ರುಚಿಕಟ್ಟಾದ ಸಬ್ಬಸಿಗೆ ಸೊಪ್ಪು ಕೂಟು

ರುಚಿಕಟ್ಟಾದ ಸಬ್ಬಸಿಗೆ ಸೊಪ್ಪು ಕೂಟು

LK   ¦    Jul 05, 2018 12:53:22 PM (IST)
ರುಚಿಕಟ್ಟಾದ ಸಬ್ಬಸಿಗೆ ಸೊಪ್ಪು ಕೂಟು

ಸಬ್ಬಸಿಗೆ ಎಲ್ಲರೂ ಇಷ್ಟ ಪಡುವ ಸೊಪ್ಪು. ಇದರಿಂದ ಸಾರು, ಪಲ್ಯ, ವಡೆ ಹೀಗೆ ಹಲವು ಪದಾರ್ಥಗಳನ್ನು ತಯಾರಿಸುತ್ತಾರೆ. ಸಬ್ಬಸೀಗೆ ಸೊಪ್ಪಿನಿಂದ ತಯಾರು ಮಾಡುವ ಕೂಟು ರುಚಿಕಟ್ಟಾಗಿರುತ್ತದೆ.

ಸಬ್ಬಸಿಗೆ ಕೂಟು ಮಾಡಲು ಬೇಕಾಗುವ ಪದಾರ್ಥಗಳು

ಸಬ್ಬಸಿಗೆ ಸೊಪ್ಪು-2 ಕಟ್ಟು

ತೊಗರಿಬೇಳೆ- ಅರ್ಧಪಾವು

ಎಣ್ಣೆ- ಸ್ವಲ್ಪ

ಉಪ್ಪು- ರುಚಿಗೆ ತಕ್ಕಷ್ಟು

ಉದ್ದಿನ ಬೇಳೆ- ಸ್ವಲ್ಪ

ಬ್ಯಾಡಗಿ ಒಣಮೆಣಸಿನ ಕಾಯಿ- ನಾಲ್ಕು

ಇಂಗು- ಸ್ವಲ್ಪ

ಕಾಳು ಮೆಣಸು-ಸ್ವಲ್ಪ

ಜೀರಿಗೆ- 1 ಚಮಚ

ಗಸಗಸ- 2ಚಮಚ

ಕಾಯಿತುರಿ- ಅರ್ಧ ಬಟ್ಟಲು

ಮಾಡುವ ವಿಧಾನ ಹೀಗಿದೆ.

ಮೊದಲಿಗೆ ತೊಗರಿ ಬೆಳೆಯನ್ನು ಪಾತ್ರೆಯಲ್ಲಿ ಹಾಕಿ ಸುಮಾರು ಅರ್ಧದಷ್ಟು ಬೇಯಿಸಬೇಕು. ಇನ್ನೊಂದೆಡೆ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಅದರಲ್ಲಿ ಉದ್ದಿನ ಬೇಳೆ, ಒಣಮೆಣಸು, ಇಂಗು, ಕರಿಮೆಣಸು ಹಾಕಿ ಹುರಿಯಬೇಕು. ಬಳಿಕ ಇಳಿಸಿ ಅದಕ್ಕೆ ಜೀರಿಗೆ, ಗಸಗಸ, ಕಾಯಿತುರಿಯನ್ನು ಹಾಕಿ ಎಲ್ಲವನ್ನು ಸೇರಿಸಿ ಮಿಕ್ಸಿಯಲ್ಲಿ ರುಬ್ಬಬೇಕು.

ಆ ನಂತರ ಅರ್ಧ ಬೆಂದ ಬೆಳೆಯ ಪಾತ್ರೆಗೆ ಚಿಕ್ಕದಾಗಿ ಹಚ್ಚಿದ ಸಬ್ಬಸಿಗೆ ಸೊಪ್ಪನ್ನು ಹಾಕಿ ಬೇಯಿಸಿಬೇಕು. ಸೊಪ್ಪು ಮತ್ತು ಬೇಳೆ ಚೆನ್ನಾಗಿ ಬೆಂದ ಬಳಿಕ ಅದಕ್ಕೆ ರುಬ್ಬಿಟ್ಟುಕೊಂಡಿದ್ದ ಮಸಾಲೆಯನ್ನು ಹಾಕಿ ಚೆನ್ನಾಗಿ ಕುದಿಸಿ ರುಚಿ ನೋಡಿಕೊಂಡು ಉಪ್ಪು ಹಾಕಬೇಕು. ಹುಳಿಯ ಅಗತ್ಯವಿದ್ದರೆ ನಿಂಬೆ ರಸವನ್ನು ಹಾಕಬಹುದು. ಹೀಗೆ ಮಾಡಿದರೆ ಸಬ್ಬಸಿಗೆ ಕೂಟು ಸಿದ್ಧವಾಗಲಿದೆ