ಈ ರೀತಿಯೂ ಮಾಡಬಹುದು ಪುದಿನಾ ಚಟ್ನಿ

ಈ ರೀತಿಯೂ ಮಾಡಬಹುದು ಪುದಿನಾ ಚಟ್ನಿ

YK   ¦    Oct 25, 2019 04:32:36 PM (IST)
ಈ ರೀತಿಯೂ ಮಾಡಬಹುದು ಪುದಿನಾ ಚಟ್ನಿ

ದೋಸೆ, ರೊಟ್ಟಿ ಜತೆಗೆ ನೆನೆಸಿಕೊಂಡು ಸವಿಯಲು ರುಚಿಕರವಾಗಿ ಚಟ್ನಿಯನ್ನು ಬೇಕೆನ್ನುವವರು ಪುದಿನಾ ಚಟ್ನಿಯನ್ನು 5-6 ನಿಮಿಷದಲ್ಲೇ ತಯಾರಿಸಬಹುದು.

ಬೇಕಾಗುವ ಸಾಮಾಗ್ರಿಗಳು

ಪುದಿನಾ ಸೊಪ್ಪು-1ಕಪ್
ತೆಂಗಿನ ತುರಿ- ½ ಕಪ್
ಕಾಯಿ ಮೆಣಸು-3
ಈರುಳ್ಳಿ 1
ಉರ್ದು-2 ಚಮಚ
ಎಣ್ಣೆ-2 ಚಮಚ
ಸಾಸಿವೆ-1/4ಚಮಚ
ಉಪ್ಪು

ಮಾಡುವ ವಿಧಾನ: ಮೊದಲಿಗೆ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಅದಕ್ಕೆ ಸಾಸಿವೆ, ಉರ್ದು ಹಾಕಿದ ನಿಮಿಷದ ಬಳಿಕ ಕಾಯಿಮೆಣಸು, ಈರುಳ್ಳಿ ಹಾಕಿ 2 ನಿಮಿಷ ಹುರಿಯಿರಿ. ನಂತರ ಅದಕ್ಕೆ ಪುದಿನಾ ಸೊಪ್ಪು ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿದ ನಂತರ ತೆಂಗಿನ ತುರಿ ಹಾಕಿ 2 ನಿಮಿಷ ಬಿಟ್ಟ ಬಳಿಕ ಚೆನ್ನಾಗಿ ರುಬ್ಬಿಕೊಳ್ಳಿ.

ಇದಕ್ಕೆ ಒಗ್ಗರಣೆ ಕೊಟ್ಟರೆ ರುಚಿಕರವಾದ ಪುದಿನಾ ಚಟ್ನಿ ಸವಿಯಲು ಸಿದ್ದ. ಉದ್ದಿನ ದೋಸೆ, ನೀರುದೋಸೆ, ರೊಟ್ಟಿ ಜತೆಗೆ ಸವಿಯಲು ರುಚಿಕರವಾಗಿರುತ್ತದೆ.