ಪೌಡರ್ ಹಾಕದೇ ರಸಂ ತಯಾರಿಸುವುದು ಹೇಗೇ?

ಪೌಡರ್ ಹಾಕದೇ ರಸಂ ತಯಾರಿಸುವುದು ಹೇಗೇ?

YK   ¦    Dec 01, 2019 12:06:13 PM (IST)
ಪೌಡರ್ ಹಾಕದೇ ರಸಂ ತಯಾರಿಸುವುದು ಹೇಗೇ?

ಸೌತ್ ಇಂಡಿಯಾನ್ ಆಹಾರ ಪದ್ಧತಿಯಲ್ಲಿ ರಸಂ ಅನ್ನೋದು ತುಂಬಾನೇ ಮುಖ್ಯವಾಗಿರುವ ಖಾದ್ಯ.  ಅನ್ನ ಹಾಗೂ ಇಡ್ಲಿಯ ಜತೆಗೂ ರಸಂ ಇದ್ದರೆ ಚೆನ್ನಾಗಿರುತ್ತದೆ. ಯಾವುದೇ ಪೌಡರ್ ಇಲ್ಲದೆ 10ನಿಮಿಷದಲ್ಲೇ ರಸಂ ತಯಾರಿಸಬಹುದು. 

ಬೇಕಾಗುವ ಸಾಮಾಗ್ರಿಗಳು
ಟೊಮೆಟೋ-4
ಕಾಯಿಮೆಣಸು-1
ಕಾಳುಮೆಣಸು-4-6
ಶುಂಠಿ-ಸಣ್ಣದು
ಈರುಳ್ಳಿ
ಕೊತ್ತಂಬರಿ ಸೊಪ್ಪು
ಉಪ್ಪು

ಒಗ್ಗರಣೆಗೆ: ತುಪ್ಪ, ಸಾಸಿವೆ, ಉದ್ದಿನ ಬೆಳೆ, ಬೆಳ್ಳುಳ್ಳಿ, ಕರಿಬೇವು ಸೊಪ್ಪು

ಮಾಡುವ ವಿಧಾನ:
ಮೊದಲಿಗೆ ನಾಲ್ಕು ಟೊಮೆಟೋವನ್ನು ಚೆನ್ನಾಗಿ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಒಂದು ಬಾಣಲೆಗೆ ಟೊಮೆಟೋ ರಸವನ್ನು ಹಾಕಿ. ಅದಕ್ಕೆ ಕಟ್ ಮಾಡಿಕೊಂಡ ಈರುಳ್ಳಿ ಹಾಗೂ ಜಜ್ಜಿದ ಶುಂಠಿ, ಕಾಳುಮೆಣಸು ಮತ್ತು ಕಾಯಿಮೆಣಸು ಹಾಕಿ ಕುದಿಸಿ. ಬೇಕಾದಷ್ಟು ನೀರು ಹಾಗೂ ಉಪ್ಪು ಹಾಕಿ. ನಂತರ ತುಪ್ಪದಲ್ಲಿ ಒಗ್ಗರಣೆ ಕೊಡಿ. ಜತೆಗೊಂದು ಉಪ್ಪಿನಕಾಯಿ ಇದ್ದರೆ ಅನ್ನ, ರಸಂ ಯಾವ ಸಮಯಕ್ಕೂ ಸೂಪರ್.