ಸಿಗಡಿಯ ಈ ಖಾದ್ಯ ನಿಮಗೆ ಇಷ್ಟವಾಗದೆ ಇರದು

ಸಿಗಡಿಯ ಈ ಖಾದ್ಯ ನಿಮಗೆ ಇಷ್ಟವಾಗದೆ ಇರದು

Oct 16, 2017 03:55:46 PM (IST)
ಸಿಗಡಿಯ ಈ ಖಾದ್ಯ ನಿಮಗೆ ಇಷ್ಟವಾಗದೆ ಇರದು

ಕರಾವಳಿ ಭಾಗದ ಜನತೆಗೆ ಮೀನಿನ ಪದಾರ್ಥಗಳು ಇಷ್ಟವಿಲ್ಲವೆಂದು ಹೇಳಲು ಸಾಧ್ಯವೇ ಇಲ್ಲ. ಮೀನಿನ ಖಾದ್ಯಗಳು ಕರಾವಳಿ ಭಾಗದಲ್ಲಿ ವಿವಿಧ ರೀತಿಯಲ್ಲಿ ತಯಾರಿಸುವರು. ಇದು ಕರಾವಳಿ ಮಾತ್ರವಲ್ಲದೆ ವಿಶ್ವದೆಲ್ಲೆಡೆಯಲ್ಲಿ ಪ್ರಖ್ಯಾತಿ ಪಡೆದುಕೊಂಡಿದೆ. ಸಿಗಡಿಯಿಂದ ತಯಾರಿಸುವ ವಿಶೇಷ ಖಾದ್ಯ ವಿಶ್ವ ಆಹಾರ ದಿನ(ಅ.16)ದ ಅಂಗವಾಗಿ ನಿಮಗಾಗಿ.... 

ಬೆಳ್ಳುಳ್ಳಿ ಸಿಗಡಿ(ಗಾರ್ಲಿಕ್ ಪ್ರಾನ್ಸ್) ಮಾಡಲು ಬೇಕಾಗುವ ಸಾಮಗ್ರಿಗಳು
1 ಕೆಜಿ ಸಿಗಡಿ(ಸಿಪ್ಪೆ ತೆಗೆದಿರುವುದು, ಬಾಲ ಹಾಗೆ ಇರಲಿ) ಮಧ್ಯಮ ಗಾತ್ರದ್ದು.

ಮ್ಯಾರಿನೆಟ್ ಮಾಡಲು
1 ಚಮಚ ಬೆಳ್ಳುಳ್ಳಿ ಮತ್ತು ಹಸಿ ಮೆಣಸಿನ ಪೇಸ್ಟ್
1/2 ಚಮಚ ಕರಿಮೆಣಸು(ಜಜ್ಜಿರುವುದು)
3 ಚಮಚ ಲಿಂಬೆ ರಸ
1/2 ಚಮಚ ಚಿಲ್ಲಿ ಸಾಸ್
7 ಬೆಳ್ಳುಳ್ಳಿ ಎಸಲುಗಳು ತುಂಡರಿಸಿರುವುದು.
2 ಚಮಚ ಜೋಳಹಿಟ್ಟು
7 ಚಮಚ ಸೋಯಾ ಸಾಸ್
1/2 ಚಮಚ ಮೆಣಸಿನ ಹುಡಿ

ಸಾಸ್ ತಯಾರಿಸಲು
2 ಚಮಚ ಬಿಳಿ ವಿನೇಗರ್
3 ಚಮಚ ಸೋಯಾ ಸಾಸ್
1 ಚಮಚ ಎಳ್ಳು (ಹುರಿದಿರುವುದು)
2 ಚಮಚ ಹಸಿ ಮೆಣಸು ತುಂಡರಿಸಿರುವುದು

ತಯಾರಿಸುವ ವಿಧಾನ
*ಮಾರಿನೆಟ್ ಮಾಡಿಕೊಂಡ ಸಿಗಡಿಯನ್ನು ಅರ್ಧ ಗಂಟೆ ಕಾಲ ಹಾಗೆ ಇಡಿ.
*ಒಂದು ತವಾದಲ್ಲಿ 2 ಚಮಚ ಎಳ್ಳೆಣ್ಣೆ ಹಾಕಿ ಕಾಯಿಸಿ ಬಿಸಿಯಾದ ಬಳಿಕ ಸಿಗಡಿ ಹಾಕಿ.
*ಸಿಗಡಿ ಬಾಲವು ಸುತ್ತಿಕೊಳ್ಳುವ ತನಕ ಹುರಿಯಿರಿ. ಅತಿಯಾಗಿ ಬೇಯಿಸಬೇಡಿ.
*ಇದನ್ನು ಸಾಸ್ ಜತೆ ತಿನ್ನಲು ನೀಡಿ.