ಮನೆಯಲ್ಲೇ ಮಾಡಿಬಿಡಿ ರೆಡ್ ಚಿಲ್ಲಿ ಕೋಡುಬಳೆ

ಮನೆಯಲ್ಲೇ ಮಾಡಿಬಿಡಿ ರೆಡ್ ಚಿಲ್ಲಿ ಕೋಡುಬಳೆ

LK   ¦    Jun 02, 2018 12:32:04 PM (IST)
ಮನೆಯಲ್ಲೇ ಮಾಡಿಬಿಡಿ ರೆಡ್ ಚಿಲ್ಲಿ ಕೋಡುಬಳೆ

ಸಂಜೆಯ ಕಾಫಿ ಸಮಯಕ್ಕೆ ಕಾಫಿಯೊಂದಿಗೆ ಗರಿಗರಿಯಾದ ಖಾರಖಾರವಾದ ಕೋಡುಬಳೆ ಇದ್ದರೆ ಒಂಥರಾ ಮಜಾ ಕೊಡುತ್ತದೆ. ಈ ಕೋಡುಬಳೆಯನ್ನು ಮನೆಯಲ್ಲಿಯೇ ಮಾಡಿಟ್ಟುಕೊಂಡು ಉಪಯೋಗಿಸಬಹುದಾಗಿದೆ.

ಕೋಡುಬಳೆ ಮಾಡಲು ಬೇಕಾಗುವ ಪದಾರ್ಥಗಳು ಹೀಗಿವೆ

ಅಕ್ಕಿಹಿಟ್ಟು ಒಂದು ಸೇರು

ಸಣ್ಣರವೆ-ಕಾಲುಕೆಜಿ

ಮೈದಾ- ಕಾಲು ಕೆಜಿ

ತುಪ್ಪ- 150 ಗ್ರಾಂ

ಜೀರಿಗೆ- 2 ಚಮಚ

ಒಣಮೆಣಸಿನಕಾಯಿ- 25

ಈರುಳ್ಳಿ- ಕಾಲು ಕೆಜಿ

ಕಾಯಿತುರಿ- 1(ಚಿಕ್ಕ 1ಕಾಯಿ)

ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ...

ಮೊದಲಿಗೆ ರವೆ ಮತ್ತು ಮೈದಾವನ್ನು ತುಪ್ಪದಲ್ಲಿ ಬಿಸಿಮಾಡಿ ಅದಕ್ಕೆ ಅಕ್ಕಿ ಹಿಟ್ಟು ಬೆರೆಸಬೇಕು. ಮತ್ತೊಂದೆಡೆ ಜೀರಿಗೆ, ಒಣ ಮೆಣಸಿಕಾಯಿ, ಈರುಳ್ಳಿ, ಕಾಯಿತುರಿ ಉಪ್ಪು ಹಾಕಿ ಮಿಕ್ಸಿಯಲ್ಲಿ ರುಬ್ಬಿ ಅದನ್ನು ರವೆ, ಮೈದಾ ಮತ್ತು ಅಕ್ಕಿಹಿಟ್ಟಿನೊಂದಿಗೆ ಹಾಕಿ ಬೆರೆಸಿ ಚೆನ್ನಾಗಿ ಗಟ್ಟಿಯಾಗಿ ಕಲಸಬೇಕು.

ಬಳಿಕ ಅದನ್ನು ಬಳೆ ಆಕಾರದಲ್ಲಿ ಮಾಡಿ ಎಣ್ಣೆಯಲ್ಲಿ ಹಾಕಿ ಕರೆದರೆ ಗರಿ ಗರಿಯಾದ ರೆಡ್ ಚಿಲ್ಲಿ ಕೋಡುಬಳೆ ಸವಿಯಲು ರೆಡಿಯಾಗಲಿದೆ.