ಜೀರಾ ಚಿಕನ್ ಎಂದಾದರೂ ಮಾಡಿದ್ದೀರಾ?

ಜೀರಾ ಚಿಕನ್ ಎಂದಾದರೂ ಮಾಡಿದ್ದೀರಾ?

HSA   ¦    Jan 05, 2018 01:56:24 PM (IST)
ಜೀರಾ ಚಿಕನ್ ಎಂದಾದರೂ ಮಾಡಿದ್ದೀರಾ?

ಚಳಿಗಾಲದಲ್ಲಿ ವಿಶೇಷವಾಗಿ ಏನು ಮಾಡಬೇಕೆಂದು ಹೆಚ್ಚಿನವರು ಯೋಚಿಸುತ್ತಾ ಇರುವರು. ಯಾಕೆಂದರೆ ಚಳಿಗಾಲದಲ್ಲಿ ಹಸಿವು ಜಾಸ್ತಿ. ಹಸಿವಾದಾಗ ಏನಾದರೂ ತಿನ್ನಲೇಬೇಕು ಎಂದನಿಸುತ್ತದೆ. ಅದರಲ್ಲೂ ಚಿಕನ್ ಪ್ರಿಯರಿಗೆ ಹಲವಾರು ರೀತಿಯ ಖಾದ್ಯಗಳು ಇವೆ. ಅದೇ ರೀತಿ ಈ ಲೇಖನದಲ್ಲಿ ಚಿಕನ್ ಜೀರಾ(ಜೀರಿಗೆ) ಬಗ್ಗೆ ಹೇಳಿಕೊಡಲಿದ್ದೇವೆ. ಇದನ್ನು ತಯಾರಿಸಿ ರುಚಿ ನೋಡಿ.

ತಯಾರಿಸುವ ಸಮಯ 10 ನಿಮಿಷ
ಅಡುಗೆ ಸಮಯ 45 ನಿಮಿಷ
ಒಟ್ಟು ಅಡುಗೆ ಸಮಯ 55 ನಿಮಿಷ
4 ಜನರಿಗೆ ಬಡಿಸಬಹುದಾದಷ್ಟು

ಬೇಕಾಗುವ ಸಾಮಗ್ರಿಗಳು
1/2 ಕೆಜಿ ಕೋಳಿ(ಕತ್ತರಿಸದೆ ಇರುವುದು)
2 ಈರುಳ್ಳಿ
2 ಚಮಚ ಜೀರಿಗೆ
11/2 ಚಮಚ ಕರಿಮೆಣಸಿನ ಹುಡಿ
1/2 ಚಮಚ ಲವಂಗ
4 ದಾಲ್ಚಿನಿ ಚಕ್ಕೆ
2 ಏಲಕ್ಕಿ
2 ಚಮಚ ಕೊತ್ತಂಬರಿ
2 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಎಣ್ಣೆ
ರುಚಿಗೆ ತಕ್ಕಷ್ಟು ಉಪ್ಪು
ಕರಿಬೇವಿನ ಎಲೆ


ಜೀರಾ ಚಿಕನ್ ತಯಾರಿಸುವ ವಿಧಾನ
1. ಈರುಳ್ಳಿ ಕತ್ತರಿಸಿ ಬದಿಗಿಟ್ಟುಬಿಡಿ
2. ಎಲ್ಲಾ ಸಾಮಗ್ರಿಗಳನ್ನು ಎಣ್ಣೆ ಹಾಕದೆ ಹುರಿದು ಬದಿಗಿಟ್ಟುಕೊಳ್ಳಿ.
3. ಒಂದು ತವಾ ತೆಗೆದುಕೊಂಡು ಅದಕ್ಕೆ ಎಣ್ಣೆ ಹಾಕಿ. ಇದನ್ನು ಬಿಸಿ ಮಾಡಿ ಈರುಳ್ಳಿ ಹಾಕಿ ಮತ್ತು ಇದು ಗುಲಾಬಿ ಬಣ್ಣಕ್ಕೆ ತಿರುಗುವ ತನಕ ಹುರಿಯಿರಿ.
4. ಕರಿಬೇವಿನ ಎಲೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಮತ್ತು ಅದರ ಹಸಿ ವಾಸನೆ ಹೋಗುವ ತನಕ ಹುರಿಯಿರಿ.
5. ಇದಕ್ಕೆ ಚಿಕನ್ ಸೇರಿಸಿ ಮತ್ತು ಚಿಕನ್ ಬೇಯುವ ತನಕ ಫ್ರೈ ಮಾಡಿ.
6. ಅರ್ಧ ಬೆಂದ ಬಳಿಕ ಹುರಿದ ಮಸಾಲೆ ಮತ್ತು ಉಪ್ಪು ಹಾಕಿ.
7. ಡ್ರೈ ಆಗುವ ತನಕ ಫ್ರೈ ಮಾಡಿ. ಕೊತ್ತಂಬರಿ ಸೊಪ್ಪು ಹಾಕಿ ಅನ್ನದೊಂದಿಗೆ ಬಡಿಸಿ.