ಆಹಾ…..ಚಿಕನ್ ಗೀ ರೋಸ್ಟ್

ಆಹಾ…..ಚಿಕನ್ ಗೀ ರೋಸ್ಟ್

YK   ¦    May 06, 2019 12:27:54 PM (IST)
ಆಹಾ…..ಚಿಕನ್ ಗೀ ರೋಸ್ಟ್

ಕೋಳಿಯಿಂದ ತಯಾರಾದ ಖಾದ್ಯಗಳು ಮಾಂಸ ಪ್ರಿಯರಿಗೆ ಯಾರಿಗಿಷ್ಟವಿಲ್ಲ ಹೇಳಿ. ಪ್ರಸ್ತುತ ವಿವಿಧ ಖಾದ್ಯಗಳನ್ನು ಹೊಟೇಲ್ ನಲ್ಲಿ ತಿನ್ನುವ ಎಂದು ಮನಸು ಮಾಡಿದರೆ ಗಗನಕ್ಕೇರಿದ ಬೆಲೆಯಿಂದ ಅದು ಅಸಾಧ್ಯ. ಆದರೆ ಮನಸು ಮಾಡಿದರೆ ಸ್ವಲ್ಪ ಸಮಯವನ್ನು ಆಹಾರ ತಯಾರಿಕೆಗೆ ಮನೆಯಲ್ಲಿ ಮೀಸಲಿಟ್ಟರೆ ಆರೋಗ್ಯಕರವಾದ ರುಚಿಕರವಾದ ಆಹಾರವನ್ನು ತಯಾರಿಸಬಹುದು. ದುಬಾರಿ ಬೆಲೆಯ ಪಟ್ಟಿಯಲ್ಲಿ ಚಿಕನ್ ಗೀ ರೋಸ್ಟ್ ಕೂಡ ಒಂದು. ಇದನ್ನು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು.

ಬೇಕಾಗುವ ಸಾಮಾಗ್ರಿಗಳು
ಚಿಕನ್- ½ ಕೆಜಿ
ಲಿಂಬೆ ರಸ- 3 ಚಮಚ
ಮೊಸರು-2 ಚಮಚ
ಹರಿಶಿನ-1 ಚಮಚ
ಉಪ್ಪು ರುಚಿಗೆ
ತುಪ್ಪ- 200ಗ್ರಾಂ
ಶುಂಠಿ-ಬೆಳ್ಳುಳ್ಳಿ ಪೇಸ್ಟ್- 2 ಚಮಚ
ಮೆಣಸು- 8/10
ಜೀರಿಗೆ- 1/2ಚಮಚ
ಕೊತ್ತಂಬರಿ- 1 ಚಮಚ
ಜೀರಿಗೆ- 1/2ಚಮಚ
ಕರಿಮೆಣಸು-6
ಬೆಳ್ಳುಳ್ಳಿ- 10 ಎಸಳು
ಬೆಲ್ಲ-ಸ್ವಲ್ಪ
ಹುಳಿ-ಸ್ವಲ್ಪ

ಮಾಡುವ ವಿಧಾನ: ಒಂದು ಪಾತ್ರೆಗೆ ಹರಿಶಿನ, ಉಪ್ಪು, ಲಿಂಬೆ ರಸ, ಮೊಸರು, ಮೆಣಸಿನ ಪುಡಿ ಹಾಕಿ ಅದಕ್ಕೆ ಚಿಕನ್ ನನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

ಇನ್ನೊಂದು ಪಾತ್ರೆಯಲ್ಲಿ ಬೆಳ್ಳುಳ್ಳಿಯನ್ನು ಸ್ವಲ್ಪ ಹುರಿದ ಬಳಿಕ ಅದಕ್ಕೆ ಕೊತ್ತಂಬರಿ, ಜೀರಿಗೆ, ಕಾಳುಮೆಣಸು, ಮೆಂತ್ಯೆ ಕಾಳು, ಸಾಸಿವೆ ಹಾಕಿ ಹುರಿಯಿರಿ. ನಂತರ ಮೆಣಸನ್ನು ಹಾಕಿ 2-3 ನಿಮಿಸಿ ಹುರಿಯಿರಿ. ಈ ಎಲ್ಲ ಮಿಶ್ರಣದ ಜತೆ ಸ್ವಲ್ವ ಹುಳಿ, ಬೆಲ್ಲ, ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ನಲ್ಲಿ ಪೇಸ್ಟ್ ಮಾಡಿ.

ಇನ್ನೊಂದು ಪಾತ್ರೆಯಲ್ಲಿ ತುಪ್ಪದಲ್ಲಿ ನೆನೆಯಲು ಇಟ್ಟಿದ್ದ ಚಿಕನ್ ಹಾಕಿ ಹಸಿ ವಾಸನೆ ಹೋಗುವವರೆಗೆ ಬೇಯಿಸಿ. ನಂತರ ಆ ಪಾತ್ರೆಯಿಂದ ಚಿಕನ್ ನನ್ನು ಹೊರ ತೆಗೆದು ಇನ್ನೂ ಸ್ವಲ್ಪ ತುಪ್ಪ ಸೇರಿಸಿ ಪೇಸ್ಟ್ ಮಾಡಿದ್ ಪಾಕವನ್ನು ಹಸಿ ವಾಸನೆ ಹೋಗುವವರೆಗೆ ಕೈಯಾಡಿಸಿ. ನಂತರ ಅದಕ್ಕೆ ಬೇಯಿಸಿಕೊಟ್ಟ ಕೋಳಿಯನ್ನು ಹಾಕಿ ಮಿಶ್ರಣ ಮಾಡುತ್ತ ಹೋಗಿ. ಮಿಶ್ರಣ ಕೋಳಿ ಮಾಂಸಕ್ಕೆ ಚೆನ್ನಾಗಿ ಅಂಟಿಕೊಳ್ಳುವವರೆಗೆ ಕೈಯಾಡಿಸಿ. ನಂತರ ತುಪ್ಪದಲ್ಲಿ ಒಗ್ಗರಣೆಯನ್ನು ಕೊಡಿ. ಇದೀಗ ಬಿಸಿ ಬಿಸಿಯಾದ ರುಚಿಕರವಾದ ಚಿಕನ್ ಗೀ ರೋಸ್ಟ್ ಸವಿಯಲು ಸಿದ್ದ.