ದೋಸೆ, ಚಪಾತಿ ಜೊತೆ ಸವಿಯಿರಿ ಆಲೂ ಮಟರ್

ದೋಸೆ, ಚಪಾತಿ ಜೊತೆ ಸವಿಯಿರಿ ಆಲೂ ಮಟರ್

LK   ¦    Aug 29, 2018 03:39:39 PM (IST)
ದೋಸೆ, ಚಪಾತಿ ಜೊತೆ ಸವಿಯಿರಿ ಆಲೂ ಮಟರ್

ಆಲೂ ಮಟರ್ ದೋಸೆ ಮತ್ತು ಚಪಾತಿಗೆ ಒಳ್ಳೆಯ ಕಾಂಬಿನೇಷನ್. ಇದನ್ನು ಹೇಗೆ ಮಾಡುವುದಪ್ಪ ಎಂದು ಯೋಚಿಸುವವರಿಗೆ ಇಲ್ಲಿದೆ ಮಾಡುವ ವಿಧಾನ.

ಆಲೂಮಟರ್ ಮಾಡಲು ಬೇಕಾಗುವ ಸಾಮಗ್ರಿಗಳು

ಆಲೂಗೆಡ್ಡೆ-2

ಹಸಿಬಟಾಣಿ-ಕಾಲು ಕೆಜಿ

ಈರುಳ್ಳಿ-2

ಟೊಮ್ಯಾಟೋ-3

ಗರಂಮಸಾಲೆ-2 ಚಮಚ

ಕಾರದ ಪುಡಿ-2 ಚಮಚ

ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1ಚಮಚ

ಕೊತ್ತಂಬರಿಸೊಪ್ಪು- ಅರ್ಧ ಕಟ್ಟು

ಎಣ್ಣೆ- 2ಚಮಚ

ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ ಹೀಗಿದೆ..

ಒಂದೆಡೆ ಹಸಿ ಬಟಾಣಿಯನ್ನು ಬೇಯಿಸಿಟ್ಟುಕೊಳ್ಳಬೇಕು. ಇನ್ನೊಂದೆಡೆ ಆಲೂಗೆಡ್ಡೆಯನ್ನು ಚೆನ್ನಾಗಿ ಬೇಯಿಸಿ ಬಳಿಕ ಅದರ ಸಿಪ್ಪೆಯನ್ನು ತೆಗೆದು ಕೈಯಿಂದ ಹಿಸುಕಿ ಪುಡಿ ಮಾಡಿಕೊಳ್ಳಬೇಕು. ಇನ್ನು ಟೊಮ್ಯಾಟೋ ಮತ್ತು ಈರುಳ್ಳಿಯನ್ನು ಸಣ್ಣದಾಗಿ ಹಚ್ಚಿಟ್ಟುಕೊಳ್ಳಬೇಕು. ಇಷ್ಟು ಮಾಡಿದ ಬಳಿಕ ಪಾತ್ರೆಯಲ್ಲಿ ಎಣ್ಣೆ ಹಾಕಿ ಅದು ಕಾದ ನಂತರ ಅದಕ್ಕೆ ಈರುಳ್ಳಿ ಹಾಕಿ ಹುರಿಯಬೇಕು ಅದು ಚೆನ್ನಾಗಿ ಬಾಡಿದ ನಂತರ ಟೊಮ್ಯಾಟೋ ಹಾಕಿ ಹುರಿಯುತ್ತಾ ಬಾಡಿಸಬೇಕು. ನಂತರ ಗರಂಮಸಾಲೆ, ಖಾರದಪುಡಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಸ್ವಲ್ಪ ಹುರಿಯಬೇಕು. ಇದಾದ ಬಳಿಕ ಬೇಯಿಸಿಟ್ಟುಕೊಂಡ ಆಲೂಗೆಡ್ಡೆ ಮತ್ತು ಬಟಾಣಿಯನ್ನು ಸೇರಿಸಬೇಕು. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿ ಕುದಿಸಿ ಇಳಿಸಬೇಕು. ಅದರ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿದರೆ ಆಲೂಮಟರ್ ಸವಿಯಲು ಸಿದ್ಧವಾಗಿ ಬಿಡುತ್ತದೆ.