ಮಕ್ಕಳಿಗಾಗಿ ಸಿಹಿ ಉದ್ದಿನ ದೋಸೆ

ಮಕ್ಕಳಿಗಾಗಿ ಸಿಹಿ ಉದ್ದಿನ ದೋಸೆ

YK   ¦    Sep 07, 2018 02:58:50 PM (IST)
ಮಕ್ಕಳಿಗಾಗಿ ಸಿಹಿ ಉದ್ದಿನ ದೋಸೆ

ಉದ್ದಿನ ದೋಸೆಯಲ್ಲಿ ವಿಧ ವಿಧವಾದ ದೋಸೆಗಳನ್ನು ತಯಾರಿಸಬಹುದು. ಕರಾವಳಿ ಜನತೆ ಹೆಚ್ಚಾಗಿ ಸಾದ ಉದ್ದಿನ ದೋಸೆಯನ್ನು ಮಾಡುತ್ತಾರೆ. ಸಾದ ದೋಸೆಯನ್ನು ತಿನ್ನಲು ಕೆಲವು ಮಕ್ಕಳಂತು ಇಷ್ಟಪಡುವುದಿಲ್ಲ. ಅಂತವರಿಗೆ ಸಿಹಿ ಉದ್ದಿನ ದೋಸೆಯನ್ನು ತಯಾರಿಸಿಕೊಳ್ಳಬಹುದು.

ಸಿಹಿ ಉದ್ದಿನ ದೋಸೆಗೆ ಬೇಕಾಗುವ ಪದಾರ್ಥಗಳು
3 ಕಪ್ ಬೆಳ್ತಿಗೆ ಅಕ್ಕಿ
1 ಕಪ್ ಉದ್ದಿನ ಬೆಳೆ
2 ತುಂಡು ಬೆಲ್ಲ
1/4 ಚಮಚ ಮೆಂತ್ಯೆ
1/2 ಕಪ್ ಅವಲಕ್ಕಿ
1/2 ಕಪ್ ತೆಂಗಿನ ತುರಿ
ಸ್ವಲ್ಪ ಹರಿಶಿಣ
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ: ಅಕ್ಕಿ, ಉದ್ದಿನ ಬೆಳೆ, ಮಂತ್ಯೆಯನ್ನು 1 ಗಂಟೆಗಳ ಕಾಲ ನೆನೆಸಿಟ್ಟುಕೊಳ್ಳಬೇಕು. ಮೊದಲು ಅಕ್ಕಿಯನ್ನು ಚೆನ್ನಾಗಿ ರುಬ್ಬಿಕೊಳ್ಳಬೇಕು. ಆದಾದ ಬಳಿಕ ಅವಲಕ್ಕಿ, ತೆಂಗಿನ ತುರಿ, ಉದ್ದಿನ ಬೆಳೆ, ಮಂತ್ಯೆ ಹಾಕಿ ಸ್ವಲ್ಪ ನೀರು ಹಾಕಿ ರುಬ್ಬಿಕೊಟ್ಟ ಬಳಿಕ ಅದಕ್ಕೆ ರುಬ್ಬಿದ ಅಕ್ಕಿ ಹಿಟ್ಟನ್ನು ಹಾಕಿ ಸರಿಯಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು 8 ಗಂಟೆಗಳ ಕಾಲ ಹಾಗೆಯೇ ಬಿಡಿ.
ದೋಸೆ ಮಾಡುವ ವೇಳೆ ರುಬ್ಬಿಟ್ಟುಕೊಂಡ ಮಿಶ್ರಣಕ್ಕೆ ಬೆಲ್ಲ, ಹರಿಶಿಣ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸರಿಯಾಗಿ ಮಿಕ್ಸ್ ಮಾಡಿ ದೋಸೆ ಮಾಡಿ. ಇದು ತಿನ್ನಲು ಸಿಹಿಯಾಗಿ ರುಚಿಕರವಾಗಿರುತ್ತದೆ. ಮಕ್ಕಳು ಸಿಹಿ ಉದ್ದಿನ ಬೇಳೆ ದೋಸೆಯನ್ನು ಸವಿಯಲು ತುಂಬಾ ಇಷ್ಟಪಡುತ್ತಾರೆ. ಇದು ಸಿಹಿಯಾಗಿರುವುದರಿಂದ ಹಾಗೆಯೇ ಸವಿಬಹುದು ಇಲ್ಲದಿದ್ದರೆ ಚಟ್ನಿಯೊಂದಿಗೆ ಕೂಡ ತಿನ್ನಬಹುದು.