ಆರೋಗ್ಯಕ್ಕೆ ಸಹಕಾರಿ ಬಾರ್ಲಿ ಪಾಯಸ

ಆರೋಗ್ಯಕ್ಕೆ ಸಹಕಾರಿ ಬಾರ್ಲಿ ಪಾಯಸ

LK   ¦    Sep 15, 2018 03:37:38 PM (IST)
ಆರೋಗ್ಯಕ್ಕೆ ಸಹಕಾರಿ ಬಾರ್ಲಿ ಪಾಯಸ

ಬಾರ್ಲಿ ಆರೋಗ್ಯಕ್ಕೆ ಹಲವು ವಿಧದಲ್ಲಿ ಸಹಕಾರಿಯಾಗಿದೆ. ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡಿ ತಂಪಾಗಿಡುತ್ತದೆ. ಜತೆಗೆ ಬೇರೆ ಬೇರೆ ಆರೋಗ್ಯ ಸಂಬಂಧಿತ ತೊಂದರೆಯನ್ನು ನಿವಾರಿಸುವ ಶಕ್ತಿ ಇದಕ್ಕಿದೆ. ಇಂತಹ ಆರೋಗ್ಯ ಗುಣ ಹೊಂದಿರುವ ಬಾರ್ಲಿಯಿಂದ ಪಾಯಸ ಮಾಡಿ ಸೇವಿಸಬಹುದಾಗಿದೆ.

ಬಾರ್ಲಿ ಪಾಯಸಕ್ಕೆ ಬೇಕಾಗುವ ಪದಾರ್ಥಗಳು

ಬಾರ್ಲಿ- ಒಂದು ಕಪ್

ಹಾಲು- ಒಂದು ಕಪ್

ಬಾದಾಮಿ, ದ್ರಾಕ್ಷಿ, ಗೋಡಂಬಿ- ಸ್ವಲ್ಪ

ಸಕ್ಕರೆ- ಸಿಹಿಗೆ ತಕ್ಕಂತೆ

ಕೇಸರಿ-ಸ್ವಲ್ಪ

ಮಾಡುವ ವಿಧಾನ ಹೀಗಿದೆ.

ಬಾರ್ಲಿಯನ್ನು ಹಿಂದಿನ ದಿನ ರಾತ್ರಿಯೇ ನೆನೆಯಲು ಹಾಕಬೇಕು. ಬೆಳಗ್ಗೆ ಅದನ್ನು ತೆಗೆದು ಚೆನ್ನಾಗಿ ಬೇಯಿಸಿಕೊಳ್ಳಬೇಕು. ಆ ನಂತರ ಒಂದು ಪಾತ್ರೆಯಲ್ಲಿ ಬೇಯಿಸಿದ ಬಾರ್ಲಿ ಹಾಕಿ ಅದಕ್ಕೆ ಹಾಲು ಹಾಕಬೇಕು. (ತೆಳು ಅಥವಾ ಮಂದ ಹೇಗೆ ಬೇಕೋ ಹಾಗೆ ಹಾಲನ್ನು ಹಾಕಬೇಕು) ನಿಧಾನ ಉರಿಯಲ್ಲಿ ಸೌಟುನಿಂದ ತಿರುಗಿಸುತ್ತಾ ಚೆನ್ನಾಗಿ ಕುದಿಸಬೇಕು. ಬಳಿಕ ಅದಕ್ಕೆ ಗೋಡಂಬಿ ಮತ್ತು ದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದು ಹಾಕಬೇಕು. ಆ ನಂತರ ಒಲೆಯಿಂದ ಇಳಿಸಿ ಬಾದಾಮಿ ಚೂರುಗಳನ್ನು ಹಾಗೂ ಹಾಲಿನಲ್ಲಿ ಅದ್ದಿದ ಕೇಸರಿ ಎಳೆಗಳನ್ನು ಅದರ ಮೇಲೆ ಹಾಕಿ ಅಲಂಕರಿಸಬೇಕು. ಅಲ್ಲಿಗೆ ಬಾರ್ಲಿ ಪಾಯಸ ರೆಡಿಯಾದಂತೆಯೇ...