ಕರಾವಳಿ ಸ್ಟೈಲ್ 'ಬಂಗುಡೆ ಪುಲಿಮುಂಚಿ'

ಕರಾವಳಿ ಸ್ಟೈಲ್ 'ಬಂಗುಡೆ ಪುಲಿಮುಂಚಿ'

YK   ¦    Feb 04, 2020 03:41:27 PM (IST)
ಕರಾವಳಿ ಸ್ಟೈಲ್ 'ಬಂಗುಡೆ ಪುಲಿಮುಂಚಿ'

ಕರಾವಳಿಗರ ಮೀನಿನ ಪದಾರ್ಥಗಳಲ್ಲಿ ಬಂಗುಡೆ ಪುಲಿಮುಂಚಿ ತುಂಬಾನೇ ಫೇಮಸ್. ಸಿಂಪಲ್ ಆಗಿ ಹೀಗೂ ಮಾಡಬಹುದು.

ಬೇಕಾಗುವ ಸಾಮಾಗ್ರಿಗಳು:

ಕೆಂಪು ಮೆಣಸು-12
ಕೊತ್ತಂಬರಿ 4 ಚಮಚ
ಮೆಂತೆ- 5, 6 ಕಾಳು
ಬೆಳ್ಳುಳ್ಳಿ- 8 ಎಸಳು
ಜೀರಿಗೆ 1 ಚಮಚ
ಸಾಸಿವೆ- ½ ಚಮಚ
ಕರಿಬೇವು-6 ಎಸಳು
ಈ ಎಲ್ಲ ಮಿಶ್ರಣವನ್ನು ಹುರಿದು ನಂತರ ಹರಿಶಿಣ,ತೆಂಗಿನ ತುರಿ, ಸ್ವಲ್ಪ ಹುಳಿ ಹಾಕಿ ರುಬ್ಬಿಟ್ಟುಕ್ಕೊಳ್ಳಿ.

6 ಬಂಗುಡೆ ಮೀನು ತೆಗೆದಿಟ್ಟುಕೊಂಡು ಚೆನ್ನಾಗಿ ಸ್ವಚ್ಛ ಮಾಡಿಟ್ಟುಕೊಳ್ಳಿ. ಮಣ್ಣಿನ ಪಾತ್ರೆ ಇದ್ದರೆ ಒಳ್ಳೆಯದು. ಇಲ್ಲದಿದ್ದರೆ ಮಾಮೂಲಿ ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಅದರಲ್ಲಿ ಕಟ್ ಮಾಡಿದ ಈರುಳ್ಳಿಯನ್ನು ಹುರಿಯಿರಿ.

ಅದಕ್ಕೆ ಶುಂಠಿ ಹಾಗೂ ಕಾಯಿ ಮೆಣಸು ಹಾಗೂ ಒಂದು ಟೊಮೆಟೋವನ್ನು ಹಾಕಿ ಪ್ರೈ ಮಾಡಿ. ನಂತರ ರುಬ್ಬಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ಕುದಿಸಿ. ಕಡಿಮೆ ಉರಿಯಲ್ಲಿ 10ನಿಮಿಷ ಕುದಿಸಿ. ಇದೀಗ ಅದಕ್ಕೆ ಕ್ಲೀನ್ ಮಾಡಿ ಇಟ್ಟುಕೊಂಡ ಮೀನು ಹಾಕಿ 5 ರಿಂದ 6 ನಿಮಿಷ ಕುದಿಸಿ. ಇದೀಗ ಕರಾವಳಿ ಸ್ಟೈಲ್ ಬಂಗುಡೆ ಪುಲಿಮುಂಚಿ ರೆಡಿ. ಊಟದ ಜತೆ, ನೀರು ದೋಸೆ, ರೊಟ್ಟಿ ಜತೆ ಸವಿಯಲು ರುಚಿಕರವಾಗಿರುತ್ತದೆ.