ಯುಗಾದಿ ಹಬ್ಬದೂಟಕ್ಕೆ ಇರಲಿ ಚಕ್ಕುಲಿ, ಕರ್ಜಿಕಾಯಿ..

ಯುಗಾದಿ ಹಬ್ಬದೂಟಕ್ಕೆ ಇರಲಿ ಚಕ್ಕುಲಿ, ಕರ್ಜಿಕಾಯಿ..

LK   ¦    Mar 15, 2018 11:44:56 AM (IST)
ಯುಗಾದಿ ಹಬ್ಬದೂಟಕ್ಕೆ ಇರಲಿ ಚಕ್ಕುಲಿ, ಕರ್ಜಿಕಾಯಿ..

ಯುಗಾದಿ ಹಬ್ಬ ಬರುತ್ತಿದೆ. ಈ ಹಬ್ಬದಲ್ಲಿ ಸಿಹಿ ಮತ್ತು ಖಾರ ತಿನಿಸುಗಳಿಗೆ ಹೆಚ್ಚಿನ ಆದ್ಯತೆ. ಹಬ್ಬದ ಸಂದರ್ಭದಲ್ಲಿ ಮನೆಯಲ್ಲಿಯೇ ಯಾವುದಾದರೊಂದು ತಿನಿಸುಗಳನ್ನು ಮಾಡಿ ಸವಿಯುವ ಮಜಾವೇ ಬೇರೆ. ಪಾಯಸ, ಚಿತ್ರಾನ್ನ, ಪುಳಿಯೋಗರೆ ಜತೆಗೆ ಗರಿಗರಿ ಅಕ್ಕಿಯ ಚಕ್ಕುಲಿ, ಕರ್ಜಿಕಾಯಿ ಇದ್ದರೆ ಇನ್ನಷ್ಟು ಮಜಾ ಇರುತ್ತದೆ.

ಹಾಗಾದರೆ ಗರಿ ಗರಿ ಚಕ್ಕುಲಿ ಮತ್ತು ಕರ್ಜಿಕಾಯಿಯನ್ನು ಮಾಡುವುದಾದರೂ ಹೇಗೆ? ಎಂದು ಯೋಚಿಸುತ್ತಿದ್ದೀರಾ ಇಲ್ಲಿದೆ ತಯಾರಿಸುವ ವಿಧಾನಗಳು.

ಗರಿಗರಿ ಚಕ್ಕುಲಿ ತಯಾರಿಸಲು ಏನೆಲ್ಲಾ ಬೇಕು:

ಅಕ್ಕಿ ಹಿಟ್ಟು -ಒಂದು ಕಪ್
ಹುರಿಗಡಲೆ ಹಿಟ್ಟು -ಮೂರು ಟೀ ಚಮಚ
ಎಳ್ಳು ಸ್ವಲ್ಪ,ಇಂಗು ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು,ಎಣ್ಣೆ

 

ಚಕ್ಕುಲಿ ತಯಾರಿಸುವುದು ಹೇಗೆ:

ಅಕ್ಕಿಹಿಟ್ಟನ್ನು ಸ್ವಲ್ಪ ಬಿಸಿ ಮಾಡಿ ಅದಕ್ಕೆ ಸ್ವಲ್ಪ ಹುರಿಗಡಲೆ ಹಿಟ್ಟು, ಎಳ್ಳು,ಇಂಗು, ಉಪ್ಪು ಮತ್ತು ಸ್ವಲ್ಪ ಎಣ್ಣೆ ಹಾಗೂ ನೀರು ಹಾಕಿ ಕಲಸಿಟ್ಟು ನಂತರ ಚಕ್ಕುಲಿಯ ಒರಳಿನಲ್ಲಿ ಒತ್ತಿ ಎಣ್ಣೆಯಲ್ಲಿ ಕರಿಯಬೇಕು. ಬಳಿಕ ಗರಿಗರಿಯಾಗಿದ್ದಾಗಲೇ ಸೇವಿಸಿದರೆ ಉತ್ತಮವಾಗಿರುತ್ತದೆ.

 ಕರ್ಜಿಕಾಯಿ ಮಾಡಲು ಬೇಕಾಗುವ ಸಾಮಗ್ರಿಗಳು

ಚಿರೋಟಿ ರವೆ ಒಂದು ಕಪ್ಮೈ

ದಾಹಿಟ್ಟು ಒಂದು ಕಪ್

ರುಚಿಗೆ ಅಗತ್ಯ ಇರುವಷ್ಟು ಸಕ್ಕರೆ ಪುಡಿ
ಒಂದು ಕಪ್ ಒಣ ಕೊಬ್ಬರಿ ತುರಿ
ಒಂದು ಕಪ್ ಎಳ್ಳು
2 ಏಲಕ್ಕಿ ಕರಿಯಲು ಎಣ್ಣೆ.

ಮಾಡುವ ವಿಧಾನ: ಚಿರೋಟಿ ರವೆ ಮತ್ತು ಮೈದಾಹಿಟ್ಟಿಗೆ ತುಪ್ಪ ಬೆರಸಿ ಬೇಕಾಗುವಷ್ಟು ನೀರು ಹಾಕಿ ಅರ್ಧ ಗಂಟೆ ಕಲಸಿಡಬೇಕು. ಸಕ್ಕರೆ ಪುಡಿ, ಕೊಬ್ಬರಿ ತುರಿ, ಏಲಕ್ಕಿ, ಎಳ್ಳು ಪುಡಿ ಇವುಗಳನ್ನು ಮಿಕ್ಸ್ ಮಾಡಿ ಹೂರಣ ತಯಾರಿಸಿಟ್ಟುಕೊಳ್ಳಿ. ನಂತರ ಕಲಸಿಟ್ಟ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆ ಮಾಡಿ ಲಟ್ಟಿಸಿ ಅದರೊಳಗೆ ಹೂರಣ ತುಂಬಿ ಎಣ್ಣೆ ಒಳಹೋಗದಂತೆ ಸುತ್ತಲೂ ಅಂಟಿಸಿ ಎಣ್ಣೆಯಲ್ಲಿ ಕರಿಯಬೇಕು.( ಸ್ವಲ್ಪ ಹಾಲು, ನೀರು ಅಂಟಿಸುವುದಕ್ಕೆ ತೆಗೆದುಕೊಳ್ಳಿ) ನಂತರ ತಯಾರು ಮಾಡಿದ ಕರ್ಜಿಕಾಯಿಯನ್ನು ಗಾಳಿಗೆ ತೆಗೆದು ಇಡದಂತೆ ಕವರಿನಲ್ಲಿ ಪ್ಯಾಕ್ ಮಾಡಿ.