೨೦ ನಿಮಿಷದಲ್ಲೇ ಮಾಡಿ 'ಚಿಕನ್ ಬಿರಿಯಾನಿ'

೨೦ ನಿಮಿಷದಲ್ಲೇ ಮಾಡಿ 'ಚಿಕನ್ ಬಿರಿಯಾನಿ'

YK   ¦    Oct 19, 2019 04:30:33 PM (IST)
೨೦ ನಿಮಿಷದಲ್ಲೇ ಮಾಡಿ 'ಚಿಕನ್ ಬಿರಿಯಾನಿ'

ಚಿಕನ್ ಬಿರಿಯಾನಿಯನ್ನು ಮನೆಯಲ್ಲೇ ಮಾಡಿ ತಿನ್ನಲು ಇಷ್ಟಪಡುವವರು ೨೦ನಿಮಿಷದಲ್ಲೇ ತಯಾರಿಸಬಹುದು. 

ಬೇಕಾಗುವ ಸಾಮಾಗ್ರಿಗಳು

ಚಿಕನ್ -೧/೨

ಕೊತ್ತಂಬರಿ ಸೊಪ್ಪು- ೧/೨ ಕಪ್

ಪುದೀನಾ -೧ ಕಪ್

ಈರುಳ್ಳಿ-೨

ಶುಂಠಿ -ಬೆಳ್ಳುಳ್ಳಿ

ಈರುಳ್ಳಿ

ಕಾಯಿ ಮೆಣಸು-೪

ಅಕ್ಕಿ-೨ಕಪ್

ಅರಿಶಿನ

ಗರಂಮಸಾಲ ಪುಡಿ, ದನಿಯಾ ಪುಡಿ, ಖಾರದ ಪುಡಿ

ಚೆಕ್ಕೆ, ಲವಂಗ,ಕಲ್ಲು ಹೂ, ಬಿರಿಯಾನಿ ಎಲೆ, ಸೋಂಪು ಕಾಳು, ಅನಾನಸು ಹೂ, ಏಲಕ್ಕಿ

ತುಪ್ಪ ಅಥವಾ ಎಣ್ಣೆ

ಮಾಡುವ ವಿಧಾನ

ಮೊದಲಿಗೆ ಕೊತ್ತಂಬರಿ, ಪುದೀನಾ, ಕಾಯಿಮೆಣಸು, ೨ ಟೊಮೆಟೋ, ಶುಂಠಿ-ಬೆಳ್ಳುಳ್ಳಿಯನ್ನು ನೀರು ಹಾಕದೇ ರುಬ್ಬಿಕೊಳ್ಳಿ. ಕುಕ್ಕರ್ ಗೆ ತುಪ್ಪ ಅಥವಾ ಎಣ್ಣೆ ಹಾಕಿ ಅದಕ್ಕೆ ಚೆಕ್ಕೆ, ಲವಂಗ,ಕಲ್ಲು ಹೂ, ಬಿರಿಯಾನಿ ಎಲೆ, ಸೋಂಪು ಕಾಳು, ಅನಾನಸು ಹೂ, ಏಲಕ್ಕಿ ಹಾಕಿದ ಬಳಿಕ ಈರುಳ್ಳಿಯನ್ನು ಸೇರಿಸಿ ಫ್ರೈ ಮಾಡಿ. ಅದಕ್ಕೆ ಶುಚಿ ಮಾಡಿದ ಕೋಳಿ ಮಾಂಸವನ್ನು ಹಾಕಿ. ಸ್ವಲ್ಪ ಅರಿಶಿನ ಹಾಕಿ, ಗರಂಮಸಾಲ ಪುಡಿ, ದನಿಯಾ ಪುಡಿ, ಖಾರದ ಪುಡಿ ಹಾಕಿ ೫ ನಿಮಿಷ ಬೇಯಿಸಿ. ನಂತರ ಅದಕ್ಕೆ ಅಕ್ಕಿ ಹಾಕಿ ರುಬ್ಬಿಕೊಂಡ ಮಸಾಲೆ ಹಾಕಿ. ೨ ಕಪ್ ಅಕ್ಕಿಗೆ ೪ ಲೋಟ ನೀರು ಹಾಕಿ ೧ ವಿಷಲ್ ಕೂಗಿಸಿ. ಇದೀಗ ಬಿಸಿ ಬಿಸಿಯಾದ ಚಿಕನ್ ಬಿರಿಯಾನಿ ಸವಿಯಲು ಸಿದ್ಧ.