ಚಿಕನ್ ಪೆಪ್ಪರ್ ಪ್ರೈ ಹೀಗೂ ಮಾಡಬಹುದು

ಚಿಕನ್ ಪೆಪ್ಪರ್ ಪ್ರೈ ಹೀಗೂ ಮಾಡಬಹುದು

YK   ¦    Nov 25, 2019 02:51:04 PM (IST)
ಚಿಕನ್ ಪೆಪ್ಪರ್ ಪ್ರೈ ಹೀಗೂ ಮಾಡಬಹುದು

ಚಿಕನ್ ಪೆಪ್ಪರ್ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತೇ. ಕಡಿಮೆ ಅವಧಿಯಲ್ಲಿ ಚಿಕನ್ ಪೆಪ್ಪರ್ ಪದಾರ್ಥವನ್ನು ಮನೆಯಲ್ಲೇ ತಯಾರಿಸಬಹುದು.

ಬೇಕಾಗುವ ಸಾಮಾಗ್ರಿ
ಚಿಕನ್ ½ ಕೆಜಿ
ಕಾಳು ಮೆಣಸು 1 ½ ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್-1
ಹಸಿಮೆಣಸು 2
ಕೊತ್ತಂಬರಿ ಸೊಪ್ಪು
ಉಪ್ಪು- ರುಚಿಗೆ
ಎಣ್ಣೆ
ಈರುಳ್ಳಿ-2 ದೊಡ್ಡದು
ಕರಿಬೇವು
ಅರಿಶಿನ

ಮಾಡುವ ವಿಧಾನ: ಮೊದಲಿಗೆ ಎಣ್ಣೆ ಕಾಯಿಸಿ ಒಗ್ಗರಣೆ ಕೊಟ್ಟು ಈರುಳ್ಳಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ಮೆಣಸಿನ ಕಾಯಿ ಹಾಗೂ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಒಂದು ನಿಮಿಷ ಫ್ರೈ ಮಾಡಿ.

ನಂತರ ಕಟ್ ಮಾಡಿ ಇಟ್ಟುಕೊಂಡ ಕೋಳಿ ಮಾಂಸವನ್ನು ಹಾಕಿ. 5 ನಿಮಿಷದ ಬಳಿಕ ಪೆಪ್ಪರ್ ಪೌಡರ್ ಹಾಗೂ ಅರಿಶಿನ, ರುಚಿಗೆ ಬೇಕಾದಷ್ಟು ಉಪ್ಪು ಹಾಕಿ 10ರಿಂದ 15 ನಿಮಿಷ ಬೇಯಿಸಿ. ಕೊನೆಗೆ ಕೊತ್ತಂಬರಿ ಸೊಪ್ಪನ್ನು ಹಾಕಿ. ಇದೀಗ ರುಚಿಕರವಾದ ಚಿಕನ್ ಪೆಪ್ಪರ್ ಸವಿಯಲು ಸಿದ್ಧ.