ಅಕ್ಕಿ ರವೆ ಮಿಶ್ರಣದ ಪಕೋಡ ಮಾಡಿ ನೋಡಿ

ಅಕ್ಕಿ ರವೆ ಮಿಶ್ರಣದ ಪಕೋಡ ಮಾಡಿ ನೋಡಿ

LK   ¦    Mar 20, 2018 01:48:27 PM (IST)
ಅಕ್ಕಿ ರವೆ ಮಿಶ್ರಣದ ಪಕೋಡ ಮಾಡಿ ನೋಡಿ

ಪಕೋಡ ಎಲ್ಲರಿಗೂ ಗೊತ್ತಿರುತ್ತದೆ. ಅಷ್ಟೇ ಅಲ್ಲದೆ ಮನೆಯಲ್ಲಿ ಆಗಾಗ್ಗೆ ಮಾಡಿಯೂ ಇರುತ್ತೀರಿ. ಸಾಮಾನ್ಯವಾಗಿ ಕಡ್ಲೆಹಿಟ್ಟಿನಿಂದಲೇ ಹೆಚ್ಚಾಗಿ ಪಕೋಡ ಮಾಡುತ್ತಾರೆ. ಕಡ್ಲೆಹಿಟ್ಟು ಜತೆಗೆ ಅಕ್ಕಿಹಿಟ್ಟು, ರವೆ ಸೇರಿಸಿ ಮಾಡಿದರೆ ಹೇಗಿರಬಹುದು? ಇದನ್ನು ತಿಳಿಯಬೇಕಾದರೆ ಒಮ್ಮೆ ಮಾಡಿನೋಡುವುದು ಒಳ್ಳೆಯದು.

ಬೇಕಾಗುವ ಪದಾರ್ಥಗಳು

ಕಡ್ಲೆಹಿಟ್ಟು- ಒಂದು ಕಪ್

ಅಕ್ಕಿ ಹಿಟ್ಟು- ಸ್ವಲ್ಪ
ಸಣ್ಣರವೆ- 2 ಚಮಚ
ಹಸಿಮೆಣಸಿನ ಕಾಯಿ-2(ಕತ್ತರಿಸಿದ್ದು)
ಅಚ್ಚ ಖಾರದ ಪುಡಿ, ಇಂಗು, ಉಪ್ಪು, ಜತಗೆ ಸಣ್ಣಗೆ ಹಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕರಿಬೇವು,

ಮಾಡುವ ವಿಧಾನ ಹೀಗಿದೆ
ಮೊದಲಿಗೆ ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಸಣ್ಣರವೆಗೆ ಸ್ವಲ್ವ ಕಾದ ಎಣ್ಣೆಯನ್ನು ಹಾಕಿ ಚೆನ್ನಾಗಿ ಕಲಸಬೇಕು. ಆ ನಂತರ ಹದಕ್ಕೆ ತಕ್ಕಂತೆ ನೀರು ಹಾಕಿ ಹದ ಮಾಡಬೇಕು. ನಂತರ ಅಚ್ಚ ಖಾರದ ಪುಡಿ, ಇಂಗು, ಉಪ್ಪು, ಈರುಳ್ಳಿ, ಕೊತ್ತಂಬರಿ ಸೊಪ್ಪು, ಕರಿಬೇವು ಎಲ್ಲವನ್ನು ಅದಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.

ಬಳಿಕ ನಮಗೆ ಹೇಗೆ ಬೇಕೋ ಹಾಗೆ ಉಂಡೆಯಾಕಾರ ಮಾಡಿಕೊಂಡು ಎಣ್ಣೆಯಲ್ಲಿ ಹಾಕಿ ಕರಿಯಬೇಕು. ಆ ನಂತರ ಬಿಸಿಬಿಸಿಯಾಗಿದ್ದಾಗಲೇ ಸೇವಿಸಿದರೆ ಅದರ ಮಜಾವೇ ಬೇರೆಯಾಗಿರುತ್ತದೆ.