ಚಿಲ್ಕವರೆಯ ಕಿಚಡಿ ನೀವೇ ಮಾಡಿ ಬಿಡಿ!

ಚಿಲ್ಕವರೆಯ ಕಿಚಡಿ ನೀವೇ ಮಾಡಿ ಬಿಡಿ!

LK   ¦    May 23, 2018 12:13:12 PM (IST)
ಚಿಲ್ಕವರೆಯ ಕಿಚಡಿ ನೀವೇ ಮಾಡಿ ಬಿಡಿ!

ಇರೋದರಲ್ಲೇ ಏನಾದರೊಂದು ಮಾಡಿ ತಿಂದು ಬಿಟ್ಟರೆ ಅದರಲ್ಲೇನು ಮಜಾ ಇರಲ್ಲ ಬಿಡಿ. ಜತೆಗೆ ಒಂದೇ ಪದಾರ್ಥವನ್ನು ಆಗಾಗ್ಗೆ ತಿನ್ನುವುದು ಕೂಡ ಬೋರ್ ಹೊಡೆಸಿ ಬಿಡುತ್ತದೆ. ಇಂತಹ ಸಂದರ್ಭದಲ್ಲಿ ಹೊಸದಾಗಿ ಯಾವುದಾದರೊಂದು ಪದಾರ್ಥವನ್ನು ಮಾಡಿ ಸೇವಿಸುವುದು ಜಾಣತನ. ಬೆಳಗ್ಗಿನ ತಿಂಡಿಗೆ ಚಿಲ್ಕವರೆ ಕಿಚಡಿ ಒಮ್ಮೆ ಮಾಡಿ ನೋಡಿ.

ಚಿಲ್ಕವರೆಯ ಕಿಚಡಿಗೆ ಬೇಕಾಗುವ ಪದಾರ್ಥಗಳು

ತೆಂಗಿನ ಕಾಯಿತುರಿ- ಒಂದು ಬಟ್ಟಲು

ಒಣಮೆಣಸು-8

ಈರುಳ್ಳಿ- 2

ಬೇಳೆ-ಅರ್ಧಪಾವು,

ಹೆಸರು ಬೇಳೆ- ಅರ್ಧಪಾವು

ಚಿಲ್ಕವರೆ ಬೇಳೆ- ಅರ್ಧಪಾವು

ಅಕ್ಕಿ- ಒಂದು ಪಾವು

ಜೀರಿಗೆ- ಸ್ವಲ್ಪ

ಬೆಳ್ಳುಳ್ಳಿ- ಸ್ವಲ್ಪ

ದನಿಯಾ- ಸ್ವಲ್ಪ

ಎಣ್ಣೆ- ಸ್ವಲ್ಪ ಒಗ್ಗರಣೆಗೆ


ಮಾಡುವ ವಿಧಾನ ಹೀಗಿದೆ

ಮೊದಲಿಗೆ ಕಾಯಿ, ಒಣಮೆಣಸು, ಜೀರಿಗೆ, ಈರುಳ್ಳಿ, ಬೆಳ್ಳುಳ್ಳಿ, ದನಿಯಾವನ್ನು ಎಣ್ಣೆಯಲ್ಲಿ ಸ್ವಲ್ಪ ಹುರಿದು ಬಳಿಕ ಮಿಕ್ಸಿಯಲ್ಲಿ ಹಾಕಿ ರುಬ್ಬಿಟ್ಟುಕೊಳ್ಳಬೇಕು. ಇನ್ನೊಂದು ಕಡೆ ಒಗ್ಗರಣೆಗೆ ಕುಕ್ಕರಿಗೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಸಾಸಿವೆ ಹಾಕಿ ಅದು ಸಿಡಿದ ಬಳಿಕ ಹಚ್ಚಿಟ್ಟು ಸ್ವಲ್ಪ ಈರುಳ್ಳಿ, ಕರಿಬೇವು ಹಾಕಬೇಕು. ನಂತರ ಬೇಳೆ, ಹೆಸರು ಬೇಳೆ, ಚಿಲ್ಕವರೆ ಬೇಳೆ ಹಾಗೂ ರುಬ್ಬಿದ ಪದಾರ್ಥವನ್ನು ಹಾಕಿ ಬಳಿಕ ಅಕ್ಕಿ ಹಾಕಬೇಕು. ಆ ನಂತರ ರುಚಿಗೆ ತಕ್ಕಂತೆ ಉಪ್ಪು ಹಾಕಿ ಬೇಯಲು ಬೇಕಾಗುವಷ್ಟು ನೀರು ಹಾಕಿ ಮುಚ್ಚಿ ಒಂದೆರಡು ವಿಷಲ್ ಕೂಗಿದ ಬಳಿಕ ಇಳಿಸಿದರೆ ಚಿಲ್ಕವರೆಯ ಕಿಚಡಿ ರೆಡಿಯಾಗುತ್ತದೆ.