ಬೆಳಗ್ಗಿನ ಉಪಹಾರಕ್ಕೆ ಮಾಡಿ ಸವಿಯಿರಿ ಆರೋಗ್ಯಕರ ‘ಓಟ್ಸ್ ಇಡ್ಲಿ’

ಬೆಳಗ್ಗಿನ ಉಪಹಾರಕ್ಕೆ ಮಾಡಿ ಸವಿಯಿರಿ ಆರೋಗ್ಯಕರ ‘ಓಟ್ಸ್ ಇಡ್ಲಿ’

YK   ¦    Feb 02, 2018 04:27:12 PM (IST)
ಬೆಳಗ್ಗಿನ ಉಪಹಾರಕ್ಕೆ ಮಾಡಿ ಸವಿಯಿರಿ ಆರೋಗ್ಯಕರ ‘ಓಟ್ಸ್ ಇಡ್ಲಿ’

ಓಟ್ಸ್ ಇಡ್ಲಿಯನ್ನು ಬೆಳಿಗ್ಗಿನ ಉಪಹಾರಕ್ಕೆ ಅತೀ ಬೇಗನೇ ತಯಾರಿಸಬಹುದು. ಅದಲ್ಲದೆ ಓಟ್ಸ್ ಇಡ್ಲಿ ದೇಹಕ್ಕೆ ಆರೋಗ್ಯಕರವಾಗಿರುತ್ತದೆ. ಇದು ಸ್ವಾದಿಷ್ಟ ಮತ್ತು ಪೌಷ್ಠಿಕವಾದ ಆಹಾರವಾದುದರಿಂದ ಯುವಜನತೆಗಂತೂ ಅನಿವಾರ್ಯವಾದ ಉಪಾಹಾರವಾಗಿಬಿಟ್ಟಿದೆ ಅಂತನೂ ಹೇಳಬಹುದು.

ಬೇಕಾಗುವ ಸಾಮಾಗ್ರಿಗಳು

• 2ಕಪ್ ಓಟ್ಸ್
• ½ ಲೀಟರ್ ಮೊಸರು
• 1ಟೀ ಚಮಚ ಸಾಸಿವೆ
• 1 ಟೀ ಚಮಚ ಉದ್ದಿನ ಬೇಳೆ
• 1/2 ಟೀ ಚಮಚ ದಾಲ್
• 1/2 ಟೀ ಚಮಚ ಎಣ್ಣೆ
• 2 ಟೀ ಚಮಚ ಕಟ್ ಮಾಡಿದ ಹಸಿಮೆಣಸಿನ ಕಾಯಿ
• 1 ಕಪ್ ತುರಿದ ಕ್ಯಾರೇಟ್
• 2 ಟೀ ಚಮಚ ಕಟ್ ಮಾಡಿದ ಕೊತ್ತಂಬರಿ
• 1/2 ಟೀ ಚಮಚ ಹರಿಸಿನ ಪುಡಿ
• 2 ಟೀ ಚಮಚ ಉಪ್ಪು

ಮಾಡುವ ವಿಧಾನ: ಒಂದು ಬಣಾಲೆಯಲ್ಲಿ ಓಟ್ಸ್ ನ್ನು ಬ್ರೌನ್ ಆಗುವವರೆಗೆ ಕರಿದು ಮಿಕ್ಸ್ ನಲ್ಲಿ ಪುಡಿ ಮಾಡಿ ಇಟ್ಟುಕೊಳ್ಳಿ. 

ಇನ್ನೊಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಉದ್ದಿನ ಬೇಳೆ, ದಾಲ್ ಹಾಕಿ ಕರಿಯಿರಿ. ಇದಕ್ಕೆ ಕಟ್ ಮಾಡಿ ಇಟ್ಟುಕೊಂಡ ಹಸಿಮೆಣಸಿಕಕಾಯಿ, ಕೊತ್ತಂಬರಿ, ಹುರಿದ ಕ್ಯಾರೇಟ್, ಹರಿಸಿನ ಪುಡಿ ಹಾಕಿ ಫ್ರೈ ಮಾಡಿ. ಇದಕ್ಕೆ ಹುರಿದಿಟ್ಟುಕೊಂಡ ಓಟ್ಸ್ ಹಾಕಿ ಅದಕ್ಕೆ ಮೊಸರು ಹಾಕಿ ಮಿಕ್ಸ್ ಮಾಡಿ. ಯಾವುದೇ ಕಾರಣಕ್ಕೂ ನೀರನ್ನು ಹಾಕಬೇಡಿ. ಬೇಕಾದಲ್ಲಿ ಮಿಶ್ರಣಕ್ಕೆ ಮೊಸರನ್ನು ಹಾಕಿ ಮಿಕ್ಸ್ ಮಾಡಿ.

ನಂತರ ಇಡ್ಲಿ ಬೇಯಿಸುವ ಪಾತ್ರೆಯಲ್ಲಿ ಮಿಶ್ರವನ್ನು ಹಾಕಿ 15 ನಿಮಿಷ ಬೇಯಿಸಿ. ನಂತರ ಈರುಳ್ಳಿ ಚಟ್ನಿ ಜತೆ ಓಟ್ಸ್ ಇಡ್ಲಿಯನ್ನು ಸವಿಯಿರಿ.