಕ್ಕೆ ನಿಧಾನವಾಗಿ ಅನ್ನವನ್ನು ಬೆರೆಸಿ ಮತ್ತು ಮಸಾಲೆಯು ಸಂಪೂರ್ಣವಾಗಿ ಬೆರೆಸಲಾಗಿದೆಯೇ ಇಲ್ಲವೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. *ತದನಂತರ ಇದನ್ನು ಮಧ್ಯಮ ಗಾತ್ರದ ಉರಿಯ ಮೇಲೆ ಸ್ವಲ್ಪ ಹೊತ್ತು ಇಡಿ. ಕ್ಯಾರೆಟ್ ರೈಸ್ ಬಾತ್ ರೆಸಿಪಿ ಈಗ ಬಡಿಸಲು ಸಿದ್ಧವಾಗಿದೆ, ಒಮ್ಮೆ ರುಚಿ ನೋಡಿ. ಇದರ ಮೇಲೆ ಅಲಂಕಾರಕ್ಕಾಗಿ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಚಿಮುಕಿಸಿ ಮತ್ತು ರಾಯಿತ ಅಥವಾ ಸಲಾಡ್ ಜೊತೆಗೆ ಬಿಸಿ ಬಿಸಿಯಾಗಿ ಬಡಿಸಿಕೊಳ್ಳಿ.