ಬಾಯಲ್ಲಿ ನೀರುಣಿಸುವ ಗೋಡಂಬಿ ಮಿಕ್ಸ್ ಸೀಗಡಿ ಫ್ರೈ

ಬಾಯಲ್ಲಿ ನೀರುಣಿಸುವ ಗೋಡಂಬಿ ಮಿಕ್ಸ್ ಸೀಗಡಿ ಫ್ರೈ

LK   ¦    Sep 26, 2019 03:06:01 PM (IST)
ಬಾಯಲ್ಲಿ ನೀರುಣಿಸುವ ಗೋಡಂಬಿ ಮಿಕ್ಸ್ ಸೀಗಡಿ ಫ್ರೈ

ಸೀಗಡಿ ಮೀನಿನ ಖಾದ್ಯ ಎಂದರೆ ಎಲ್ಲರೂ ಇಷ್ಟಪಡುತ್ತಾರೆ. ಇನ್ನು ಇದಕ್ಕೆ ಗೋಡಂಬಿ ಮಿಕ್ಸ್ ಮಾಡಿ ಫ್ರೈ ಮಾಡಿದರಂತು ಅದರ ರುಚಿಯೇ ವಿಭಿನ್ನವಾಗಿರುತ್ತದೆ. ಪಾರ್ಟಿಗಳಲ್ಲಿ ಮೇಲೋಗರವಾಗಿ ಸೇವಿಸಲು ಚೆನ್ನಾಗಿರುತ್ತದೆ. ಇಷ್ಟಕ್ಕೂ ಗೋಡಂಬಿ ಮಿಕ್ಸ್ ಸೀಗಡಿ ಫ್ರೈ ಮಾಡಲು ಏನೇನು ಪದಾರ್ಥಗಳು ಬೇಕು ಮತ್ತು ಹೇಗೆ ಮಾಡುವುದು ಎಂಬುದರ ವಿವರ ಇಲ್ಲಿದೆ.

ಬೇಕಾಗುವ ಪದಾರ್ಥಗಳು

ಹಸಿ ಸೀಗಡಿ ಮೀನು- ಅರ್ಧ ಕೆಜಿ

ಚಿಲ್ಲಿಸಾಸ್- ಒಂದು ಟೀ ಚಮಚ

ಸೋಯಾಸಾಸ್- ಒಂದು ಟೀ ಚಮಚ

ಅರಸಿನಪುಡಿ- ಅರ್ಧ ಟೀ ಚಮಚ

ಈರುಳ್ಳಿ- ಒಂದು

ಇಡಿ ಗೋಡಂಬಿ- ಅರ್ಧ ಕಪ್

ಉಪ್ಪು- ರುಚಿಗೆ ತಕ್ಕಷ್ಟು

ಎಣ್ಣೆ- ಹುರಿಯಲು ಅಗತ್ಯವಿರುವಷ್ಟು

ನಿಂಬೆಹಣ್ಣು- ಅರ್ಧ ಹೋಳು

ಕೊತ್ತಂಬರಿ ಸೊಪ್ಪು- ಅರ್ಧಕಟ್ಟು


ಮಾಡುವ ವಿಧಾನ ಹೀಗಿದೆ..

ಮೊದಲಿಗೆ ಹಸಿ ಸೀಗಡಿ ಮೀನನ್ನು ಶುಚಿ ಮಾಡಿಟ್ಟುಕೊಳ್ಳಬೇಕು. ಇನ್ನೊಂದೆಡೆ ಈರುಳ್ಳಿಯನ್ನು ಚಿಕ್ಕದಾಗಿ ಹಚ್ಚಿಕೊಳ್ಳಬೇಕು. ಕೊತ್ತಂಬರಿ ಸೊಪ್ಪನ್ನು ಕೂಡ ಪ್ರತ್ಯೇಕವಾಗಿ ಹಚ್ಚಿಟ್ಟುಕೊಳ್ಳಬೇಕು.

ಒಂದು ಪಾತ್ರೆಯಲ್ಲಿ ಸೀಗಡಿ ಮೀನು ಹಾಕಿ ಅದಕ್ಕೆ ಸ್ವಲ್ಪ ಉಪ್ಪು(ರುಚಿಗೆ ತಕ್ಕಂತೆ), ಸೋಯಾ, ಚಿಲ್ಲಿಸಾಸ್, ಅರಸಿನ ಪುಡಿಯನ್ನು ಹಾಕಿ ಚೆನ್ನಾಗಿ ಬೆರೆಸಬೇಕು. ಆ ನಂತರ ಇನ್ನೊಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದು ಕಾದ ಮೇಲೆ ಅದಕ್ಕೆ ಈರುಳ್ಳಿ ಹಾಕಿ ಚೆನ್ನಾಗಿ ಕಂದು ಬಣ್ಣ ಬರುವ ತನಕ ಹುರಿಯಬೇಕು.

ನಂತರ ಮೊದಲೇ ಮಸಾಲೆ ಬೆರೆಸಿಟ್ಟಿರುವ ಸೀಗಡಿಯನ್ನು ಹಾಕಿ ಚೆನ್ನಾಗಿ ತಿರುಗಿಸುತ್ತಾ ಹುರಿಯಬೇಕು, ಅದರಲ್ಲಿದ್ದ ನೀರು ಆವಿಯಾಗಿ ಕಂದು ಬಣ್ಣ ಬರುವ ತನಕ ತಳ ಹಿಡಿಯದಂತೆ ತಿರುಗಿಸುತ್ತಾ ಬೇಯಿಸಬೇಕು. ಬಳಿಕ ಗೋಡಂಬಿಯನ್ನು ಅದಕ್ಕೆ ಹಾಕಿ ಮಿಕ್ಸ್ ಮಾಡಿ ತಿರುಗಿಸಬೇಕು. ಬಳಿಕ ನಿಂಬೆ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅದರ ಮೇಲೆ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ಗೋಡಂಬಿ ಮಿಕ್ಸ್ ಸೀಗಡಿ ಫ್ರೈ ಸವಿಯಲು ಸಿದ್ಧವಾದಂತೆಯೇ...