ಊಟದ ಜತೆಗಿರಲಿ ಆಲೂ ಎಗ್ ಫ್ರೈ

ಊಟದ ಜತೆಗಿರಲಿ ಆಲೂ ಎಗ್ ಫ್ರೈ

LK   ¦    May 15, 2019 12:18:49 PM (IST)
ಊಟದ ಜತೆಗಿರಲಿ ಆಲೂ ಎಗ್ ಫ್ರೈ

ಊಟದಲ್ಲಿ ನೆಂಚಿಕೊಳ್ಳೋಕೆ ಏನಾದರು ಬೇಕೆನಿಸಿದರೆ ಆಲೂ ಎಗ್ ಫ್ರೈ ಮಾಡಬಹುದು. ಇದು ಮಾಡಲು ಸುಲಭ ಮತ್ತು ಹೆಚ್ಚು ಸಮಯವೂ ತೆಗೆದುಕೊಳ್ಳುವುದಿಲ್ಲ. ಆಲೂ ಎಗ್ ಫ್ರೈ ಮಾಡಲು ಬೇಕಾಗುವ ಪದಾರ್ಥಗಳು ಮತ್ತು ಮಾಡುವ ವಿಧಾನ ಇಲ್ಲಿದೆ.

ಆಲೂ ಎಗ್ ಫ್ರೈ ಮಾಡಲು ಬೇಕಾಗುವ ಪದಾರ್ಥಗಳು

ಆಲೂಗೆಡ್ಡೆ- 250ಗ್ರಾಂ

ಮೊಟ್ಟೆ-2

ಉಪ್ಪು- ರುಚಿಗೆ ತಕ್ಕಷ್ಟು

ಕೊತ್ತಂಬರಿ ಸೊಪ್ಪು- ಸ್ವಲ್ಪ

ಪುದಿನಾ- ಸ್ವಲ್ಪ

ಹಸಿ ಮೆಣಸಿನಕಾಯಿ- 2

ಗರಂಮಸಾಲೆ- 1 ಚಮಚ

ಎಣ್ಣೆ- 2 ಚಮಚ

ಆಲೂ ಎಗ್ ಫ್ರೈ ತಯಾರಿಸುವ ವಿಧಾನ ಹೀಗಿದೆ

ಮೊದಲಿಗೆ ಸ್ವಲ್ಪ ಉಪ್ಪು ಬೆರೆಸಿ ನೀರಿನಲ್ಲಿ ಹಾಕಿ ಚೆನ್ನಾಗಿ ಆಲೂಗೆಡ್ಡೆಯನ್ನು ಬೇಯಿಸಬೇಕು. ನಂತರ ಅದರ ಸಿಪ್ಪೆ ತೆಗೆದು ಚಿಕ್ಕದಾಗಿ ಚೂರು ಮಾಡಿಕೊಳ್ಳಬೇಕು. ಇನ್ನೊಂದೆಡೆ ಮೆಣಸಿನ ಕಾಯಿ, ಕೊತ್ತಂಬರಿ ಪುದಿನಾ ಸೊಪ್ಪನ್ನು ಹಚ್ಚಿಟ್ಟುಕೊಳ್ಳಬೇಕು.

ಒಂದು ಅಗಲವಾದ ಪಾತ್ರೆಯಲ್ಲಿ ಅಥವಾ ಬಾಣಲೆಯಲ್ಲಿ ಎಣ್ಣೆ ಹಾಕಿ ಅದು ಕಾಯುತ್ತಿದ್ದಂತೆಯೇ ಆಲೂಗೆಡ್ಡೆಯನ್ನು ಅದರೊಂದಿಗೆ ಮೆಣಸಿನ ಕಾಯಿ, ಪುದಿನಾ, ಕೊತ್ತಂಬರಿ ಸೊಪ್ಪನ್ನು ಹಾಕಬೇಕು. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಬಳಿಕ ಹಸಿ ಮೊಟ್ಟೆಯನ್ನು ಅದಕ್ಕೆ ಹಾಕಿ ಮತ್ತೊಮ್ಮೆ ಕಲೆಸಬೇಕು. ಆ ನಂತರ ಗರಂ ಮಸಾಲೆ ಉದುರಿಸಿ ತಿರುವಿದರೆ ಆಲೂ ಎಗ್ ಫ್ರೈ ರೆಡಿಯಾದಂತೆಯೇ..