ಬಿಸಿ ಬಿಸಿ ಕ್ಯಾಬೇಜ್ ವಡಾ ಸೇವಿಸಿ...

ಬಿಸಿ ಬಿಸಿ ಕ್ಯಾಬೇಜ್ ವಡಾ ಸೇವಿಸಿ...

LK   ¦    Jan 16, 2019 03:22:46 PM (IST)
ಬಿಸಿ ಬಿಸಿ ಕ್ಯಾಬೇಜ್ ವಡಾ ಸೇವಿಸಿ...

ಕ್ಯಾಬೇಜ್ ವಡಾ ರುಚಿಯಾದ ಚಳಿಗೆ ಕಾಫಿ ಜತೆಗೆ ಮಜಾ ಕೊಡುವ ತಿಂಡಿ. ಇದನ್ನು ಕೂಡ ಇತರೆ ವಡಾಗಳಂತೆ ಮಾಡಬಹುದಾಗಿದೆ. ಇದನ್ನು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಮತ್ತು ಮಾಡುವ ವಿಧಾನದ ಬಗ್ಗೆ ವಿವರ ಇಲ್ಲಿದೆ.

ಕ್ಯಾಬೇಜ್ ವಡಾಗೆ ಬೇಕಾಗುವ ಪದಾರ್ಥಗಳು

ಕ್ಯಾಬೇಜ್: ಸಣ್ಣಗೆ ಹಚ್ಚಿದ ಕಾಲು ಕಪ್

ಉದ್ದಿನ ಬೇಳೆ: ಒಂದು ಕಪ್

ಹಸಿಮೆಣಸು- 6

ಕೊತ್ತಂಬರಿ ಸೊಪ್ಪು- ಸ್ವಲ್ಪ

ಉಪ್ಪು- ರುಚಿಗೆ ತಕ್ಕಷ್ಟು

ಎಣ್ಣೆ- ಕರಿಯಲು ಬೇಕಾಗುವಷ್ಟೆ

ಕ್ಯಾಬೇಜ್ ವಡಾ ಮಾಡುವ ವಿಧಾನ

ಮೊದಲಿಗೆ ಉದ್ದಿನ ಬೇಳೆಯನ್ನು ನೀರಿನಲ್ಲಿ ನೆನೆಯಲು ಹಾಕಬೇಕು. ಎರಡ್ಮೂರು ಗಂಟೆಗಳ ಕಾಲ ನೆನೆದ ಬಳಿಕ ಅದನ್ನು ತರಿತರಿಯಾಗಿ ರುಬ್ಬಿಕೊಳ್ಳಬೇಕು. ಇದಾದ ಬಳಿಕ ಅದಕ್ಕೆ ಹಚ್ಚಿದ ಹಸಿಮೆಣಸು, ಕ್ಯಾಬೇಜ್, ಉಪ್ಪು, ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಸೇರಿಸಿ ಗಟ್ಟಿಯಾಗಿ ಕಲೆಸಬೇಕು. ಬಳಿಕ ಚಿಕ್ಕದಾಗಿ ಉಂಡೆ ಮಾಡಿಕೊಂಡು ಅದನ್ನು ತಟ್ಟಿ ಎಣ್ಣೆಗೆ ಹಾಕಿ ಕಂದು ಬಣ್ಣ ಬರೋ ತನಕ ಕರಿದರೆ ಕ್ಯಾಬೇಜ್ ವಡಾ ರೆಡಿ.