ಉದ್ದು ದಾಲ್ ನ ರುಚಿ ನೋಡಿ

ಉದ್ದು ದಾಲ್ ನ ರುಚಿ ನೋಡಿ

LK   ¦    Mar 29, 2019 02:59:01 PM (IST)
ಉದ್ದು ದಾಲ್ ನ ರುಚಿ ನೋಡಿ

ಚಪಾತಿ ಮತ್ತು ರೋಟಿಗೆ ದಾಲ್ ಒಳ್ಳೆಯ ಕಾಂಬಿನೇಷನ್. ಹೀಗಾಗಿ ದಾಲ್ ನ್ನು ಬೇರೆ, ಬೇರೆ ಬೇಳೆಗಳನ್ನು ಬಳಸಿಕೊಂಡು ಮಾಡುತ್ತಾರೆ. ಉದ್ದಿನ ಬೇಳೆಯಿಂದ ಮಾಡುವ ದಾಲ್ ಕೂಡ ರುಚಿಯಾಗಿರುತ್ತದೆಯಲ್ಲದೆ, ಚಪಾತಿ ಮತ್ತು ರೋಟಿಯೊಂದಿಗೆ ಸೇವಿಸಲು ಮಜಾ ಕೊಡುತ್ತದೆ. ಹಾಗಾದರೆ ಉದ್ದುದಾಲ್ ಮಾಡುವುದು ಹೇಗೆ ಎಂಬುದು ಇಲ್ಲಿದೆ.

ಉದ್ದು ದಾಲ್ ಮಾಡಲು ಬೇಕಾಗುವ ಪದಾರ್ಥಗಳು

ಕಪ್ಪುಉದ್ದು- 2ಕಪ್

ಅರಸಿನ- 1 ಟೀ ಚಮಚ

ಜೀರಿಗೆ- 2ಚಮಚ

ಗರಂಮಸಾಲ- 2 ಚಮಚ

ಸಾಸಿವೆ- ಸ್ವಲ್ಪ

ಈರುಳ್ಳಿ-2(ದೊಡ್ಡದು)

ತುಪ್ಪ-ಒಂದು ಕಪ್

ಶುಂಠಿ-ಬೆಳ್ಳುಳ್ಳಿ ಪೇಸ್ಟ್-2ಚಮಚ

ಉಪ್ಪು- ರುಚಿಗೆ ತಕ್ಕಂತೆ

ಕೊತ್ತಂಬರಿಸೊಪ್ಪು- ಸ್ವಲ್ಪ

ಉದ್ದು ದಾಲ್ ಮಾಡುವ ವಿಧಾನ ಹೀಗಿದೆ.

ಬೆಳಿಗ್ಗೆ ತಿಂಡಿಗೆ ದಾಲ್ ಮಾಡುವುದಾದರೆ ಹಿಂದಿನ ರಾತ್ರಿಯೇ ಉದ್ದುವನ್ನು ನೀರಿನಲ್ಲಿ ನೆನೆಯಲು ಹಾಕಬೇಕು. ಕನಿಷ್ಟ ಆರು ಗಂಟೆಗಳ ಕಾಲವಾದರೂ ನೆನೆಯಬೇಕು. ಹೀಗೆ ನೆನೆಯಲು ಹಾಕಿದ ಉದ್ದುವನ್ನು ತೆಗೆದಿಟ್ಟುಕೊಳ್ಳಬೇಕು. ಇನ್ನೊಂದೆಡೆ ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿಟ್ಟುಕೊಳ್ಳಬೇಕು. ಆ ನಂತರ ನೆನೆಸಿದ ಉದ್ದಿನ ಬೇಳೆಯನ್ನು ಕುಕ್ಕರ್‍ನಲ್ಲಿ ಹಾಕಿ ಅದಕ್ಕೆ ಉಪ್ಪು ಮತ್ತು ತುಪ್ಪ ಹೊರತು ಪಡಿಸಿ ಉಳಿದ ಎಲ್ಲ ಮಸಾಲೆಯನ್ನು ಹಾಕಿ ನೀರು ಸೇರಿಸಿ ಒಂದೆರಡು ವಿಶಲ್ ಕೂಗಿಸಿ ತೆಗೆಯಬೇಕು.

ಬಳಿಕ ಬಾಣಲೆಯಲ್ಲಿ ತುಪ್ಪ ಹಾಕಿ ಅದು ಬಿಸಿ ಆದ ಬಳಿಕ ಸಾಸಿವೆ ಹಾಕಿ ಸಿಡಿಸಿ ಆ ನಂತರ ಕುಕ್ಕರ್ ನಲ್ಲಿ ಬೇಯಿಸಿದ ಉದ್ದುವನ್ನು ಸುರಿಯಬೇಕು. ನಂತರ ಚೆನ್ನಾಗಿ ಕುದಿಸಬೇಕು ರುಚಿ ನೋಡಿಕೊಂಡು ಉಪ್ಪು ಹಾಕಬೇಕು. ಆ ನಂತರ ಇಳಿಸಿ ಅದರ ಮೇಲೆ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ಉದ್ದುದಾಲ್ ಸವಿಯಲು ಸಿದ್ದವಾದಂತೆಯೇ.