ಸವಿಯಿರಿ ಬ್ಲಾಕ್ ಚಿಕನ್ ಮಸಾಲ ಪ್ರೈ

ಸವಿಯಿರಿ ಬ್ಲಾಕ್ ಚಿಕನ್ ಮಸಾಲ ಪ್ರೈ

LK   ¦    Oct 21, 2018 12:54:11 PM (IST)
ಸವಿಯಿರಿ ಬ್ಲಾಕ್ ಚಿಕನ್ ಮಸಾಲ ಪ್ರೈ

ಸಾಮಾನ್ಯವಾಗಿ ಮಾಂಸಹಾರಿಗಳು ಚಿಕನ್‍ನಿಂದ ಹಲವಾರು ರೀತಿಯ ಖಾದ್ಯಗಳನ್ನು ಮಾಡುತ್ತಿರುತ್ತಾರೆ. ಬ್ಲಾಕ್ ಚಿಕನ್ ಪ್ರೈ ಮಸಾಲ ಊಟದೊಂದಿಗೆ ಮಾತ್ರವಲ್ಲದೆ ಹಾಗೆಯೂ ತಿನ್ನಲು ಸಾಧ್ಯವಾಗುತ್ತದೆ. ಇದನ್ನು ಹೇಗೆ ಮಾಡಬಹುದು ಎಂಬುದರ ವಿವರ ಇಲ್ಲಿದೆ.

ಬ್ಲಾಕ್ ಚಿಕನ್ ಮಸಾಲ ಪ್ರೈ ಮಾಡಲು ಬೇಕಾಗುವ ಪದಾರ್ಥಗಳು

ಚಿಕನ್ -250 ಗ್ರಾಂ

ಈರುಳ್ಳಿ-1

ಬೆಳ್ಳುಳ್ಳಿ, ಶುಂಠಿಪೇಸ್ಟ್- 1 ಚಮಚ

ಗರಂಮಸಾಲೆ-1 ಚಮಚ

ಅರಿಶಿನ-ಅರ್ಧ ಟೀ ಚಮಚ

ಹಸಿಮೆಣಸಿನ ಕಾಯಿ- 2

ಕಾಳು ಮೆಣಸಿನಪುಡಿ-ಅರ್ಧ ಚಮಚ

ದನಿಯಾ- ಅರ್ಧ ಚಮಚ

ಜೀರಿಗೆ- ಸ್ವಲ್ಪ

ಕರಿಬೇವುಸೊಪ್ಪು- ಸ್ವಲ್ಪ

ಉಪ್ಪು- ರುಚಿಗೆ ತಕ್ಕಷ್ಟು

ನಿಂಬೆರಸ- ರುಚಿಗೆ ತಕ್ಕಷ್ಟು

ಕೊತ್ತಂಬರಿ ಸೊಪ್ಪು-ಅರ್ಧಕಟ್ಟು

ಟೊಮ್ಯಾಟೋ-1

ಮಾಡುವ ವಿಧಾನ ಹೀಗಿದೆ..

ಮೊದಲಿಗೆ ಈರುಳ್ಳಿ ಮತ್ತು ಟೊಮ್ಯಾಟೋವನ್ನು ಚಿಕ್ಕದಾಗಿ ಹಚ್ಚಿಕೊಳ್ಳಿ, ಇನ್ನೊಂದೆಡೆ ಮಾಂಸವನ್ನು ಶುಚಿಗೊಳಿಸಿ ಅದಕ್ಕೆ ಅರಿಶಿಣ ಸ್ವಲ್ಪ ಉಪ್ಪು ಸ್ವಲ್ಪ ನಿಂಬೆ ರಸ ಹಾಕಿ ಮಿಕ್ಸ್ ಮಾಡಿ. ಇನ್ನೊಂದೆಡೆ ದನಿಯಾ ಮತ್ತು ಜೀರಿಗೆಯನ್ನು ಬಾಣಲೆಯಲ್ಲಿ ಹಾಕಿ ಸ್ವಲ್ಪ ಹುರಿದುಕೊಳ್ಳಿ ಆಗ ಅದು ಕಪ್ಪಗೆ ಬಣ್ಣ ಬರುತ್ತದೆ. ಅದನ್ನು ತೆಗೆದು ಮಿಕ್ಸಿಗೆ ಹಾಕಿ ಅದರೊಂದಿಗೆ ಗರಂಮಸಾಲೆ, ಹಸಿಮೆಣಸಿನ ಕಾಯಿ, ಕರಿಬೇವು ಸೊಪ್ಪು, ಶುಂಠಿಪೇಸ್ಟ್, ಎಲ್ಲವನ್ನು ಸೇರಿಸಿ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ ಬಳಿಕ ತೆಗೆದು ಮಾಂಸದೊಂದಿಗೆ ಮಿಕ್ಸ್ ಮಾಡಿಕೊಳ್ಳಿ. ಸ್ವಲ್ಪ ಸಮಯಗಳ ಕಾಲ ಬಿಟ್ಟು ಒಂದು ಪಾತ್ರೆಯಲ್ಲಿ ಎಣ್ಣೆಯಿಟ್ಟು ಅದು ಕಾದ ನಂತರ ಅದಕ್ಕೆ ಸಾಸಿವೆ ಹಾಕಿ ಅದು ಸಿಡಿದ ಬಳಿಕ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ ಅದು ಬೆಂದು ಕೆಂಪಗೆ ಬಣ್ಣ ಬರುವಾಗ ಟೊಮ್ಯಾಟೋ ಹಾಕಿ ಎರಡನ್ನು ಸೇರಿಸಿ ಹುರಿದ ಬಳಿಕ ಮಾಂಸವನ್ನು ಹಾಕಿ ಬೇಯಿಸಿ. ತಳ ಹಿಡಿಯದಂತೆ ಸೌಟುನಿಂದ ತಿರುಗಿಸಿ. ನೀರು ಹಾಕಬೇಡಿ ಮಸಾಲೆ ಮತ್ತು ಮಾಂಸ ನೀರು ಬಿಟ್ಟು ಅದರಲ್ಲೇ ಬೇಯುತ್ತದೆ. ಚೆನ್ನಾಗಿ ಬೆಂದ ಬಳಿಕೆ ಅದರ ಮೇಲೆ ಕೊತ್ತಂಬರಿ ಸೊಪ್ಪು ಹಾಕಿ ತಿರುಗಿಸಿ ಆ ನಂತರ ರುಚಿ ನೋಡಿಕೊಂಡು ಉಪ್ಪು, ಹುಳಿ ಹದಗೊಳಿಸಿ. ಅಲ್ಲಿಗೆ ಬ್ಲಾಕ್ ಚಿಕನ್ ಪ್ರೈ ಮಸಾಲ ರೆಡಿಯಾದಂತೆ.