ಮಾವಿನಕಾಯಿ ನೆಲ್ಲಿಕಾಯಿ ಚಿತ್ರಾನ್ನ

ಮಾವಿನಕಾಯಿ ನೆಲ್ಲಿಕಾಯಿ ಚಿತ್ರಾನ್ನ

YK   ¦    Mar 13, 2018 12:12:53 PM (IST)
ಮಾವಿನಕಾಯಿ ನೆಲ್ಲಿಕಾಯಿ ಚಿತ್ರಾನ್ನ

ಚಿತ್ರಾನ್ನ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಆದರೆ ದಿನನಿತ್ಯ ಒಂದೇ ತರನಾದ ಪದಾರ್ಥವನ್ನು ಸೇವಿಸುವುದಂದರೆ ನಾಲಗೆಗೂ ಬೇಜಾರು. ಹೀಗಾಗಿ ಚಿತ್ರಾನ್ನದಲ್ಲಿಯೂ ಹಲವಾರ ಬಗೆಯನ್ನು ಮಾಡಿ ಸವಿಯಬಹುದು. ಅದರಲ್ಲಿ ಒಂದು ಸುಲಭವಾದ ವಿಧಾನ ಎಂದರೆ ಮಾವಿನಕಾಯಿ ನೆಲ್ಲಿಕಾಯಿ ಚಿತ್ರಾನ್ನ. ಇದನ್ನು ಮಾಡಲು ಸುಲಭವಾಗಿದ್ದು, ಸವಿಯಲು ಅಷ್ಟೇ ರುಚಿಕರವಾಗಿರುತ್ತದೆ.

ಮಾವಿನಕಾಯಿ ನೆಲ್ಲಿಕಾಯಿ ಚಿತ್ರಾನ್ನ ಮಾಡಲು ಬೇಕಾಗುವ ಸಾಮಾಗ್ರಿಗಳು
1ಕಪ್ ಸೋನಾ ಮಸೂರಿ ಅಕ್ಕಿ
15 ನೆಲ್ಲಿ ಕಾಯಿ
1 ಮಾವಿನಕಾಯಿ
1/4 ಹರಿಸಿನ ಪುಡಿ
10-12 ಹಸಿ ಮೆಣಸಿನಕಾಯಿ
15 ಕ್ಯಾಶ್ಯೂ
1ಟೀ ಚಮಚ ದಾಲ್
1ಟೀ ಚಮಚ ಉರ್ದು
1/2 ಟೀ ಚಮಚ ಸಾಸಿವೆ
2ಟೀ ಚಮಚ ಎಣ್ಣೆ
ಕರಿಬೇವು
ಉಪ್ಪು ರುಚಿಗೆ

ಮಾಡುವ ವಿಧಾನ:

ಅಕ್ಕಿಯನ್ನು ನೀರಿನಲ್ಲಿ ತೊಳೆದು 10-15 ನಿಮಿಷ ನೆನೆಸಿಟ್ಟು ಅನ್ನಕ್ಕೆ ಇಡಿ. ಆದಾದ ಬಳಿಕ ನೀರನ್ನು ತೆಗೆದು ತಣ್ಣಗಾಗಲು ಬಿಡಿ.
ನೆಲ್ಲಿಕಾಯಿಯಿಂದ ಬೀಜವನ್ನು ಬೇರ್ಪಡಿಸಿ ಸಣ್ಣದಾಗಿ ಕಟ್ ಮಾಡಿ.
ಮಾವಿನಕಾಯಿ ಸಿಪ್ಪೆಯನ್ನು ಸುಳಿದು ಅದನ್ನು ಸಣ್ಣದಾಗಿ ಕಟ್ ಮಾಡಿ.
ಹಸಿ ಮೆಣಸಿನಕಾಯಿಯನ್ನು 2 ಭಾಗ ಮಾಡಿ ಕಟ್ ಮಾಡಿ
ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ ಸಾಸಿವೆಯನ್ನು ಹಾಕಿ ಹುರಿಯಿರಿ. ಅದಕ್ಕೆ ದಾಲ್, ಉರ್ದು, ಕ್ಯಾಶ್ಯೂ ಹಾಕಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ. ಇದಕ್ಕೆ ಹಸಿಮೆಣಸಿನಕಾಯಿ, ಕರಿಬೇವು ಹಾಕಿ ಫ್ರೈ ಮಾಡಿ. ನಂತರ ಕಟ್ ಮಾಡಿದ ನೆಲ್ಲಿಕಾಯಿ ಹಾಗೂ ಮಾವಿನಕಾಯಿಯನ್ನು ಹಾಕಿ 2-3 ನಿಮಿಷ ಫ್ರೈ ಮಾಡಿ.
ಇದಕ್ಕೆ ಹರಸಿನ, ಉಪ್ಪು ಹಾಕಿ. ನಂತರ ಹದ ಉರಿಯಲ್ಲಿ 6-8 ನಿಮಿಷ ಬೇಯಲು ಬಿಡಿ. ನಂತರ ಉರಿಯನ್ನು ಆರಿಸಿ ಬೇಯಿಸಿದ ಅನ್ನವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಇದೀಗ ರುಚಿಕರವಾದ ಮಾವಿನಕಾಯಿ ನೆಲ್ಲಿಕಾಯಿ ಚಿತ್ರಾನ್ನ ಸವಿಯಲು ಸಿದ್ದ.