ಟೆಂಟರ್ ಕೊಕನಟ್ ಆ್ಯಂಡ್ ಕ್ಯಾಶೂಸ್

ಟೆಂಟರ್ ಕೊಕನಟ್ ಆ್ಯಂಡ್ ಕ್ಯಾಶೂಸ್

VG   ¦    Jul 12, 2017 11:38:33 AM (IST)
ಟೆಂಟರ್ ಕೊಕನಟ್ ಆ್ಯಂಡ್ ಕ್ಯಾಶೂಸ್

ಎಳನೀರಿನಲ್ಲಿ ಪೊಟ್ಯಾಷಿಯಂ ಮತ್ತು ಕ್ಯಾಲ್ಸಿಯಂ ಅಂಶ ಹೇರಳವಾಗಿದೆ ಹಾಗೂ ಎಳನೀರು ಕುಡಿದರೆ ಬ್ಲೆಡ್ ಶುಗರ್ ಕಂಟ್ರೋಲ್ ಮಾಡಲು ಸಹಾಯವಾಗುತ್ತದೆ. ಎಳನೀರಿನ ಗಂಜಿಯನ್ನು ಹೆಚ್ಚಿನ ಜನ ತಿನ್ನುವುದಿಲ್ಲ. ಆದರೆ ಗೋವಾದಲ್ಲಿ ಈ ಎಳನೀರಿನ ಗಂಜಿಯಿಂದ ಒಂದು ಡಿಶ್ ತಯಾರಿಸುತ್ತಾರೆ.

ಬೇಕಾಗುವ ಸಾಮಗ್ರಿಗಳು:
ಎಳನೀರಿನ ಗಂಜಿ - ಒಂದು ಕಪ್
ಗೋಡಂಬಿ – ಒಂದು ಕಪ್
ತೆಂಗಿನಕಾಯಿ ಹಾಲು – ಕಾಲು ಕಪ್
ಹೆಚ್ಚಿದ ಟೊಮ್ಯಾಟೋ – ಅರ್ಧ ಕಪ್
ಹೆಚ್ಚಿದ ಈರುಳ್ಳಿ – ಒಂದು ಕಪ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಒಂದು ಸ್ಪೂನ್
ಜೀರ್ಗೆ ಪುಡಿ – ಒಂದು ಸ್ಪೂನ್
ಇಂಗು – ಅರ್ಧ ಸ್ಪೂನ್
ಗರಂ ಮಸಾಲಾ ಪುಡಿ - ಒಂದು ಸ್ಪೂನ್
ಅರಿಶಿನ - ಅರ್ಧ ಸ್ಪೂನ್
ಧನಿಯಾ ಪುಡಿ - ಒಂದು ಸ್ಪೂನ್
ಹಸಿಮೆಣಸಿನ ಕಾಯಿ - ಮೂರು
ರೆಡ್ ಚಿಲ್ಲಿ ಪೌಡರ್ -. ಒಂದು ಸ್ಪೂನ್
ಎಣ್ಣೆ – ಅರ್ಧ ಕಪ್
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
ಮೊದಲು ಗೋಡಂಬಿಯನ್ನು ಬಿಸಿ ನೀರಿನಲ್ಲಿ ನೆನೆಯಲು ಬಿಡಿ. ಬಳಿಕ ಒಂದು ಪ್ಯಾನಿನಲ್ಲಿ ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿಕೊಂಡು ಈರುಳ್ಳಿ, ಹಸಿಮೆಣಸಿನ ಕಾಯಿ, ಇಂಗು, ಟೊಮ್ಯಾಟೋ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಸೊಪ್ಪು ಎಲ್ಲವನ್ನೂ ಸೇರಿಸಿ 5 ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಸಣ್ಣಗೆ ಹೆಚ್ಚಿಕೊಂಡ ಎಳನೀರಿನ ಗಂಜಿ, ನೀರಿನಲ್ಲಿ ನೆನೆಸಿದ ಗೊಡಂಬಿ, ಧನಿಯಾ ಪುಡಿ, ಜೀರ್ಗೆಪುಡಿ, ಗರಂ ಮಸಾಲಾ ಪುಡಿ, ಅರಿಶಿನ, ರೆಡ್ ಚಿಲ್ಲಿ ಪೌಡರ್, ನೀರು ಸೇರಿಸಿ 5 ನಿಮಿಷ ಬೇಯಲು ಬಿಡಿ. ನಂತರ ಉಪ್ಪು, ತೆಂಗಿನಕಾಯಿ ಹಾಲು ಸೇರಿಸಿ ಸ್ಟೌ ಆಫ್ ಮಾಡಿ. ಸರ್ವಿಂಗ್ ಬೌಲ್ಗೆ ವರ್ಗಾಯಿಸಿ ಕೊತ್ತಂಬರಿ ಸೊಪ್ಪಿನಿಂದ ಗಾರ್ನಿಶ್ ಮಾಡಿ. ಈಗ ರುಚಿಯಾದ ಟೆಂಟರ್ ಕೊಕನಟ್ ಆ್ಯಂಡ್ ಕ್ಯಾಶೂಸ್ ತಿನ್ನಲು ರೆಡಿ. ಚಪಾತಿ, ದೋಸೆಯೊಂದಿಗೆ ತಿನ್ನಲು ತುಂಬಾ ರುಚಿಯಾಗಿರುತ್ತದೆ.