ಎಲ್ಲರ ಮನೆಯಲ್ಲಿರಲಿ ಚಟ್ನಿಪುಡಿ

ಎಲ್ಲರ ಮನೆಯಲ್ಲಿರಲಿ ಚಟ್ನಿಪುಡಿ

LK   ¦    May 28, 2018 11:45:21 AM (IST)
ಎಲ್ಲರ ಮನೆಯಲ್ಲಿರಲಿ ಚಟ್ನಿಪುಡಿ

ಮನೆಯಲ್ಲಿ ಚಟ್ನಿಪುಡಿಯಿದ್ದರೆ ದೋಸೆ, ಚಪಾತಿ, ರೊಟ್ಟಿ ಎಲ್ಲವನ್ನು ಇದರಲ್ಲೇ ಸೇವಿಸಿ ಬಿಡಬಹುದು. ಆದ್ದರಿಂದ ಈ ಚಟ್ನಿಪುಡಿಯನ್ನು ಮನೆಯಲ್ಲಿಯೇ ಮಾಡಿಟ್ಟುಕೊಂಡರೆ ಉತ್ತಮ. ಚಟ್ನಿಪುಡಿಯನ್ನು ಹೇಗೆ ತಯಾರಿಸುವುದು ಎಂಬುದು ಇಲ್ಲಿದೆ.

ಚಟ್ನಿಪುಡಿ ತಯಾರಿಸಲು ಬೇಕಾಗುವ ಪದಾರ್ಥಗಳು

ಕಡ್ಲೆಬೇಳೆ- ಒಂದು ಪಾವು

ಉದ್ದಿನಬೇಳೆ- ಮುಕ್ಕಾಲು ಪಾವು

ಕಡ್ಲೆಬೀಜ- ಅರ್ಧಪಾವು

ಬೆಲ್ಲ- ಒಂದೂವರೆ ಅಚ್ಚು

ಮೆಣಸಿಕಾಯಿ- 25( ಗುಂಟೂರು ಮತ್ತು ಬ್ಯಾಡಗಿ ಸಮಪ್ರಮಾಣ)

ಕರಿಬೇವು- ಸ್ವಲ್ಪ

ಹುಣಸೆಹಣ್ಣು- ಸ್ವಲ್ಪ

ಕೊಬ್ಬರಿ- ಅರ್ಧ ಭಾಗ

ಇಂಗು- ಸ್ವಲ್ಪ

ಎಣ್ಣೆ- ಸ್ವಲ್ಪ

ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ ಹೀಗಿದೆ.

ಮೊದಲಿಗೆ ಬೆಲ್ಲವನ್ನು ಬಿಟ್ಟು ಉಳಿದ ಎಲ್ಲ ಪದಾರ್ಥವನ್ನು ಪ್ರತ್ಯೇಕವಾಗಿ ಹುರಿದುಕೊಳ್ಳಬೇಕು. (ಮೆಣಸಿನ ಕಾಯಿಯನ್ನು ಹುರಿಯುವಾಗ ಎಣ್ಣೆ ಹಾಕಿ ಹುರಿಯಬೇಕು) ಆ ನಂತರ ಮೊದಲು ಹುರಿದ ಕಡಲೆ ಮತ್ತು ಉದ್ದಿನ ಬೇಳೆಯನ್ನು ದಪ್ಪಗೆ ಪುಡಿಮಾಡಿ ಆ ಮೇಲೆ ಕಡ್ಲೆಬೀಜವನ್ನು ಪುಡಿಮಾಡಿ ಒಂದು ಪಾತ್ರೆಯಲ್ಲಿ ಹಾಕಿಕೊಳ್ಳಬೇಕು. ಇದಾದ ಬಳಿಕ ಉಳಿದ ಪದಾರ್ಥಗಳನ್ನು ಪುಡಿಮಾಡಿ ಹಾಕಬೇಕು. ನಂತರ ಸ್ವಲ್ಪ ಎಣ್ಣೆ ಬಿಸಿ ಮಾಡಿಕೊಂಡು ಹಾಕಿ ಅದರ ಮೇಲೆ ಕೈಯ್ಯಲ್ಲಿ ಚೆನ್ನಾಗಿ ಅದುಮಿ ಮಿಕ್ಸ್ ಮಾಡಬೇಕು. ಹೀಗೆ ಮಾಡಿದರೆ ಚಟ್ನಿಪುಡಿ ರೆಡಿಯಾಗಲಿದೆ.