ನಿರ್ಜಲೀಕರಣ ತಪ್ಪಿಸುವ ಪುದೀನಾ ಲಸ್ಸಿ ತಯಾರಿಸಿ ಕುಡಿಯಿರಿ

ನಿರ್ಜಲೀಕರಣ ತಪ್ಪಿಸುವ ಪುದೀನಾ ಲಸ್ಸಿ ತಯಾರಿಸಿ ಕುಡಿಯಿರಿ

HSA   ¦    Feb 23, 2018 03:53:58 PM (IST)
ನಿರ್ಜಲೀಕರಣ ತಪ್ಪಿಸುವ ಪುದೀನಾ ಲಸ್ಸಿ ತಯಾರಿಸಿ ಕುಡಿಯಿರಿ

ಇನ್ನೇನು ಚಳಿಗಾಲ ಹೋಗಿ ಬೇಸಿಗೆಕಾಲ ಬರುವ ಸಮಯ. ಬಿಸಿಲಿನ ಬೇಗೆ ಈಗಲೇ ಶುರುವಾಗಿದೆ. ಹಿಂದೆ ಎಪ್ರಿಲ್ ನಲ್ಲಿ ಮೈಗೆ ನಾಟುತ್ತಿದ್ದಂತಹ ಬಿಸಿಲು ಈಗ ಫೆಬ್ರವರಿಯಲ್ಲೇ ಅದರ ಪರಿಚಯ ಮಾಡಿಸುತ್ತಿದೆ. ಇಂತಹ ಬಿಸಿಲಿನಲ್ಲಿ ದೇಹದಲ್ಲಿ ನೀರಿನಾಂಶವನ್ನು ಕಾಪಾಡಿಕೊಳ್ಳುವುದು ಅತೀ ಅಗತ್ಯ. ಆದರೆ ಪ್ರತೀ ಸಲ ನೀರು ಕುಡಿಯುವುದು ತುಂಬಾ ಬೇಜಾರು. ಇದಕ್ಕೆ ಏನಾದರೂ ಜ್ಯೂಸ್ ಅಥವಾ ಲಸ್ಸಿ, ಮಜ್ಜಿಗೆ ಕುಡಿದರೆ ಅದು ರುಚಿಯಾಗಿರುವುದು. ಇದು ದೇಹವನ್ನು ಬಿಸಿಲಿನ ತಾಪ ಮತ್ತು ನಿರ್ಜಲೀಕರಣದಿಂದ ತಪ್ಪಿಸುವುದು. ಇಂದಿನ ಅಡುಗೆ ಮನೆ ಲೇಖನದಲ್ಲಿ ನಿಮಗೆ ಪುದೀನಾ ಲಸ್ಸಿ ಮಾಡುವ ವಿಧಾನ ಬಗ್ಗೆ ತಿಳಿಸಲಿದ್ದೇವೆ.

ಇಬ್ಬರಿಗೆ ಕುಡಿಯಬಹುದಾದಷ್ಟು
ತಯಾರಿಗೆ ಒಟ್ಟು 20 ನಿಮಿಷ

ಪುದೀನಾ ಲಸ್ಸಿಗೆ ಬೇಕಾಗುವ ಸಾಮಗ್ರಿಗಳು
300 ಮಿ.ಲೀ. ಮೊಸರು
2 ಚಮಚ ಸಕ್ಕರೆ
ಸ್ವಲ್ಪ ಪುದೀನಾ ಎಲೆಗಳು
ಹುರಿದಿರುವ ಜೀರಿಗೆ
ಸ್ವಲ್ಪ ಐಸ್

ತಯಾರಿಸುವ ವಿಧಾನ
1.ಒಂದು ಪಾತ್ರೆಗೆ ಸಕ್ಕರೆ, ಪುದೀನಾ ಮತ್ತು ಮೊಸರು ಹಾಕಿ ಸರಿಯಾಗಿ ಕಲಸಿಕೊಳ್ಳಿ.
2. ಇದಕ್ಕೆ ಐಸ್ ಹಾಕಿ ಜ್ಯೂಸರ್ ಗೆ ಹಾಕಿ.
3. ಇದನ್ನು ತೆಗೆದು ಗ್ಲಾಸ್ ಗೆ ಹಾಕಿ ಅಲಂಕರಿಸಲು ಪುದೀನಾ ಎಲೆ ಮತ್ತು ಜೀರಿಗೆ ಹಾಕಿಕೊಳ್ಳಿ ಮತ್ತು ಕುಡಿಯಲು ನೀಡಿ.