ಈಗಾಗಲೇ ಹಲವು ಬಗೆಯ ರೈಸ್ ಬಾತ್ ಗಳನ್ನು ತಯಾರಿಸಲಾಗುತ್ತದೆ. ಎಲ್ಲ ಬಾತ್ ಗಳು ಅವುಗಳದ್ದೇ ಆದ ರುಚಿಯನ್ನು ಹೊಂದಿರುತ್ತವೆ. ಇಂತಹ ಬಾತ್ ಗಳ ನಡುವೆ ಮೆಂತ್ಯ ಸೊಪ್ಪಿನ ಬಾತ್ ಕೂಡ ಒಂದಾಗಿದ್ದು, ಇದು ಬೇಸಿಗೆಯ ದಿನಗಳಲ್ಲಿ ಆರೋಗ್ಯಕ್ಕೂ ಒಳ್ಳೆಯದಾಗಿದೆ. ಹಾಗಾದರೆ ಮೆಂತ್ಯ ಸೊಪ್ಪಿನ ಬಾತ್ ತಯಾರಿಸುವುದು ಹೇಗೆ ಎಂದು ಆಲೋಚಿಸುತ್ತಿದದ್ದೀರಾ? ಇಲ್ಲಿದೆ ಅದಕ್ಕೆ ಪದಾರ್ಥಗಳು ಮತ್ತು ಮಾಡುವ ವಿಧಾನ.
ಬೇಕಾಗುವ ಪದಾರ್ಥಗಳು
ಮೆಂತ್ಯ ಸೊಪ್ಪು- ಎರಡು ಕಟ್ಟು
ಬೆಳ್ಳುಳ್ಳಿ-2
ಮೆಣಸಿನಕಾಯಿ- 10
ಕರಿಮೆಣಸು- 4
ಕಾಯಿತುರಿ- ಸ್ವಲ್ಪ
ಕೊತ್ತಂಬರಿಸೊಪ್ಪು- ಸ್ವಲ್ಪ
ಹಸಿಶುಂಠಿ- ಒಂದು ತುಂಡು
ಈರುಳ್ಳಿ- 1
ಮಾಡುವ ವಿಧಾನ ಹೀಗಿದೆ...
ಮೇಲಿನ ಪದಾರ್ಥಗಳಲ್ಲಿ ಮೆಂತ್ಯ ಸೊಪ್ಪನ್ನು ಹೊರತು ಪಡಿಸಿ ಉಳಿದ ಎಲ್ಲ ಮಸಾಲೆ ಪದಾರ್ಥಗಳನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿಟ್ಟುಕೊಳ್ಳಿ. ಮತ್ತೊಂದೆಡೆ ಹಾಕುವ ಅಕ್ಕಿಯ ಎರಡರಷ್ಟು ನೀರನ್ನು ಕುದಿಸಿಟ್ಟುಕೊಳ್ಳಿ. ಮೊದಲಿಗೆ ಕುಕ್ಕರ್ ನಲ್ಲಿ ಸ್ವಲ್ಪ ಎಣ್ಣೆ ಹಾಕಿ ನಂತರ ಸ್ವಲ್ಪ ಈರುಳ್ಳಿ ಚೂರು ಹಾಕಿ ಬಾಡಿಸಿ ಅದಕ್ಕೆ ಮೆಂತೆ ಸೊಪ್ಪನ್ನು ಹಾಕಿ ಚೆನ್ನಾಗಿ ಬಾಡಿಸಬೇಕು. ಇದಕ್ಕೆ ಚೂರು ಲವಂಗ, ಏಲಕ್ಕಿ ಪುಡಿಯನ್ನು ಸೇರಿಸಿ ಜತೆಗೆ ರುಬ್ಬಿಟ್ಟ ಮಸಾಲೆ ಪದಾರ್ಥಗಳನ್ನು ಹಾಕಿ ಬಳಿಕ ನೆನೆಸಿಟ್ಟ ಅಕ್ಕಿಯನ್ನು ಹಾಕಬೇಕು. ಆ ನಂತರ (ಒಂದು ಕಪ್ಗೆ ಎರಡು ಕಪ್ಗೆ ಎರಡು ಕಪ್ನಂತೆ) ಬಿಸಿ ನೀರನ್ನು ಹಾಕಿ ಮಿಕ್ಸ್ ಮಾಡಿ ಕುಕ್ಕರ್ ಮುಚ್ಚಳ ಮುಚ್ಚಿ 2 ವಿಷಲ್ ಕೂಗಿಸಿ ಇಳಿಸಿದರೆ ಮೆಂತ್ಯ ಸೊಪ್ಪಿನ ಬಾತ್ ಸವಿಯಲು ಸಿದ್ಧವಾಗಲಿದೆ.